ಸ್ಥಳೀಯ ಸುದ್ದಿಗಳು

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭಾವನಾ ಕೆ ಅತ್ಯುನ್ನತ ಪ್ರಶಸ್ತಿಗಳ ಸುರಿಮಳೆ

ಸುದ್ದಿಲೈವ್/ಶಿವಮೊಗ್ಗ

ಇತ್ತೀಚಿಗೆ ಕೇರಳದ ಕಣ್ಣೂರಿನಲ್ಲಿ ನಡೆದ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್ ಸಿ ಐ ಶಿವಮೊಗ್ಗ ಭಾವನ ಲೀಜನ್ ಗೆ ಅತೀ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಲಭಿಸಿತು. “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್, “ಸಮುದಾಯ ಅಭಿವೃದ್ಧಿ” ಕಾರ್ಯಕ್ರಮದಲ್ಲಿ ವಿನ್ನರ್, “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್,
ಅತ್ಯುತ್ತಮ ಸದಸ್ಯೆ ವಿನ್ನರ್, ಅತ್ಯುತ್ತಮ ಲೀಜನ್ ರನ್ನರ್ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಅನೇಕ ವಿಭಾಗಗಳಲ್ಲಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮೂರು ಹೊಸ ಲಿಜನ್ ಗಳನ್ನು ಶಿವಮೊಗ್ಗ, ಸೊರಬ, ತರೀಕೆರೆಯಲ್ಲಿ ಸ್ಥಾಪಿಸಿ, ಸಂಸ್ಥೆಗೆ 9 ಪಿಪಿಎಫ್ ಗಳನ್ನ ನೀಡಿರುವುದನ್ನು ಅಭಿನಂದಿಸಲಾಯಿತು.

ಅನೇಕ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ, ಅಶಕ್ತರಿಗೆ ವೀಲ್ ಚೇರ್ ದೇಣಿಗೆ, ವಿದ್ಯಾರ್ಥಿ ವೇತನ, ಆಸ್ಪತ್ರೆಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು, ಚಟುವಟಿಕೆಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಆಯೋಜಿಸಿ, ರಾಷ್ಟ್ರೀಯ ಸಮ್ಮೇಳನದಲ್ಲಿ ಸರ್ವರಿಂದಲೂ ಅಭಿನಂದನೆಗೆ ಪಾತ್ರವಾಯಿತು.

ಪ್ರಶಸ್ತಿ ಪುರಸ್ಕಾರಗಳನ್ನು ರಾಷ್ಟ್ರೀಯ ಅಧ್ಯಕ್ಷರಾದ ಪ್ರೊಫೆಸರ್ ಸೀನಿಯರ್ ವರ್ಗಿಸ್ ವೈದ್ಯನ್ ‍ರವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶೀಲಾ ರವರು ನೀಡಿದರು.

ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ನವೀನ ಅಮೀನ್, ರಾಷ್ಟ್ರೀಯ ನಿರ್ದೇಶಕರಾದ ಚಿತ್ರ ಕುಮಾರ್, ಪೂರ್ವ ರಾಷ್ಟ್ರೀಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
SCI ಶಿವಮೊಗ್ಗ ಭಾವನಾದ ಅಧ್ಯಕ್ಷೆ ಸೀನಿಯರ್ ಸುರೇಖ ಮುರಳೀಧರ್, ಪುಷ್ಪಾ ಎಸ್. ಶೆಟ್ಟಿ, ರತ್ನ ಲಕ್ಷ್ಮೀನಾರಾಯಣ್, ಮೃದುಲಾ ಮಂಜುನಾಥ್, ವಾಣಿ ರತ್ನಾಕರ್ ಇನ್ನೂ ಮುಂತಾದ 27 ಸದಸ್ಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ನೂತನ‌ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸೀನಿಯರ್ ಚಿತ್ರಕುಮಾರ್ ರವರಿಗೂ, ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುಷ್ಪಶೆಟ್ಟಿರವರಿಗೂ ಹಾಗೂ ಎಲ್ಲಾ ರಾಷ್ಟ್ರೀಯ ಉಪಾಧ್ಯಕ್ಷರುಗಳಿಗೂ ‍ಭಾವನಾತಂಡವು ಅಭಿನಂದನೆ ಸಲ್ಲಿಸುತ್ತದೆ.

ಇದನ್ನೂ ಓದಿ-https://suddilive.in/archives/10465

Related Articles

Leave a Reply

Your email address will not be published. Required fields are marked *

Back to top button