ಕ್ರೈಂ ನ್ಯೂಸ್

ಬೆಳ್ಳಂಬೆಳಿಗ್ಗೆಯ ಧನುರ್ಮಾಸದ ಪೂಜೆಗೆ ಹೋಗಿ ಬರುತ್ತಿದ್ದ ಮಹಿಳೆಯರ ಚಿನ್ನಾಭರಣ ಸರ ಕಳುವು

ಸುದ್ದಿಲೈವ್/ಶಿವಮೊಗ್ಗ

ಬೆಳ್ಳಂಬೆಳಿಗ್ಗೆ ಮಹಿಳೆಯರ ಕುತ್ತಿಗೆಯಲ್ಲಿರುವ ಚಿನ್ನದ ಸರದ ಮೇಲೆ ಖದೀಮರ ಕಣ್ಣು ಬಿದ್ದಿದೆ. ನಗರದಲ್ಲಿ ಮೂರು ಠಾಣ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಮತ್ತೊಂದು ಕಳ್ಳತನಕ್ಕೆ ಯತ್ನದಂತಹ ಘಟನೆ ನಡೆದಿದೆ.

ಬೈಕಿನಲ್ಲಿ ಬಂದ ಇಬ್ಬರು ಖದೀಮರ ಕಾಕದೃಷ್ಟಿಗೆ ಮಹಿಳೆಯರು ಚಿನ್ನದ ಸರವನ್ನ ಕಳೆದುಕೊಂಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣ ನಡೆದಿದೆ.

ಕೋಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯಲು ಯತ್ನಿಸಿದ ಇದೇ ಗ್ಯಾಂಗ್ ವಿಫಲರಾಗಿದ್ದಾರೆ. ಆದಿಚುಂಚನಗಿರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬೆಳಿಗ್ಗೆ ಧನುರ್ಮಾಸ ಪೂಜೆಗೆ ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಲಲಿತಮ್ಮ ಎಂಬುವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ ಕಳುವು ಮಾಡಲಾಗಿದೆ.

ವಿನೋಬ ನಗರದ 60ಅಡಿ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದ ಸೂರ್ಯ ಎಂಬ 21 ವರ್ಷದ ಯುವತಿ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ‌ ಬೈಕ್ ನಲ್ಲಿಬಂದ ಇಬ್ಬರು ಅಪರಿಚಿತರು ಕದ್ದುಕೊಂಡು ಹೋಗಿದ್ದಾರೆ.

ಕೋಟೆ ಪೊಲಿಸ್ ಠಾಣೆಯ ಪೋಸ್ಟ್ ಆಫೀಸ್ ಎದುರಿನ ಮನೆಯ ಮುಂದೆ ಮಹಿಳೆಯೊಬ್ಬರು ರಂಗೋಲಿ ಹಾಕುವ ವೇಳೆ ಬೈಕ್ ನಲ್ಲಿ ಬಂದವರಿಂದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳುವಿಗೆ ಯತ್ನಿಸಲಾಗಿದೆ. ಈ ಘಟನೆ ಬೆಳಿಗ್ಗೆ 6 ಗಂಟೆಗೆ ನಡೆದಿದೆ.

ವಿಫಲು ಯತ್ನದ ನಂತರ ಆದಿಚುಂಚನ ಗಿರಿ ಶಾಲೆಯ ಬಳಿ ಬಂದ ಇದೇ ಗ್ಯಾಂಗ್ 6-20 ರ ಸಮಯಕ್ಕೆ ಸರಿಯಾಗಿ ಲಲೀತಮ್ಮ ಎಂಬ ಶರಾವತಿ ನಗರ ನಿವಾಸಿಯ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಮತ್ತು ವಿನೋಬನಗರ ಠಾಣೆ ವ್ಯಾಪ್ತಿಯ ಸೂರ್ಯ ಎಂಬ ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಳುವು ಮಾಡಿದ್ದಾರೆ.

ಈ ಹಿಂದೆ ಮನೆಗೆ ಬಂದು ಚಿನ್ನದ ಲೇಪನ ಹಾಕುವುದಾಗಿ ನಂಬಿಸಿ ಅಡುಗೆ ಮನೆಯಿಂದಲೇ ಚಿನ್ನಾಭರಣ ಕಳುವು ನಡೆದಿತ್ತು. ಇದಾದ ನಂತರ ಪೊಲೀಸರು ಎಂದು ಹೇಳಿ ಸಹಾಯಮಾಡುವುದಾಗಿ ಹೇಳಿ ಪೇಪರ್ ನಲ್ಲಿ ಸುತ್ತಿಕೊಡುವ ಪ್ರಯತ್ನ ನಡೆದಿತ್ತು. ಈಗ ಬೆಳ್ಳಂಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬರುವ ಮಹಿಳೆಯರ ಚಿನ್ನಾಭರಣ ಕಳುವಾಗಿದೆ.

ಇದನ್ನೂ ಓದಿ-https://suddilive.in/archives/5085

Related Articles

Leave a Reply

Your email address will not be published. Required fields are marked *

Back to top button