ಟವಲ್ ಹಾಕಿ ಸಂಬಂಧಿಯ ಮಾಂಗಲ್ಯ ಸರ ಅಪಹರಣ-ಆರೋಪಿ ಅರೆಸ್ಟ್!

ಸುದ್ದಿಲೈವ್/ಭದ್ರಾವತಿ

ಮಹಿಳೆಯೋರ್ವಳ ಕುತ್ತಿಗೆಗೆ ಟವಲ್ ಸುತ್ತಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣವನ್ನ ಭದ್ರಾವತಿ ನ್ಯೂಟೌನ್ ಪೊಲೀಸರು ಬೇಧಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಭದ್ರಾವತಿ ಟೌನ್ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಸಂಬಂಧಿ ನಾಗರಾಜ ಎಂಬಾತನು ಬಂದಿದ್ದು, ಆತನು ತನ್ನ ಹತ್ತಿರ ಇದ್ದ ಟವಲ್ ಅನ್ನು ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬೀಗಿದು ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಮಹಿಳೆಯು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ನಡೆದು 24 ಗಂಟೆಯಲ್ಲೇ ಪ್ರಕರಣವನ್ನ ಪೊಲೀಸರು ದಾಖಲಿಸಿದ್ದಾರೆ.
ಆರೋಪಿ ಮತ್ತು ಬಂಗಾರದ ಸರದ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ,ಮಾರ್ಗದರ್ಶನದಲ್ಲಿ ಭದ್ರಾವತಿ, ಡಿವೈಎಸ್ಪಿ ನಾಗರಾಜ್, ಕೆ.ಆರ್ ಮೇಲ್ವಿಚಾರಣೆಯಲ್ಲಿ, ಸಿಪಿಐ ಶ್ರೀಶೈಲ ಕುಮಾರ ,ಜೆ. ನೇತೃತ್ವದಲ್ಲಿ ಪಿಎಸ್ ಐ ರಮೇಶ್. ಟಿ. ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಶ್ರೀ ನವೀನ್, ಶ್ರೀ ಮಲ್ಲಿಕಾರ್ಜುನ, ಪಿಸಿ- ಶ್ರೀ ರಾಕೇಶ, ಶ್ರೀ ಗೀರೀಶ್ ಮತ್ತು ಶ್ರೀ ವಿನೋದ ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಆರೋಪಿ ಮಂಡ್ಯ ಜಿಲ್ಲೆಯ ನಾಗರಾಜ ಕೆ ಎನ್, (32) ಙ್ನ ಬಂಧಿಸಲಾಗಿದೆ. ಅಂದಾಜು ಮೌಲ್ಯ 4,50,000/- ರೂಗಳ 88 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ಘನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಇದನ್ನೂ ಓದಿ-https://suddilive.in/archives/2646
