ಕ್ರೈಂ ನ್ಯೂಸ್

ಮಾನಸಿಕ ಕಿರುಕುಳ-ವಿವಾಹಿತ ಮಹಿಳೆ ನೇಣಿಗೆ ಶರಣು

ಸುದ್ದಿಲೈವ್/ಶಿವಮೊಗ್ಗ

ಕಿರುಕುಳ ಆರೋಪದ ಹಿನ್ನಲೆಯಲ್ಲಿ ಮದುವೆಯಾಗಿ  ಐದು ವರ್ಷದ ನಂತರ ಮನೆಯ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

ಮಕ್ಕಳಾಗಿಲ್ಲ ಎಂದು ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನ ಅಶ್ವಿನಿ(31) ಎಂದು ಗುರುತಿಸಲಾಗಿದೆ. ಐದು ವರ್ಷದ ಹಿಂದೆ ಅಶ್ವಿನಿ ಅಭಿಲಾಷನೊಂದಿಗೆ ಮದುವೆ ಆಗಿದ್ದಳು.

ಮದುವೆಯಾಗಿ ಐದು ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂದು ಅಭಿಲಾಷ, ಅತ್ತೆ ಶೋಭಾ,ಮಾವ  ನಾಗರಾಜ ಕಿರುಕುಳ ನೀಡುತ್ತಿದ್ದರು.ಕಿರುಕುಳದಿಂದ ಬೇಸತ್ತ ಅಶ್ವಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಶ್ವಿನಿ ಸಾಫ್ಟ್ ವೇರ್ ಕಂಪನಿಯವರಾಗಿದ್ದು ಮನೆಕಟ್ಟಲು ಗಂಡನ ಮನೆಯವರಿಗೆ ಸಾಲ ಮಾಡಿ ಹಣಕೊಡಿಸಿದ್ದಳು. ಅತ್ತೆ ಶೋಭರವರು ಕಂಪನಿಯ ವ್ಯವಸ್ಥಾಪಕರಿಂದ ಸೊಸೆಗೆ ಸಂಬಳ ಎಷ್ಟು ಬರುತ್ತದೆ ಎಂದು ವಿಚಾರಿಸಿ ಸಂಬಳದ ಹಣ ತನಗೆ ಬರುವಂತೆ ಸೊಸೆಗೆ ತಾಕೀತು ಮಾಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಂಡ ಅಭಿಲಾಷರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ಯೆಯನ್ನೂ ಬಂಧಿಸುವಂತೆ  ವಿನೋಬ ನಗರದ ಗುಡ್ ಲೈಫ್ ಸರ್ಕಲ್ ಬಳಿ ಅಶ್ವನಿ‌ಮನೆಯವರು ಜಮಾಗೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/11758

Related Articles

Leave a Reply

Your email address will not be published. Required fields are marked *

Back to top button