ಸ್ಥಳೀಯ ಸುದ್ದಿಗಳು

ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನ

ಸುದ್ದಿಲೈವ್/ಶಿವಮೊಗ್ಗ

ಸರ್ಕಾರದ ಸ್ವತಂತ್ರವಾದ ಶಿಸ್ತುಬದ್ದ ಹಾಗೂ ಸಮವಸ್ತ್ರದಾರಿ ಸ್ವಯಂಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾದ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳನ್ನು ತುಂಬಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪುರುಷ ಒಟ್ಟು 171 ಮತ್ತು ಮಹಿಳೆ 08 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.08 ರೊಳಗೆ ಸಲ್ಲಿಸಬಹುದು. ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಕೆಳಗೆ ತಿಳಿಸಲಾದ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ.

ಶಿವಮೊಗ್ಗದಲ್ಲಿ ಪುರುಷ 39, ಮಹಿಳೆ 06 ಸಂಪರ್ಕಿಸಬೇಕಾದ ಘಟಕಾಧಿಕಾರಿ ಜಿ.ಇ.ಶಿವಾನಂದಪ್ಪ ಮೊ.ಸಂ: -9880705966. ಕುಂಸಿ ಪುರುಷ 05 ಘಟಕಾಧಿಕಾರಿ ಪಿ.ಆರ್. ರಾಘವೇಂದ್ರ -9916573291, ಹಾರನಹಳ್ಳಿ ಪುರುಷ 08 ಘಟಕಾಧಿಕಾರಿ ಸಿ.ಮಧು -9686631428. ಭದ್ರಾವತಿ ಪುರುಷ 17, ಮಹಿಳೆ 02 ಘಟಕಾಧಿಕಾರಿ ಜಗದೀಶ್ -9900283490. ಬಿ.ಆರ್.ಪಿ. ಪುರುಷ 06,

ಘಟಕಾಧಿಕಾರಿ ಪಿ.ಮಹೇಶ -9986760750, ಹೊಳೆಹೊನ್ನೂರು ಪುರುಷ 11 ಘಟಕಾಧಿಕಾರಿ ಹೆಚ್.ಎಸ್.ಸುನೀಲ್ ಕುಮಾರ್ -8105840345. ತೀರ್ಥಹಳ್ಳಿ ಪುರುಷ 10, ಘಟಕಾಧಿಕಾರಿ ಹೆಚ್.ಪಿ.ರಾಘವೇಂದ್ರ -9535388472. ಸಾಗರ ಪುರುಷ 13 ಘಟಕಾಧಿಕಾರಿ ಎಂ.ರಾಘವೇಂದ್ರ -9632614031.

ಜೋಗ ಪುರುಷ 05 ಘಟಕಾಧಿಕಾರಿ ಡಿ.ಸಿದ್ದರಾಜು -9449699459. ಆನಂದಪುರ ಪುರುಷ 07 ಘಟಕಾಧಿಕಾರಿ ಎಂ.ರಾಘವೇಂದ್ರ -9632614031. ಶಿಕಾರಿಪುರ ಪುರುಷ 09 ಡಾ.ಸಂತೋಷ್ ಎಸ್ ಶೆಟ್ಟಿ -9845402789. ಶಿರಾಳಕೊಪ್ಪ ಪುರುಷ 05 ಘಟಕಾಧಿಕಾರಿ ಸೈಯದ್ ಇಸಾಕ್ -8861492078. ಹೊಸನಗರ ಪುರುಷ 11 ಘಟಕಾಧಿಕಾರಿ ಕೆ.ಅಶೋಕ್ -9241434669. ರಿಪ್ಪನ್‍ಪೇಟೆ ಪುರುಷ 11 ಘಟಕಾಧಿಕಾರಿ ಟಿ.ಶಶಿಧರಾಚಾರ್ಯ -9741477689. ಸೊರಬ ಪುರುಷ 14 ಘಟಕಾಧಿಕಾರಿ ಬಿ.ರೇವಣಪ್ಪ -9945066084.

ಗೃಹರಕ್ಷಕರಾಗಲು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟು 45 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ/ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ/ದಾಖಲಾಗಿರದಿದ್ದಲ್ಲಿ ಅಂತಹವರು ಹಾಗೂ ಘಟಕ ಇರುವ ಸ್ಥಳದಿಂದ ಸುಮಾರು 8 ರಿಮದ 12 ಕಿ.ಮೀ ಅಂತರದಲ್ಲಿರುವವರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗೃಹರಕ್ಷಕದಳ ಜಿಲ್ಲಾ ಗೌರವ ಸಮಾದೇಷ್ಟರಾದ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4158

Related Articles

Leave a Reply

Your email address will not be published. Required fields are marked *

Back to top button