ಭದ್ರ ಬಲದಂಡೆ ನಾಲೆಯನ್ನ ನ.17 ರಿಂದ ಬಂದ್ ಮಾಡಲು ಎಸಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಭದ್ರಾ ಅಚ್ಚುಕಟ್ಟು ನೀರಾವರಿ ಹಿತ ರಕ್ಷಣ ಸಮಿತಿ ಮತ್ತು ನೀರು ಬಳಕೆದಾರ ಸಹಕಾರ ಮಹಾಮಂಡಳ ಪದಾಧಿಕಾರಿಗಳು ಇಂದು ಉಪವಿಭಾಗಾಧಿಕಾರಿ ಸತ್ಯನಾರಯಣ ಅವರನ್ನ ಭೇಟಿ ಮಾಡಿ ಭದ್ರ ಬಲದಂಡೆ ನಾಲೆಗೆ ಹರಿಸುತ್ತಿರುವ ನೀರನ್ನ ನಿಗದಿತ ದಿನಾಂಕದಂದು ಸ್ಥಗಿತಗೊಳಿಸುವಂತೆ ಮನವಿ ಮಾಡಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಬಲದಂಡೆ ನಾಲೆ ನೀರನ್ನು ನವೆಂಬರ್ 17ರಂದು ನಿಲ್ಲಿಸುವಂತೆ ಕೋರಲಾಗಿದೆ. ಭದ್ರಾ ಜಲಾಶಯದಲ್ಲಿ ಈ ದಿನ 152.4 ಅಡಿ ನೀರಿನ ಸಂಗ್ರಹವಿದೆ. ಅಂದರೆ 36TMC ನೀರಿದ್ದು ಇದರಲ್ಲಿ ಡಿಸೆಂಬರ್ ನಿಂದ ಮೇವರೆಗೆ ಕುಡಿಯುವ ನೀರಿಗಾಗಿ 7TMC ನೀರು ಬಳಕೆಯಾಗಲಿದೆ.
ಅಂದರೆ 29 ಟಿಎಂಸಿ ನೀರು ಉಳಿದುಕೊಳ್ಳಲಿದೆ. ಡೆಡ್ ಸ್ಟೋರೇಜ್ ಗೆ 13.5TMC ನೀರು ತೆಗೆದಿಡಬೇಕಿದೆ. ಅಲ್ಲಿಗೆ 16TMC ನೀರು ಉಳಿಯುತ್ತದೆ. ಬಲದಂಡೆ ನಾಲೆಗೆ 1000 ಕ್ಯೂಸೆಕ್ ನೀರು ಹರಿದುಹೋಗುತ್ತಿದೆ. ಎಡದಂಡೆಯನ್ನ ಸಧ್ಯಕ್ಕೆ ಮುಚ್ಚಲಾಗಿದೆ. ಒಂದು ವೇಳೆ ನ.17 ರಿಂದ ಬಲದಂಡೆ ನೀರು ಬಳಕೆದಾರರು ಮತ್ತೆ ನೀರು ಕೇಳಿದರೆ ಬೇಸಿಗೆಯಲ್ಲಿ ಸಮಸ್ಯೆ ಎದುರಾಗಲಿದೆ.
ಈ ಹಿನ್ನೆಲೆಯಲ್ಲಿ ಮಹಾಮಂಡಳಿ ಸದಸ್ಯರು ಮತ್ತು ಹಿತಾರಕ್ಷಣ ಸಮಿತಿ ಮನವಿ ಸಲ್ಲಿಸಿ ಈಗ ಮುಂದೆ ಒಂಬತ್ತು ದಿನ ಭದ್ರಾ ಜಲಾಶಯದಲ್ಲಿ ನೀರು ಹಾರಿಸಿದ್ದಾರೆ ಜಲಾಶಯದಲ್ಲಿ 36 ದಿನ ಮಾತ್ರ ನೀರು ಉಳಿದುಕೊಂಡಿದೆ. ಈ ನೀರನ್ನು ಬೇಸಿಗೆಯಲ್ಲಿ ಒಂದು ತಿಂಗಳಿಗೆ ಒಂಬತ್ತು ದಿನದಂತೆ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ನಾಲದಲ್ಲಿ ಹರಿಸಬೇಕಾಗುತ್ತದೆ.
ಬರಗಾಲ ಸಂದರ್ಭದಲ್ಲಿ ಸರ್ಕಾರ ಜನ ಜಾನುವಾರುಗಳಿಗೆ ನೀರು ಕೊಡಲೇ ಬೇಕಾಗುತ್ತದೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ ತೋಟಗಳನ್ನು ಸಹ ಉಳಿಸಲು ಸಾಧ್ಯವಾಗುತ್ತಿಲ್ಲ, ಅದ್ದರಿಂದ ನೀರಾವರಿ ಸಲಹಾ ತೀರ್ಮಾನದಂತೆ ನವೆಂಬರ್ 17ಕ್ಕೆ ನೀರು ನಿಲ್ಲಿಸಲು ಸರ್ಕಾರಕ್ಕೆ ವರದಿ ನೀಡಿ ಅನುಕೂಲ ಮಾಡಿ ಕೊಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಳಕೆದಾರರ ಸಂಘದ ಗೌರವ ಅಧ್ಯಕ್ಷ (ಪಿ.ಪಂಚಾಕ್ಷರಿ) ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ, ಮಹಾಮಂಡಲ ನಿರ್ದೇಶಖರು ಹೆಚ್.ಎಂ.ಚಂದ್ರಪ್ಪ, ಜಿಲ್ಲಾ ಅಧ್ಯಕ್ಷ ಎಸ್.ಶಿವಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/2835
