ವೇದಿಕೆ ಮೇಲೆ ನೇರಾ ನೇರಾ ಮಾತನಾಡಿದ ಕಿಮ್ಮನೆ-ಆರ್ ಎಂ ಎಂಗೆ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಸ್ಪಷ್ಟನೆ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ರಾಜಕಾರಣದಲ್ಲಿ ಆರ್‌ಎಂ ಮಂಜುನಾಥ ಗೌಡ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಬ್ಬರು ಗಣ್ಯ ರಾಜಕಾರಣಗಳು. ಅಷ್ಟೇ ಚೆನ್ನಾಗಿ ವಿರೋಧ ವ್ಯಕ್ತಪಡಿಸಿದ ಕಿಮ್ಮನೆ ರತ್ನಾಕರ್ ಹಾಗೇ ಪಕ್ಷದ ಸೂಚನೆಯಂತೆ ಮತ್ತೆ ಹೊಂದಾಣಿಕೆ ಮಾಡಿಕೊಂಡು ಆರ್‌ಎಂ ಎಂ ಜೊತೆ ಹೆಜ್ಜೆ ಇಡುತ್ತಾ ಬಂದಿದ್ದಾರೆ.
ಅವರು ಇಂದು ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ ಡಾ.ಆರ್.ಎಂ ಮಂಜುನಾಥ್ ಗೌಡರಿಗೆ ಹೃದಯ ಸ್ಪರ್ಶಿ ಅಭಿನಙದನಾ ಸಮಾರಂಭದಲ್ಲಿ ಭಾಗಿಯಾಗಿ ಇಬ್ಬರ ನಡುವಿನ ಭಿನ್ನಾಭಿಪ್ರಾಯವಿದ್ದಾಗ ಆರ್ ಎಂ ಎಂ ಗೆ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಆರ್ ಎಂ ಎಂ ರನ್ನ ವಿರೋಧಿಸುವ ವೇಳೆ ನೇರವಾಗಿ ವಿರೋಧಿಸಿರುವೆ. ಆದರೆ ಅವರ ಸಂಕಷ್ಟದ ಕಾಲದಲ್ಲಿ ಬೆನ್ನಿಗೆ ಚೂರಿಗೆ ಹಾಕುವ ಕೆಲಸ ನಾನು ಮಾಡಿಲ್ಲ. ನಾನು ಹೆಚ್ಚಾಗಿ ವಿರೋಧಿಸಿರುವುದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರನ್ನ ಎಂದು ಸ್ಪಷ್ಟಪಡಿಸಿದರು.
ಆರಗ ಜ್ಞಾನೇಂದ್ರರ ವಿರುದ್ಧದ ವಿರೋಧಗಳು ಸಹ ವ್ಯಕ್ತಿಗತದ್ದಲ್ಲ. ಮತ್ತು ಅವರ ವಿರುದ್ಧ ತಾತ್ವಿಕ ವಿರೋಧಗಳು ಮಾತ್ರ. ನಾನು ಆರ್ ಎಂ ಎಂ ವಿರುದ್ಧ ಮಾತನಾಡೇ ಇಲ್ಲ. ಹಾಗಾಗಿ ಇನ್ನೂ ನಾನು ಅವರ ವಿರುದ್ಧ ಇದ್ದೇನೆ ಎಂಬ ಸಣ್ಣ ಅನುಮಾನ ಕೆಲವ ತಲೆಯಲ್ಲಿ ಅದಕ್ಕೆ ನಾನು ಜವಬ್ದಾರಿಯಲ್ಲ ಎಂದು ವೇದಿಜೆ ಮೇಲೆ ಉಪಸ್ಥಿತರಿದ್ದ ಮಂಜುನಾಥ್ ಗೌಡರಿಗೆ ನೇರವಾಗಿ ನುಡಿದರು.
ಆಯನೂರು ಹೇಳಿಕೆ
ಕೆಟ್ಟ ರಾಜಕಾರಣ ಇರುವ ಕ್ಷೇತ್ರ ಸಹಕಾರಿ ಕ್ಷೇತ್ರ, ಅಲ್ಲಿ ರಾಜಕಾರಣ ಕಲಿತರೆ ಎಲ್ಲಿ ಬೇಕಾದರೂ ರಾಜಕಾರಣ ಮಾಡಬಹುದು ಎಂದು ಮಾಜಿ ಎಂಎಲ್ ಸಿ ಆಯನೂರು ಮಂಜುನಾಥ್ ಹೇಳಿದರು.
ನಾನು ಲೋಕಸಭಾ ಸದಸ್ಯರಾದಗ ಅವರ ವಿರುದ್ಧ ಒಂದು ಕಲ್ಲು ತೂರಿದ್ದೆ. ಅರುಣ್ ಜೇಟ್ಲಿಗೆ ಇವರ ವಿರುದ್ಧ ಪತ್ರ ಬರೆದಿದ್ದೆ ಕ್ರಮ ಕೈಗೊಳ್ಳಿ ಎಂದಿದ್ದೆ. ಆದರೆ ಅನೇಕ ಏಟಿನಿಂದ ಒಂದು ಕಲ್ಲು ಪ್ರತಿಮೆ ಆದಂತೆ ಗೌಡರು ಪ್ರತಿಮೆಯಾಗಿ ಹೊರಹೊಮ್ಮಿದ್ದಾರೆ. ಸವಾಲನ್ನ ಸ್ವೀಕರಿಸಿ ನಡೆಯುವವರು ಉತ್ತುಂಗಕ್ಕೇ ಏರುತ್ತಾರೆ ಎಂದರು.
ಬೇಳೂರು ಮಾತು
ತನಿಖೆಗಳನ್ನ ಎದುರಿಸಿ ವೇದಿಕೆ ಮೇಲೆ ರಾಜಾಸೀನರಾಗಿರವ ಆರ್ಎಂ ಮಂಜುನಾಥ್ ಗೌಡರಿಗೆ ಮುಂದಿನ ದಿನಗಳಲ್ಲಿ ಉಜ್ವಲವಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಶುಭಹಾರೈಸಿದ್ದಾರೆ.
ರಾಜಕೀಯದಲ್ಲಿ ನನ್ನನ್ನೂ ತುಳಿದಿದ್ದರು. ಆದರೆ ಜನ ಆಶೀರ್ವಾದ ಮಾಡಿದ್ರು, ಎಂತೆಂಥ ತನಿಖೆ ಎದುರಿಸಿ ಸಹಕಾರಿ ಕ್ಷೇತ್ರದಲ್ಲಿ ಯಡಿಯೂರಪ್ಪ ಕೈಹಾಕಿಲ್ಲ ಅವರ ಮಕ್ಕಳ ದುರಾಲೋಚನೆಯಿಂದ ನಡೆದಿದೆ. ಮೊನ್ನೆ ಬಿಎಸ್ ವೈ ಸಿಕ್ಕಿದಾಗ ಅವರ ಕಾಲಿಗೆ ಬಿದ್ದು 10 ವರ್ಷದ ರಾಜಕೀಯ ಭವಿಷ್ಯನೇ ತೆಗೆದಿದ್ದೀರಿ ಎಂದಿದ್ದೆ. ನನ್ನದು ನೇರಾ ನೇರ ಎಂದರು.
ಸಾಗರ ಕ್ಷೇತ್ರದಲ್ಲಿ ಟಿಕೇಟ್ ಆಗಲು ಆರ್ಎಂ ಎಂ ಬೆಂಬಲಿಸಿದ್ದರು. ರಾಜಕೀಯ ನಿಂತ ನೂರಲ್ಲ ಅವರಿಗೆ ಅವಕಾಶವಿದೆ. ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ಎಂದರು.
ಇದನ್ನೂ ಓದಿ-https://suddilive.in/archives/2587
