ಸ್ಥಳೀಯ ಸುದ್ದಿಗಳು

ನೇಪಥ್ಯಕ್ಕೆ ಸರಿದಿರುವ ಅಭಿಜಾತ ಕಲೆಗಳು ಉಳಿಯಬೇಕಿದೆ-ಶಂಕರಪ್ಪ

ಸುದ್ದಿಲೈವ್/ಸೊರಬ

ಮಲೆನಾಡು ಅರೆಮಲೆನಾಡು ಸೆರಗಿನಲ್ಲಿರುವ ತಾಲ್ಲೂಕಿನಲ್ಲಿ ಯಕ್ಷಗಾನದಷ್ಟೆ ಜನಪ್ರಿಯ ಗೇಯ ಗಾಯನದಲ್ಲಿ ಬಯಲಾಟವೂ ಒಂದು. ಮೂಲದಿಂದಲೂ ಇಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕಲಾವಿದರಿದ್ದು, ತುಸು ನೇಪಥ್ಯಕ್ಕೆ ಸರಿದಿರುವ ಇಂತಹ ಅಭಿಜಾತ ಕಲೆಗಳು ಉಳಿಯಬೇಕಿದೆ ಎಂದು ರಾಜ್ಯಪ್ರಶಸ್ತಿ ವಿಜೇತ ದಿ.ಕುಮ್ಮೂರು ರಂಗಪ್ಪ ಪುತ್ರ ಶಂಕರಪ್ಪ ಹೇಳಿದರು.

ತಾಲ್ಲೂಕು ಕುಮ್ಮೂರಿನಲ್ಲಿ ಆಂಜನೇಯ ಮತ್ತು ಬಸವೇಶ್ವರ ದೇವರ ವಾರ್ಷಿಕೋತ್ಸವದ ಪ್ರಯುಕ್ತ ಇಲ್ಲಿನ ಶ್ರೀ ಮಾರುತಿ ಬಯಲಾಟ ಮಂಡಲಿ ಏರ್ಪಡಿಸಿದ್ದ ಭೀಮಾರ್ಜುನರ ಕಾಳಗ ದೊಡ್ಡಾಟದ
ಭಾಗವತಿಗೆ ನಡೆಸಿ ಮಾತನಾಡಿದರು.

ನಮ್ಮ ತಂದೆ ಕುಮ್ಮೂರು ರಂಗಪ್ಪ ಸಮಕಾಲೀನ ಅನೇಕರು ರಾಜ್ಯಮಟ್ಟದ ಗಮನ ಸೆಳೆದಿದ್ದು ಕೆಲವರಿಗೆ ರಾಜ್ಯಮಟ್ಟದ ಪುರಸ್ಕಾರವೂ ದೊರೆತಿದೆ. ಒಂದು ಕಾಲದಲ್ಲಿ ಈ ನೆಲೆಯ ಸಂಸ್ಜೃತಿಯಾಗಿ ಛಾಪು ಮೂಡಿಸಿದ್ದ ಬಯಲಾಟಕ್ಕೆ ಈಗಿನ ಯುವಕರು ಮುಂದಾಗಬೇಕು ಎಂದು ಕರೆನೀಡಿದರು.

ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ಚಂದ್ರಯ್ಯ, ಮುಮ್ಮೇಳದಲ್ಲಿ ಸೂತ್ರದರನಾಗಿ ನಿತಿನ್, ಗಣಪತಿಯಾಗಿ ನಿರಂಜನ್, ಶಾರದೆಯಾಗಿ ಶ್ರೇಯಸ್ಸ್, ಬಾಲ ಗೋಪಾಲರಾಗಿ ಆದರ್ಶ, ಭರತ್, ಧರ್ಮರಾಯನಾಗಿ ಪಾಂಡುರಂಗ, ಭೀಮನಾಗಿ ಲೋಕೇಶ್, ಅರ್ಜುನನಾಗಿ ಕೇರಿಯಪ್ಪ, ಪರಮೇಶ್ವರನಾಗಿ ಚೂಡಾಮಣಿ, ಚಾರಕನಾಗಿ ಮಂಜುನಾಥ್, ಶಿವ ಪುತ್ರರಾಗಿ ದ್ರುವಪತಿ,ಪ್ರಮೋದ್, ಸಖಿಯಾಗಿ ದಿಲೀಪ, ಚಂಡಿಯಾಗಿ ರವಿ ಪಾತ್ರದಾರಿಗಳಾಗಿದ್ದರು.

ದೊಡ್ಡಾಟದ ಮೆನೇಜರ್ ಶಿವುಕುಮಾರ್ ಗೌಡ್ರು, ಸಂಘದ ಅಶೋಕ್, ಸಹಾಯಕ ಶಿವು ಮತ್ತು ಸೋಮು ಗೌಡ್ರು, ಸದಸ್ಯ ಗ್ರಾಮಸ್ಥರಿದ್ದರು.

ಇದನ್ನೂ ಓದಿ-https://suddilive.in/archives/11041

Related Articles

Leave a Reply

Your email address will not be published. Required fields are marked *

Back to top button