ಸ್ಥಳೀಯ ಸುದ್ದಿಗಳು

ಓಂ ಶಕ್ತಿಯವರು ಈ ಬಾರಿ ಬಿಜೆಪಿಯನ್ನ ಬೆಂಬಲಿಸುತ್ತಾರೆ-ಸುಬ್ರಹ್ಮಣಿ

ಸುದ್ದಿಲೈವ್/ಶಿವಮೊಗ್ಗ

ಓಂ ಶಕ್ತಿ ಎಂದರೇನೆ ಬಿಜೆಪಿ, ಬಿಜೆಪಿ ಎಂದರೆ ಓಂ ಶಕ್ತಿ ಎಂದು ಓಂ ಶಕ್ತಿ ದೇವಸ್ಥಾನ ಸಮಿತಿಯ ಟ್ರಸ್ಟಿ ಸುಬ್ರಹ್ಮಣಿ ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಓಂ ಶಕ್ತಿ ಬಿಜೆಪಿ ಬೆಂಬಲಿತರು ಮತ್ತು ಈಶ್ವರಪ್ಪನವರ ಓಂ ಶಕ್ತಿ ಬೆಂಬಲಿತರ ನಡುವಿನ ಬಿರುಕು ಮೂಡಿದೆ.

ಓಂಶಕ್ತಿ ದೇವಸ್ಥಾನ ಸಮಿತಿಯಲ್ಲಿ 23 ಜನರಿದ್ದು ಇದರಲ್ಲಿ ಇಬ್ಬರು ಸಮಿತಿ ಟ್ರಸ್ಟಿಗಳು ಸುದ್ದಿ ಗೋಷ್ಠಿ ನಡೆಸಿ ಶಿವಮೊಗ್ಗದಲ್ಲಿ ಓಂ ಶಕ್ತಿ ಆರಂಭಿಸಿದ್ದೆ ಬಿಜೆಪಿ ಈಶ್ವರಪ್ಪ ಆರಂಭಿಸಿರಬಹುದು ಆದರೆ ಬಿಜೆಪಿ ನಮಗೆ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಓಂ ಶಕ್ತಿಯಲ್ಲಿ 80%ಮಹಿಳೆಯರು ಇದ್ದಾರೆ. 20% ಗಂಡಸಿರಿದ್ದಾರೆ ಎಂದರು.

ನಿಮ್ಮ ಓಂ ಶಕ್ತಿಯ ದೇವಸ್ಥಾನದ ಸಮಿತಿ ಕಾಂತೇಶ್ ಅಧ್ಯಕ್ಷರಿದ್ದರೆ. ಅವರನ್ನ ಹೊರಗೆ ಹಾಕುತ್ತೀರಾ ಎಂಬ ಮಾಧ್ಯಮ‌ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣಿ ಈ ಬಗ್ಗೆ ಮುಂದಿನದಿನಗಳಲ್ಲಿ ತೀರ್ಮಾನಿಸಲಾಗುವುದು. ಕಮಿಟಿಯ ಆಡಿಟ್ ಆಗಿಲ್ಲ. ಲೆಕ್ಕಕೊಟ್ಟಿಲ್ಲ ಹಾಗಾಗಿ ನಾವು ಕಾಂತೇಶ್ ವಿರುದ್ಧ ಇರುವುದಾಗಿ ತಿಳಿಸಿದರು.

ಹಿಂದುತ್ವವನ್ನ ಬಿಂಬಿಸಿರುವುದೇ ಬಿಜೆಪಿ ಎಂದ ಸುಬ್ರಮಣಿಗೆ ಓಂ‌ಶಕ್ತಿ ಪ್ರವಾಸದಲ್ಲಿ ಹೋಗುವಾಗ ಬಿಜೆಪಿ ಬಾವುಟ ಹಾರಿಸಿಕೊಂಡು ಹೋಗುತ್ತಿದ್ದರಾ ಎಂಬ ಪ್ರಶ್ನೆಗೂ ಸಮರ್ಪ ಉತ್ತರ ನೀಡಲಿಲ್ಲ. ದೇವಸ್ಥಾನದ ಸಮಿತಿಗೆ ನೀವು ಸೇರಿರುವ ಬಗ್ಗೆ ದಾಖಲೆ ಇದೆಯಾ ಎಂಬ ಪ್ರಶ್ನೆಗೆ ಸುಬ್ರಹ್ಮಣಿ ಮುಂದಿನದಿನಗಳಲ್ಲಿ ತೋರಿಸುವುದಾಗಿ ಹೇಳಿದರು.

ಕಾರ್ಯದರ್ಶಿ ಹೊನ್ನಪ್ಪರಿಲ್ಲ, ಅಧ್ಯಕ್ಷರಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣಿ ಸರಿಯಾದ ಉತ್ತರನೀಡಿಲ್ಲ. ಓಂ ಶಕ್ತಿಯಲ್ಲಿ ಅವ್ಯವಸ್ಥೆ ಇರುವುದರಿಂದ ಅವರನ್ನ‌ಕರೆಸಿಲ್ಲ ಎಂದರು.

ದೇವಸ್ಥಾನದ ಸಮಿತಿಯ 13 ವರ್ಷದಿಂದ ಆಡಿಟ್ ಮಾಡುತ್ತಿಲ್ಲ. ಒಬ್ಬರು ಬಂದರೆ ಒಬ್ಬರು ಬರೊಲ್ಲ. ಉಪಾಧ್ಯಕ್ಷ ಭೂಪಾಲ್ ಬರುತ್ತಿಲ್ಲ. ನಾವೆಲ್ಲ ಈಶ್ವರಪ್ಪನವರನ್ನ ಬೆಂಬಲಿಸುತ್ತಿದ್ದವು. ಈಗ ಬಿಜೆಪಿಗೆ ಬೆಂಬಲಿಸುವುದಾಗಿ ತಿಳಿಸಿದರು.

ಇದನ್ನೂ ಓದಿ-https://suddilive.in/archives/12461

Related Articles

Leave a Reply

Your email address will not be published. Required fields are marked *

Back to top button