ಸ್ಥಳೀಯ ಸುದ್ದಿಗಳು

ಶಿವಮೊಗ್ಗ ತಹಶೀಲ್ದಾರ್ ಆಗಿ ಗಿರೀಶ್ ಬಿ.ಎನ್ ವರ್ಗ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ 70 ಜನ ತಹಶೀಲ್ದಾರ್-1 ಮತ್ತು ತಹಶೀಲ್ದಾರ್-2 ವೃಂದದ ಅಧಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ.

ಕಳೆದೆರಡು ದಿನಗಳಿಂದ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಮತ್ತು ಪಿಐಗಳನ್ನ ವರ್ಗಾಯಿಸಲಾಗಿತ್ತು.‌ ಈಗ ಕಂದಾಯ ಇಲಾಖೆ‌ಯ ತಹಶೀಲ್ದಾರ್ ವೃಂದದವರನ್ನ ವರ್ಗಾಯಿಸಲಾಗಿದೆ. ಚುನಾವಣೆ ಆಯೋಗದ ಈ ತಯಾರಿ ನೋಡುದ್ರೆ ಚುನಾವಣೆ ಘೋಷಣೆಯೂ ಸಹ‌ ಶೀಘ್ರದಲ್ಲಿಯೇ ನಡೆಯಲಿದೆ.

ಅದರಂತೆ ಶಿವಮೊಗ್ಗದ ತಹಶೀಲ್ದಾರ್ ಮತ್ತು ಸಾಗರದ ತಹಶೀಲ್ದಾರ್ ಅವರುಗಳು‌ ವರ್ಗಾವಣೆಗೊಂಡಿದ್ದಾರೆ. ತಹಶೀಲ್ದಾರ್ ಡಾ.ನಾಗರಾಜ್ ಎನ್ ಜೆ ಹಾವೇರಿ ತಾಲೂಕ ತಹಶೀಲ್ದಾರ್ ಆಗಿ ವರ್ಗಾವಣೆ ಆದರೆ

ಅವರ ಸ್ಥಾನಕ್ಕೆ ಈ ಹಿಂದೆ ತಹಶೀಲ್ದಾರ್ ಆಗಿದ್ದ ಗಿರೀಶ್ ಬಿ.ಎನ್ ವರ್ಗಾವಣೆಗೊಂಡಿದ್ದಾರೆ. ಮೈಸೂರಿನ ತಹಶೀಲ್ದಾರ್ ಆಗಿರುವ ಗಿರೀಶ್ ಇಂದು ಸಂಜೆ ಅಧಿಕಾರ ಸ್ವೀಕರಿಸುವ ನಿರೀಕ್ಷೆ ಇದೆ. ಸಾಗರದ ಚಂದ್ರಶೇಖರ್‌ನಾಯ್ಕ್ ಜಗಳೂರಿಗೆ ವರ್ಗವಾಗಿದ್ದಾರೆ. ಜಗಳೂರಿನ ತಹಶೀಲ್ದಾರ್ ಕಲೀಂ ಉಲ್ಲಾ ಸಾಗರದ ತಹಶೀಲ್ದಾರ್ ಆಗಿ ಆಗಮಿಸಲಿದ್ದಾರೆ.

ಇದನ್ನೂ ಓದಿ-https://suddilive.in/archives/8260

Related Articles

Leave a Reply

Your email address will not be published. Required fields are marked *

Back to top button