ಇನ್ಸುರೆನ್ಸ್ ಕಂಪನಿಗೆ ದೋಖಾ-ಪಿಸಿಆರ್ ಮೂಲಕ ದೂರು ದಾಖಲು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ 2021 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಾಳುವಿನ ಪರಿಹಾರಕ್ಕಾಗಿ ಇನ್ಸುರೆನ್ಸ್ ನ ಅವಧಿಯನ್ನೇ ತಿದ್ದುಪಡಿ ಮಾಡಿ ವಂಚನೆ ಮೂಲಕ ಪರಿಹಾರವನ್ನ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿ ವಾಹನ ಇನ್ಸುರೆನ್ಸ್ ಕಂಪನಿಯ ವಿಭಾಗೀಯ ವ್ಯವಸ್ಥಾಪಕರು ಪಿಸಿಆರ್ ಮೂಲಕ ದೂರು ದಾಖಲಿಸಿದ್ದಾರೆ.
2021 ರಲ್ಲಿ ಕೆಎ 14 ಇಕ್ಯೂ 7655 ಕ್ರಮ ಸಂಖ್ಯೆಯ ವಾಹನದ ಮಾಲೀಕ ಧನಶೇಖರ್ ಎಂಬುವರು ದತ್ತಾತ್ರೇಯ ಎಂಬುವರಿಗೆ ಅಪಘಾತಪಡಿಸಿದ್ದು ಭದ್ರಾವತಿಯ ನ್ಯಾಯಾಲಯಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಈ ಅರ್ಜಿಗೆ ನ್ಯಾಯಾಲಯಕ್ಕೆ ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಮರು ತನಿಖೆಗೆ ಅವಕಾಶವಿಲ್ಲ. ಖಾಸಗಿ ದೂರು ಸಲ್ಲಿಸಲು ಸೂಚಿಸಿತ್ತು. ಅದರಂತೆ ಖಾಸಗಿ ದೂರು ಸಲ್ಲಿಸಿದ ಇನ್ಸುರೆನ್ಸ್ ಕಂಪನಿಯು 2021 ಜುಲೈ 21 ರಂದು ಧನಶೇಖರ್ ಅಪಘಾತ ಪಡಿಸಿ ದತ್ತಾತ್ರೇಯರನ್ನ ಗಾಯಗೊಳಿಸಿದ್ದು ಪರಿಹಾರಕ್ಕಾಗಿ ಸಲ್ಲಿಸಿದ ಇನ್ಸುರೆನ್ಸ್ ಕಂಪನಿಯ ಅವಧಿ ಮುಗಿದಿದ್ದರೂ ಅದನ್ನ ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಬಗ್ಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಪನಿಯ ಅವಧಿಯು 2018 ರಿಂದ 2019 ರವರೆಗೆ ಮಾತ್ರ ಇದ್ದು ಇದನ್ನ ಧನಶೇಖರ್ 2020-21 ಎಂದು ತಿದ್ದಿ ಇನ್ಸುರೆನ್ಸ್ ಕ್ಲೈಮ್ ಮಾಡಿರುವುದು ತಿಳಿದು ಬಂದಿದೆ. ಆದುದರಿಂದ ಕಂಪನಿಯ ಅವಧಿಯನ್ನ ತಿದ್ದಿ ಪರಿಹಾರದ ಕ್ಲೈಮ್ ಮಾಡಿರುವ ಧನಶೇಖರ್ ವಿರುದ್ಧ ಪಿಸಿಆರ್ ಮೂಲಕ ಕಂಪನಿಯ ವಿಭಾಗೀಯ ವ್ಯವಸ್ಥಾಪಕರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/2875
