ಸ್ಥಳೀಯ ಸುದ್ದಿಗಳು

ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಬಿಎಸ್ ವೈ ಅಡ್ಡಿ-ಬೇಳೂರು

ಸುದ್ದಿಲೈವ್/ಶಿವಮಾಗ್ಗ

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ಯಿಸಿದ್ದು, ಕುಮಾರ್ ಸೇರ್ಪಡೆ ಕುರಿತು ಮಾತುಕತೆ ಮುಂದು ವರೆದಿದೆ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಕುಮಾರ್ ಸೇರ್ಪಡೆ ಕುರಿತು ಮಾತುಕತೆ ನಡೆಯುತ್ತಿದೆ. ಯಡಿಯೂರಪ್ಪ ನವರು ಪಕ್ಷ ಬಿಡದಂತೆ ಕಟ್ಟಿ ಹಾಕಿಕೊಂಡಿದ್ದಾರೆ. ನಾವು ಹಗ್ಗ ಕಟ್ಟಲು ಹೋಗಿದ್ದೇವು ಹಗ್ಗ ಕಟ್ ಆಗಿದೆ ಎಂದಿದ್ದಾರೆ.

ಕುಮಾರ್ ಬಂಗಾರಪ್ಪ ಪಕ್ಷ ಸೇರ್ಪಡೆಗೆ ಸಚಿವ ಹಾಗೂ ಸಹೋದರ ಮಧು ಬಂಗಾರಪ್ಪ ವಿರೋಧಿಸಿರುತ್ತಿರುವ ಬಗ್ಗೆನೂ ಪ್ರತಿಕ್ರಿಯಿಸಿದ ಬೇಳೂರು, ಪಕ್ಷ ಅಂತಾ ಬಂದಾಗ ಸಹೋದರ ಅಂತ ಬರಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಆಗುವ ಸಾಧ್ಯತೆಯಿದೆ ಎಂದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ ಕುಮಾರ್ ಹೆಗಡೆ ಏಕವಚನ ವಿಚಾರದ ಬಗ್ಗೆ ನ ಅತನಾಡಿರುವ ಶಾಸಕರು, ಜನಪ್ರತಿನಿಧಿಗಳು ಜ್ಞಾನ ಇಟ್ಟುಕೊಂಡು ಮಾತಾಡಬೇಕು. ಹಿರಿಯ ಸಂಸದರು ಗೌರವದಿಂದ ಇರಬೇಕು. ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು.

ಸಂಸದ ಅನಂತಕುಮಾರ್ ಹೆಗಡೆ ತಲೆ ಕೆಟ್ಟಿದೆ. ಟಿಕೆಟ್ ಸಿಗಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರೆ ಎಂದು ಬೇಳೂರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ-https://suddilive.in/archives/9520

Related Articles

Leave a Reply

Your email address will not be published. Required fields are marked *

Back to top button