ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್ ಎಂ ಎಂ6 ನೇ ಬಾರಿ ಆಯ್ಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ ಆಯ್ಕೆಯಾಗಿದ್ದಾರೆ. ಇಂದು ನಡೆದ ಸಭೆಯಲ್ಲಿ ಆರ್ ಎಂ ಎಂ 6 ನೇ ಬಾರಿಗೆ ಅಧ್ಯಕ್ಷಗಿರಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ರುದ್ರಪ್ಪರವರು ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ಅರ್ಜಿ ಸಲ್ಲಿಸಿದ್ದ ಕಾರಣ ಆರ್ ಎಂ ಎಂ ಅವಿರೋಧ ಆಯ್ಕೆಯಾಗಿದ್ದಾರೆ.
14 ಜನ ನಿರ್ದೇಶಕ ಸ್ಥಾನ ಹೊಂದಿದ್ದ ಡಿಸಿಸಿ ಬ್ಯಾಂಕ್ ನಲ್ಲಿ ಜುಲೈ 28 ರಂದು ಪ್ರಭಾರಿ ಅಧ್ಯಕ್ಷರಾಗಿ ಷಡಾಕ್ಷರಿಯವರು ಆಯ್ಕೆಯಾಗಿದ್ದರು. ಕಳೆದ ಎರಡು ತಿಂಗಳಿಂದ ಅವರು ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.. ಆದರೆ ಇವತ್ತು ಆರ್ ಎಂ ಎಂ 6ನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ.
2021 ರಲ್ಲಿ ಆರ್ ಎಂ ಎಂ ನಕಲಿ ಬಂಗಾರದ ಅಡವಿಟ್ಟು ಸಾಲ ಪಡೆದ ಪ್ರಕರಣದಲ್ಲಿ ವಜಾಗೊಳಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಜೆ ಬಂದ ಬೆನ್ಬಲ್ಲೇ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮುಂದಿನ ಏಳೆಂಟು ತಿಂಗಳಿಗೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷತೆ ವಹಿಸಿಕೊಂಡರು.
ಆಯ್ಕೆಯಾದ ನಂತರ ಮಾತನಾಡುದ ಆರ್ ಎಂ ಎಂ ನಾಳೆ ಸುದ್ದಿಗೋಷ್ಠಿ ಕರೆಯಲಾಗಿದೆ. ರಾಜ್ಯದಲ್ಲ್ಲಿ ಬರಗಾಲವಿದೆ. ಬ್ಯಾಂಕ್ ನ ಅಧ್ಯಕ್ಷರಾಗಿ 25 ವರ್ಷದಿಂದ ಇದ್ದೇನೆ. ರೈತರು ಧೃತಿಗೆಡುವುದು ಬೇಡ ನಿಮ್ಮೊಂದಿಗೆ ಇದ್ದೇನೆ. ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ-https://suddilive.in/2023/09/29/ಕರವೇ-ಕಾರ್ಯಕರ್ತರ-ಮನವಿ-ಮೇರ/
