ಹೆಣ್ಣು ಮರಿಗೆ ಜನ್ಮ ನೀಡಿದ ಭಾನುಮತಿ-ಸಕ್ರೆಬೈಲಿನಲ್ಲಿ ಆನೆಗಳ ಸಂಖ್ಯೆ 22 ಕ್ಕೆ ಏರಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ: ಇಲ್ಲಿನ ಸಕ್ರೆಬೈಲು ಬಿಡಾರದ ಆನೆ ಭಾನುಮತಿ (37) ಶನಿವಾರ ಹೆಣ್ಣು ಮರಿಗೆ ಜನ್ಮನೀಡಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಭಾನುಮತಿ ಬಿಡಾರದಿಂದ ಕಾಡಿಗೆ ಮೇಯಲು ಹೋದಾಗ ಆಕೆಯ ಬಾಲಕ್ಕೆ ಆಳವಾದ ಗಾಯವಾಗಿತ್ತು. ಅದನ್ನ ಹೊಲಿಗೆ ಹಾಕಿ ಸೂಕ್ತ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು.
ಇದಾದ ಮೂರನೇ ವಾರಕ್ಜೆ ಭಾನುಮತಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ನಾಲ್ಕನೇ ಮರಿ ಇದಾಗಿದೆ. ಈಕೆಯ ಯಾವುದೇ ಮರಿಗಳು ಬೆಳವಣಿಗೆಯಾಗಿಲ್ಲವೆಂಬುದು ತಿಳಿದು ಬಂದಿದೆ. ಈ ಮರಿ ಮತ್ತು ತಾಯಿ ಸಧ್ಯಕ್ಕೆ ಆರೋಗ್ಯವಾಗಿದೆ. ಶದರೂ ಬೆಳವಣಿಗೆಗೆ ಇದು ಸವಾಲಾಗಿದೆ.
ಇದರಿಂದ ಸಕ್ರಬೈಲಿನಲ್ಲಿ ಆನೆಯ ಸಂಖ್ಯೆ 22 ಸಂಖ್ಯೆಗೆ ಏರಿಕೆಯಾಗಿದೆ. ದಸರಾ ಮೆರವಣಿಗೆಗೆ ಬಂದ ನೇತ್ರಾವತಿ ಎಂಬ ಆನೆ ಸಹ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಇದಾದ 15 ದಿನಕ್ಕೆ ಭಾನುಮತಿ ಮತ್ತೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಇದರೀಂದ 6 ಹೆಣ್ಣು ಮತ್ತು 16 ಗಂಡು ಆನೆಗಳಿವೆ.
ಇದನ್ನೂ ಓದಿ-https://suddilive.in/archives/2440
