ಸ್ಥಳೀಯ ಸುದ್ದಿಗಳು

ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯೇ-ಹೆಚ್ ಎಸ್ ಸುಂದರೇಶ್

ಸುದ್ದಿ ಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಾಂಗ್ರೆಸ್ ದಿನೆ ದಿನೆ ಬಲಗೊಳ್ಳುತ್ತಿದೆ. ಒಂದುವರೆ ವರ್ಷದ ಹಿಂದೆ ಮಧುಬಂಗಾರಪ್ಪ ಕಾಂಗ್ರೆಸ್ ಸೇರಿದ್ದರು. ಇವತ್ತು ಶಿಕ್ಷಣ ಸಚಿವರಾಗಿದ್ದಾರೆ. ಅದರಂತೆ ಆಯನೂರು ಮಂಜುನಾಥ್ ಮತ್ತು ಶ್ರೀಕಾಂತ್ ಕಾಂಗ್ರೆಸ್ ಪಕ್ಷ ಸೇರಿ ಬಲಗೊಂಡಿದೆ ಎಂದು ಹೆಚ್ ಎಸ್ ಸುಂದರೇಶ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಕಾಙಗ್ರೆಸ್ ವಿರುದ್ಧ ದಿನೇ‌ದಿನೆ ಮಾತನಾಡಿ ಸುಳ್ಳು ಹೇಳುತ್ತಿದ್ದಾರೆ. ಪ್ರಪಂಚದಲ್ಲಿಯೇ ನಂಬರ್ 1 ಸುಳ್ಳುಗಾರ ಪ್ರಧಾನಿ ಮೋದಿ ಬಿಟ್ಟರೆ ಅಮಿತ್ ಶಾ, ನಂತರ ಬಿಜೆಪಿಯ ಇತರೆ ನಾಯಕರು ಸಮಾಧಾನಕಾರ ಬಹುಮಾನಕ್ಕೆ ಬರುತ್ತಾರೆ ಎಂದ ಅವರು ಕೇಂದ್ರ ಸರ್ಕಾರ ಒಂದು ಭರವಸೆಯನ್ಬೂ ಈಡೇರಿಸಿಲ್ಲ. ಅಮಿತ್ ಶಾ ಸುದ್ದಿಗ಼ೋಷ್ಠಿಯಲ್ಲಿ ಚಪ್ಪಲಿ ತೂರಾಟ ನಡೆದಿದೆ. ಕಾರಣ ಸುಳ್ಳಿನ ಭರವಸೆ ಕಾರಣ ಎಂದು ಗಂಭೀರ ಆರೋಪ ಮಾಡಿದರು.

600 ಭರವಸೆಯಲ್ಲಿ 10 ಗ್ಯಾರೆಂಟಿಯನ್ನ ಈಡೇರಿಸಿಲ್ಲ. ಯಡಿಯೂರಪ್ಪ ಕಾಂಗ್ರೆಸ್ ಪಕ್ಷನೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಪಕ್ಷದಲ್ಲಿ ಅವರಿಕೆ ಕಿಮ್ಮತ್ತೆಷ್ಟಿದೆ ಎಂದರು. ಈಶ್ವರಪ್ಪ ಮತ್ತು ಸದಾನಂದ ಗೌಡರು ದೆಹಲಿಗೆ ಹೈಕಮ್ಯಾಂಡ್ ಬುಲಾವ್ ಎಂದು ಹೋಗುತ್ತಿದ್ದಾರೆ ಆದರೆ ಹೈಕಮ್ಯಡ್ ಕಿಮ್ಮತ್ತು ಕೊಡದೆ ಭೇಟಿನೇ ಆಗ್ತಾ ಇಲ್ಲ ಎಂದು  ದೂರಿದರು.

ಬಿಜೆಪಿ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಮಾಡಿಲ್ಲವಾ ಎನ್ನುತ್ತಾರೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಜನ ಖಾಲಿ ಹೊಡೆಯುತ್ತಿದ್ದಾರೆ. ಆದರೆ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಕಾರ್ಯಕ್ರಮದಲ್ಲಿ ಜನ ಭರ್ಜರಿಯಾಗಿ ಸೇರುತ್ತಿದ್ದಾರೆ. ಕಾರಣ ಬಹಳ ಬಿಜೆಪಿಯ ಭರವಸೆಯಿಂದ ರೋಸತ್ತು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ ಎಂದರು.

ಶಾಲೆಗಳಿಗೆ ವಿದ್ಯುತ್ ಮತ್ತು ನೀರು ಉಚಿತ, ಹೃದಯಘಾತ ಚಿಕಿತ್ಸೆಗೆ ಜೀವರಕ್ಷಕ ಔಷಧಿ ಉಚಿತ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗಲೇ ಜಿಎಸ್ ಟಿ ಹಣ ತರಲು ಯೋಗ್ಯತೆ ಇಲ್ಲದವರು ಬರ ಪ್ರವಾಸ ಮಾಡುತ್ತಿದ್ದಾರೆ ಎಂದು ದೂರಿದರು.

ಗ್ಯಾರೆಙಟಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ಯಿದೆ. ಕರೆಂಟ್ ಬಿಲ್ 85% ಲಾಭ ಪಡೆಯುತ್ತಿದ್ದಾರೆ. ಅನ್ನಭಾಗ್ಯಕ್ಕೆ ಅಕ್ಕಿ ಸಿಗದ ಕಾತಣ ಹಣ ನೀಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ ಜಬರ ರೆಸ್ಪಾನ್ಸ್ ಚೆನ್ಬಾಗಿದೆ. ಜನವರಿಯ ಮೇಲೆ ಅಭಿವೃದ್ಧಿ ಕೆಲಸ ಆರಂಭವಾಗಲಿದೆ. ವಿಪಕ್ಷಗಳು ಅವರ ಕೆಲಸ ಅವರು ಮಾಡಲಿ ಸುಳ್ಳು ಹೇಳೋದುಬೇಡ ಎಂದರು.

ನಾನು ಪ್ರಬಲ ಆಕಾಂಕ್ಷಿ 33 ವರ್ಷದಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿರುಚೆ ಜನರ ಮತ್ತು ಕಾರ್ಯಕರ್ತರ ನಡುವೆ ನೇರ ಸಂಪರ್ಕವಹೊಂದಿದ್ದೆ. ಹಾಗಾಗಿ ನಾನು ಆಕಾಂಕ್ಚಿಯೇ ಆದರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.

ಪದವೀಧರ ಕ್ಷೇತ್ರದಲ್ಲಿ ಉಡುಪಿಯಲ್ಲಿ ಮೂವರು ಮತ್ತು ಶಿವಮೊಗ್ಗದಲ್ಲಿ ಮೂವರು ಅಭ್ಯರ್ಥಿ ಇದ್ದಾರೆ. ಎಸ್ಪಿ ದಿನೇಶ್ ರಂಗನಾಥ್ ಮತ್ತು ಆಯನೂರು ಮಂಜುನಾಥ್ ಆಕಾಂಕ್ಷಿಗಳಾಗಿದ್ದಾರೆ.

ಶಾಸಕ ಬೇಳೂರು  ಸಚಿವ ಮಧು ಬಂಗಾರಪ್ಪ ನವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ವೇದಿಕೆಯಲ್ಲಿ ಇದನ್ನ ಪ್ರಶ್ನಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಯಾವುದೇ ಅಸಮಾಧಾನವಿಲ್ಲ. ಅವರುಬಿಜೆಪಿಗೆ ಹೋಗಲ್ಲ. ಬಹುತೇಕರು ಬಾಗಿಲು ಹಾಕಿಕೊಂಡು ಕಾಂಗ್ರೆಸ್ ಗೆ ಬರ್ತಾ ಇದ್ದಾರೆ ಎಂದರು.

ಶಿಕ್ಷಕರ ಅಭ್ಯರ್ಥಿ ಕೊಡಗಿನ ಮಂಜುನಾಥ್ ಘೋಷಣೆ ಆಗಿದೆ. ಪದವೀಧರ ಕ್ಷೇತ್ರದಲ್ಲಿ ಎಸ್ಪಿ ದಿನೇಶ್ ರಂಗಸ್ವಾಮಿ, ಆಯನೂರು ಮಂಜುನಾಥ್ ಮತ್ತು ಉಡುಪಿಯ ಅಭ್ಯರ್ಥಿಗಳು ಆಕಾಂಕ್ಷಿಯಾಗಿದ್ದಾರೆ. ಶೀಘ್ರದಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಲಿದೆ. ನೂರಕ್ಕೆ ನೂರು ಭಾಗ ನಾವೇ ಗೆಲ್ಲೋದು  ಎಂದರು

ಇದನ್ನೂ ಓದಿ-

Related Articles

Leave a Reply

Your email address will not be published. Required fields are marked *

Back to top button