ಪಾತಾಳಿ ಗ್ಯಾಂಗ್ ನ ಸೇಡಿನ ಅಟ್ಯಾಕ್ ಗೆ ಮಲ್ಲ ಮರ್ಡರ್!

ಸುದ್ದಿಲೈವ್/ಶಿವಮೊಗ್ಗ

ಎರಡು ವರ್ಷದ ಹಿಂದಿನ ಸೇಡಿಗೆ ಯುವಕನೋರ್ವ ಬರ್ಬರ ಹತ್ಯೆಯಾಗಿದ್ದಾನೆ. ಅಕ್ಕನ ಸಾವಿನ ಸೇಡು ತೀರಿಸಿಕೊಂಡ ಗ್ಯಾಂಗ್ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಪ್ಲೈಓವರ್ ಬಳಿ ಯುವಕನ ಬರ್ಬರ ಹತ್ಯೆಯಾಗಿದೆ. ಬೈಕ್ ಮೇಲೆ ಹೋಗುತ್ತಿದ್ದ ಯುವಕನ ಬೈಕ್ ಗೆ ಗುದ್ದಿ ಕೆಳಗೆ ಬಿಳಿಸಿದ ಹಂತಕರು. ಬೈಕ್ ಮೇಲಿಂದ ಬಿದ್ದ ಯುವಕನ ಮೇಲೆ 7 ಜನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಯುವಕನ ಮರ್ಡರ್ ಮಾಡಿದ್ದಾರೆ.. ಕೊಲೆಯ ಹಿಂದೆ ಎರಡು ವರ್ಷದ ಹಿಂದಿನ ದ್ವೇಷವಿತ್ತು..
ನಿನ್ನೆ ರಾತ್ರಿ ಶಿವಮೊಗ್ಗದ ಹೊರವಲಯದ ಚಿಕ್ಕಲ್ ರಸ್ತೆಯಲ್ಲಿರುವ ಶಿವಶಂಕರ್ ವೈನ್ ಶಾಪ್ ಬಳಿ ವ್ಯಕ್ತಿಯೋರ್ವನನ್ನ ಮರ್ಡರ್ ಆಗಿದೆ.. ಕೊಲೆಯಾದ ಯುವಕನ ಹೆಸರು ಮಲ್ಲೇಶ್ ಯಾನೆ ಮಲ್ಲ(35). ಶಿವಮೊಗ್ಗದ ಧರ್ಮರಾಯನ ಕೇರಿ ನಿವಾಸಿಯಾಗಿದ್ದಾನೆ.
ಚಿಕ್ಕಲ್ ನ ಫ್ಲೈ ಓವರ್ ಬಳಿಯ ಶಿವಶಂಕರ್ ವೈನ್ ಶಾಪ್ ಬಳಿಯ ಚಾನೆಲ್ ಏರಿಯಾದಲ್ಲಿ ಮಲ್ಲೇಶ್ ಬೈಕ್ ನಲ್ಲಿ ಬರುವಾಗ ಹಿಂಬದಿ ಬೈಕ್ ನಲ್ಲಿ ಬಂದ ಮೂವರು ಡಿಕ್ಕಿ ಹೊಡೆಸಿದ್ದಾರೆ. ಮಲ್ಲೇಶ್ ಕೆಳಗೆ ಬಿದ್ದಿದ್ದಾನೆ. ಮಲ್ಲೇಶ್ ಕೆಳಗೆ ಬಿದ್ದಿದ್ದನ್ನ ನೋಡಿ ಸ್ಥಳೀಯರು ರಸ್ತೆ ಅಪಘಾತವೆಂದು ಘಟನಾ ಸ್ಥಳಕ್ಕೆ ಓಡಿದ್ದಾರೆ. ಆದರೆ ಗಲಾಟೆಗೆ ಮುಂದಾದ ಬೈಕ್ ಸವಾರರು ಮಲ್ಲರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಈ ಕೊಲೆ ಸಂಬಂಧಿಸಿದಂತೆ ಈಗಾಗಲೇ ಕೋಟೆ ಪೊಲೀಸರು ಮೃತ ಅಕ್ಕ ಸ್ವಾತಿ ಸಹೋದರ ಕಾರ್ತೀಕ್, ಶ್ರೇಯಸ್ಸು ಯಾನೆ ಪಾತಾಳಿ, ವೇಣುಗೋಪಾಲ್, ಕಿರಣ್ ನಾಲ್ವರನ್ನು ವಶಕ್ಕೆ ಪಡೆದಿದ್ದಾರು. ಕೊಲೆಗೆ ಸಂಬಂಧಿಸಿದಂತೆ ಇನ್ನೂ ಮೂವರು ಎಸ್ಕೇಪ್ ಆಗಿದ್ದರು. ಒಟ್ಟು ಏಳು ಜನರು ಸೇರಿ ಮಲ್ಲೇಶನ್ ಮರ್ಡರ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಏಳಕ್ಕೆ ಏಳು ಜನರನ್ನ ಪೊಲೀಸರು ವಶಕ್ಕೆ ಪಡೆಯಲಾಗಿದೆ.
ನಾಪತ್ತೆಯಾಗಿರುವ ಮೂವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿದಿದೆ. ಕಳೆದ ಎರಡು ವರ್ಷದ ಹಿಂದೆ ಅಕ್ಕ ಸ್ವಾತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇವಳ ಸಾವಿಗೆ ಮಲ್ಲೇಶ್ ಕಾರಣವಾಗಿದ್ದನು. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಲಿಂದ ಮಲ್ಲೇಶ್ ನನ್ನು ಬೇಟೆಯಾಡುವುದಕ್ಕೆ ಸಹೋದರ ಕಾರ್ತಿಕ ಮತ್ತು ಆತನ ಸ್ನೇಹಿತರು ಹೊಂಚು ಹಾಕದ್ದರು.
ನಿನ್ನೆ ಅನೇಕ ತಿಂಗಳ ಬಳಿಕ ಮಲ್ಲೇಶ್ ಇವರ ಕಣ್ಣಿಗೆ ಬಿದ್ದಿದ್ದಾನೆ. ಈತನ ಚಲನವಲನ ಗಮನಿಸಿದ ಕಿರಣ ಕೂಡಲೇ ಕಾರ್ತೀಕ್ ಗೆ ಮಾಹಿತಿ ನೀಡಿದ್ದಾನೆ. ಬಳಿಕ ಕಾರ್ತಿಕ ಮತ್ತು ಆತನ ಗ್ಯಾಂಗ್ ಅಲ್ಲಿಗೆ ಮಾರಕಾಸ್ತ್ರ ಸಮೇತವಾಗಿ ಎಂಟ್ರಿ ಕೊಟ್ಟಿದ್ದೆ. ಮೊದಲು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಬಳಿಕ ಕಲ್ಲು ಎತ್ತಿ ಹಾಕಿ ಮಲ್ಲೇಶ್ ನನ್ನು ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದರು.
ಪಾರ್ವತಿ, ಮೃತನ ಸಹೋದರಿ ಹೇಳಿಕೆ
ಕಳೆದ ಎರಡು ವರ್ಷದ ಹಿಂದೆ ಖಾಸಗಿ ಶಾಲೆಯ ಶಿಕ್ಷಕಿ ಸ್ವಾತಿ ಯಾನೆ ಜ್ಯೋತಿ ಎನ್ನುವ ಯುವತಿಯನ್ನು ಒನ್ ಸೈಡ್ ಲವ್ ಮಾಡುತ್ತಿದ್ದ ಮಲ್ಲೇಶ್. ಸ್ವಾತಿಗೆ ಪದೇ ಪದೇ ಬೆನ್ನು ಬಿದ್ದು ಮದುವೆಗೆ ಒತ್ತಾಯಿಸಿದ್ದನು. ಈ ಮಲ್ಲೇಶ್ ನ ನಿಂತರ ಕಾಟ ತಾಳಲಾರದೇ ಸ್ವಾತಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಡೆತ್ ನೋಟ್ ನಲ್ಲಿ ಮಲ್ಲೇಶ್ ಹೆಸರು ಉಲ್ಲೇಖ ಮಾಡಿದ್ದಳು. ಈ ಹಿನ್ನಲೆಯಲ್ಲಿ ಮಲ್ಲೇಶ್ ನನ್ನು ಪೊಲೀಸರು ಬಂಧಿಸಿದ್ದರು. ಕೆಲವು ತಿಂಗಳು ಜೈಲಿನಲ್ಲಿದ್ದ ಮಲ್ಲೇಶ್ ಬೇಲ್ ಮೇಲೆ ಹೊರಗೆ ಬಂದಿದ್ದನು. ಬೇಲ್ ಮೇಲೆ ಬಂದ ಮಲ್ಲೇಶ್ ಬೆಂಗಳೂರಿನಲ್ಲಿ ವಾಸವಾಗಿದ್ದನು. ದೀಪಾವಳಿ ಹಬ್ಬಕ್ಕೆಂದು ತಾಯಿ ನೋಡಲು ಶಿವಮೊಗ್ಗಕ್ಕೆ ಬಂದಿದ್ದ ಮಲ್ಲೇಶನು. ಮಲ್ಲೇಶನು ಶಿವಶಂಕರ್ ವೈನ್ ಶಾಪ್ ಗೆ ಎಣ್ಣೆ ಹೊಡೆಯಲು ಹೋಗಿದ್ದನು. ಎಣ್ಣೆ ಕುಡಿದು ಬೈಕ್ ನಲ್ಲಿ ವಾಪಸ್ ಬರುವಾಗ ಮೃತ ಸ್ವಾತಿ ತಮ್ಮ ಕಾರ್ತಿಕ ಮತ್ತು ಆತನ ಆರು ಜನ ಸಹಚರರು ಸೇರಿ ಮಲ್ಲೇಶ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಎರಡು ವರ್ಷದ ಹಿಂದಿನ ಸೇಡನ್ನು ಸಹೋದರ ಕಾರ್ತಿಕ್ ಮಲ್ಲೇಶನ್ ಮರ್ಡರ್ ಮಾಡುವ ಮೂಲಕ ತೀರಿಸಿಕೊಂಡಿದ್ದಾನೆ. ಮೃತ ಸ್ವಾತಿ ಸಹೋದರ ಕಾರ್ತಿಕ್ ಅಕ್ಕ ಸತ್ತ ದಿನವೇ ಮಲ್ಲೇಶನನ್ನು ಮುಗಿಸುವ ಶಪತ ಮಾಡಿದ್ದನು. ಶಪತ ಮಾಡಿದಂತೆ ಮಲ್ಲೇಶನನ್ನು ಸಹೋದರ ಕಾರ್ತಿಕ ಕೊಲೆ ಮಾಡಿದ್ದಾನೆ. ಕಳೆದ ಎರಡು ವರ್ಷದ ಹಿಂದೆ ಅಕ್ಕ ಮೃತಪಟ್ಟ ಸೇಡನ್ನು ನಿನ್ನೆ ದೀಪಾವಳಿಯ ಬಲಿಪಾಡ್ಯದಿನದಂದು ತೀರಿಸಿಕೊಂಡಿದ್ದಾನೆ. ಪ್ರಕರಣದಲ್ಲಿ ಕಾರ್ತಿಕ, ಶ್ರೇಯಸ್ಸು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಹೋದರಿ ಪಾರ್ವತಿ ತಿಳಿಸಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಹೇಳಿಕೆ

ದೀಪಾವಳಿಯ ಹಬ್ಬದ ಸಂಭ್ರಮ ಸಡಗರ ನಗರದಲ್ಲಿತ್ತು. ಎಲ್ಲರೂ ಪಟಾಕಿ ಸಿಡಿಸಿ ಖುಷಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದು. ಈ ವೇಳೆಯಲ್ಲಿ ಹಬ್ಬಕ್ಕೆಂದು ಬಂದ ಯುವಕನನ್ನು ಏಳು ಜನರು ಸೇರಿ ಸ್ಕೇಚ್ ಹಾಕಿ ಮರ್ಡರ್ ಮಾಡಿದ್ದಾರೆ. ಎರಡು ವರ್ಷದ ಸೇಡನ್ನು ಸಹೋದರ ಮತ್ತು ಆತನ ಸ್ನೇಹಿತರು ಸೇರಿ ತೀರಿಸಿಕೊಂಡಿದ್ದಾರೆ. ಎರಡು ವರ್ಷದ ಹಿಂದೆ ಸ್ವಾತಿ ಯಾನೆ ಜ್ಯೋತಿ ಆತ್ಮಹತ್ಯೆಗೆ ಕಾರಣವಾಗಿದ್ದ ಮಲ್ಲೇಶ್ ಪ್ರಕರಣದಲ್ಲಿ ಜೀವ ಕಳೆದುಕೊಂಡಿದ್ದಾನೆ. ಏಳು ಜನ ಆರೋಪಿಗಳನ್ನ ಬಂಧಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ-https://suddilive.in/archives/3103
