ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ-ಮೀಟರ್ ಬಡ್ಡಿಯ ಬ್ಯಾಂಕ್ ಎಂದು ಆರೋಪ

ಸುದ್ದಿಲೈವ್/ಶಿವಮೊಗ್ಗ

ರೈತರ ಸಾಲ ವಸೂಲಾತಿಗಾಗಿ ಕೆನಾರಾ ಬ್ಯಾಂಕ್ ನವರ ದೌರ್ಜನ್ಯದ ವಿರುದ್ಧ ಇಂದು ರಾಜ್ಯ ರೈತಸಂಘ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದೆ.
2004 ರಲ್ಲಿ ಹೊಳೆಹಟ್ಟಿ ಗ್ರಾಮದ ಕುಪ್ಪೇಂದ್ರಪ್ಪ ಬಿನ್ ಕಾಡವೀರಪ್ಪ ಹೊಳೆಲೂರು ಕೆನರಾಬ್ಯಾಂಕ್ ನಲ್ಲಿ ಬೆಳೆಸಾಲಾಭಿವೃದ್ಧಿ ಸಾಲ ಟ್ರಾಕ್ಟರ್ ಸಾಲ ಎಲ್ಲಾ ಸೇರಿ 9.52 ಲಕ್ಷ ರೂ. ಸಾಲ ಪಡೆದಿದ್ದರು ಇದರಲ್ಲಿ 4.50 ಲಕ್ಷ ರೂ ಹಣ ಮರುಪಾವತಿಸಿದ್ದರು. ಉಳಿದ 5,02,000/- ರೂ.ಗಳನ್ನ ಪಾವತಿಸಲು ಸಿದ್ದರಿದ್ದರು.
ಮನೆಯಲ್ಲಿದ್ದ ವಯೋವೃದ್ಧ ಅಜ್ಜಿ ಶಾಂತಮ್ಮ, ಪತ್ನಿ ರಾಜೇಶ್ವರಿ ಸ್ವತ ಕುಪೇಂದ್ರಪ್ಪ ಸಹ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಮಣಿಪಾಲ್ ಆಸ್ಪತ್ರೆಗೆ ತೆರಳಿದಾಗ ಮನೆಗೆ ನೋಟೀಸ್ ಅಂಟಿಸಿ ಮನೆಯನ್ನ ಸ್ವಾಧೀನ ಮಾಡಿಕೊಳ್ಳುವುದಾಗಿ ಸೂಚಿಸಲಾಗಿದೆ. ಆಸ್ಪತ್ರೆಯಿಂದ ಬಂದ ಕುಟುಂಬದವರಿ ನೋಟೀಸ್ ಅಘಾತ ನೀಡಿದ್ದು ಆತ್ಮಹತ್ಯೆ ಒಂದೇ ಉಳಿದಿದೆ.
5,02,000 ರೂ. ಬದಲು 1 ಕೋಟಿ 1 ಲಕ್ಷ ರೂ ಬಾಕಿ ಇದೆ. ಹಾಗಾದರೆ ಇದು ಮೀಟರ್ ಬಡ್ಡಿ ಹಾಕುವ ಬ್ಯಾಂಕೇ ಎಂದು ಆಗ್ರಹಿಸಿರುವ ಸಂಘಟನೆ ಸೌಹಾರ್ಧಯುತವಾಗಿ ಇತ್ಯಾರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕುಟುಂಬದ ಸದಸ್ಯರೇ ಬ್ಯಾಂಕಿನಲ್ಲಿ ಪ್ರಾಣ ಬಿಡಲು ತಯಾರಿದ್ದಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಜಿಲ್ಲಾಧ್ಯಕ್ಷ ಎಸ್ ಶಿವಮೂರ್ತಿ, ಹಿಟ್ಟೂರು ರಾಜು, ಪಂಚಾಕ್ಷರಿ, ಸಿ.ಚಂದ್ರಪ್ಪ, ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ ಮೊದಲಾದವರು ಭಾಗಿಯಾದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಮನವಿ ಸ್ವೀಕರಿಸಿದರು.
ಪ್ರತಿಭಟನೆ ಕೈಬಿಡಲು ಮನವಿ
ಜಿಪಂ ಎದುರಿನ ಕೆನಾರಾ ಬ್ಯಾಂಕ್ ಎದುರು ಪ್ರತಿಭಟನೆಗೆ ಮುಂದಾದ ರೈತ ಸಂಘಕ್ಕೆ ಎಸ್ಪಿ ಮಿಥುನ್ ಕುಮಾರ್ ಸಚಿವರು ಆಗಮಿಸುತ್ತಿರುವುದರಿಂದ ಕೈಬಿಡಲು ಕೋರಿದ್ದರು. ಆದರೆ ರೈತರು ಪ್ರತಿಭಟನೆ ಮಾಡುವುದಷ್ಟೆ ನಮ್ಮ ಉದ್ದೇಶ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾನಿ ಮಾಡುವ ಉದ್ದೇಶವಿಲ್ಲ. ಮನವಿಕೊಟ್ಟು ವಾಪಾಸಾಗುವುದಾಗಿ ಹೇಳಿದರು. ನಂತರ ಪ್ರತಿಭಟನೆ ಮುಂದುವರೆದಿತ್ತು.
ಇದನ್ನೂ ಓದಿ-https://suddilive.in/archives/2699
