ಸ್ಥಳೀಯ ಸುದ್ದಿಗಳು

ಸಂಸದ ರಾಘವೇಂದ್ರರಿಗೆ ಸಾರ್ಥಕ ಸುವರ್ಣ ಅಭಿನಂದನ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಮಲೆನಾಡು ವೀರಶೈವ ಲಿಂಗಾಯತರ ಮಠಾಧೀಶರ ಪರಿಷತ್ತು ವತಿಯಿಂದ ಸಂಸದ ಬಿ.ವೈ.ರಾಘವೇಂದ್ರರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

30 ಮಠಗಳು ಒಂದುಗೂಡಿ ಪರಿಷತ್ತನ್ನ ರಚಿಸಿಕೊಂಡಿದ್ದು, ಅಂದಿನ ಸಿಎಂ ಧರ್ಮಸಿಂಗ್ ನೇತೃತ್ವದ ಸರ್ಕಾರ ಪರಿಷತ್ತು ರಚನೆಗೆ ಅಸ್ತು ಎಂದಿತ್ತು. ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪರಿಷತ್ತು ಇದುವರೆಗೂ ಶ್ರಮಿಸಿದೆ. ಡಿ.08 ರಂದು ಸಂಜೆ 5-30 ಕ್ಕೆ ನವುಲೆಯಲ್ಲಿರುವ ಕನ್ವೆನ್ಷನಲ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮವನ್ನ ಸಾರ್ಥಕ  ಸುವರ್ಣ ಎಂಬ ಹೆಸರಿನಡಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬೆಕ್ಕಿನಕಲ್ಮಠ ಶ್ರೀಗಳಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕೋವಿಡ್, ಅತಿವೃಷ್ಠಿ, ಅನಾವೃಷ್ಠಿಯ ವೇಳೆ ಮಠ ಸಮಾಜದ ಪರವಾಗಿ ನಿಂತಿದೆ. ಶಿವಮೊಗ್ಗ ಅಭಿವೃದ್ಧಿಗೆ ಸಂಸದ ರಾಘವೇಂದ್ರ ಮಾಡಿರುವ ಕೆಲಸ ಇಡೀ ದೇಶ ಗುರುತಿಸುವಂತೆ ಮಾಡಿದ್ದಾರೆ ಎಂದರು.

ಈ ಹಿನ್ನಲೆಯಲ್ಲಿ ಸಂಸದರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ಮ ತಾವೇ ವಹಿಸಿಕೊಳ್ಳುತ್ತಿರುವುದಾಗಿ ತಿಳಿಸಿದ ಶ್ರೀಗಳು, ಹುಂಚದ ಹೊಂಬುಜ ಜೈನಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ಬಾಮಿಗಳು, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಗಳು, ನಿಟ್ಟೂರಿನ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಮಹಾಸ್ವಾಮಿಗಳು ಭಾಗಿಯಾಗಲಿದ್ದಾರೆ. ಸಂಸದರಿಗೆ ಅಭಿನಂದನಾ ಕಾರ್ಯಕ್ರಮ ಜರುಗಲಿದೆ ಎಂದರು.

ಜಡೆ ಶ್ರೀಗಳು , ಬಿಳಕಿ, ಎಸ್.ಎಸ್.ಜ್ಯೋತಿ ಪ್ರಕಾಶ್, ಡಾ.ಧನಂಜಯ್ ಸರ್ಜಿ, ಮಾಜಿ ಪಾಲಿಕೆ ಸದಸ್ಯ ವಿಶ್ವಾಸ್, ಶಾಂತವೀರಪ್ಪ ಮತ್ತು ಮೊದಲಾದವರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button