ಸ್ಥಳೀಯ ಸುದ್ದಿಗಳು

50%ಗೂ ಹೆಚ್ಚು ಮೀಸಲಾತಿ ಕೊಡಬಾರದು ಎಂಬುದು ಕೋರ್ಟ್ ಆದೇಶವೇ ಹೊರತು ಸಂವಿಧಾನದ ಆದೇಶವಲ್ಲ-ಬ.ಕೆ.ಹರಿಪ್ರಸಾದ್

ಸುದ್ದಿಲೈವ್/ಶಿವಮೊಗ್ಗ

ಜನಗಣತಿ ಆಗಬೇಕು ರಾಷ್ಟ್ರದಲ್ಲಿ ಜನಗಣತಿ ಮತ್ತು ಜಾತಿಗಣತಿ ಆಗಬೇಕು ಎಂದು ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1930 ರಲ್ಲಿ ಜಾತಿಗಣತಿಆಗಿತ್ತು.ವಂಚಿತ ಸಮುದಾಯ ಬಹಳವಿದೆ. ದಲಿತ, ಆದಿವಾಸಿಗಳು ಸರ್ಕಾರದ ಸವಲತ್ತುಗಳಿಂದ ವಙಚಿತರಾಗಿದ್ದಾರೆ. 1953 ವರದಿಯಾಗಿತ್ತು. 1993 ರಲ್ಲಿ ಸುಪ್ರೀ ಕೋರ್ಟ್ನಿರ್ದೇಶದ ಮೇಲೆ ನ್ಯಾಷನಲ್ ಕಮಿಷನ್ ಫಾರ್ ಬ್ಯಾಕ್ ವರ್ಡ್ ಕ್ಲಾಸಸ್ ರಚನೆಯಾಗಿತ್ತು.

ಆಗ ನ್ಯಾಯಾಲಯ50% ಮೀಸಲಾತಿ ಮೀರಬಾರದು ಎಂದು ಆದೇಶ ನೀಡಿದೆ ಆದರೆ ಸಂವಿಧಾನದಲ್ಲಿ ಮೀಸಲಾತಿ ಶೇ.50 ರಷ್ಟು ಮೀರುವ ಹಾಗಿಲ್ಲವೆಂದು‌ ಹೇಳಿಲ್ಲ. ಬಾಲಾಜಿ ಅವರ ಪ್ರಕರಣದಲ್ಲಿ ಅವರು ಸುಪ್ರೀಂ ಗೆ ಹೋಗಿದ್ದರು. ಜನಸಂಖ್ಯೆ ಆಧಾರದಮೇರೆಗೆ ಮೀಸಲಾತಿ ಕೊಡಬೇಕು ಎಂದಿದ್ದರು. ಆಗ ಹೊರಬಂದ ಕೋರ್ಟ್ ಜಡ್ಜ್ ಮೆಂಟ್ ವಿನಃ ಸಂವಿಧಾನ ಅಲ್ಲ. ಧಕ್ಷತೆ ಮತ್ತು ಶ್ರೇಣಿ ಕರಣ ನೋಡಿದಾಗ ಉತ್ತರ ಭಾರತದಲ್ಲಿ ದಲಿತರಿಗೆ ಮೀಸಲಾತಿ ಶೇಕಡವಾರು ಕಡಿಮೆಯಿದೆ ಎಂದರು.

ರೋಗಗ್ರಸ್ತ ರಾಜ್ಯಗಳಿವೆ ಉತ್ತರ ಭಾರತದಲ್ಲಿ ರೋಗಗ್ರಸ್ತ ರಾಜ್ಯಗಳು ಎಂದರೆ ಸಂವುಧಾನದಿಂದ ವಂಚಿತ ಸಮುದಾಯದವರು ಬಹಳವಿದೆ. ದಕ್ಷಣ ಭಾರತದಲ್ಲಿ ಮೀಸಲಾತಿಯಲ್ಲಿ ಶೆ. 69 ರಷ್ಟು ಮೀಸಲಾತಿ ತಮಿಳು ನಾಡಿನಲ್ಲಿದೆ. ಕರ್ನಾಟಕದಲ್ಲಿ ಶೇ. 29 ರಷ್ಟಿವೆ. ಆದರೆ ಉತ್ತರ ಭಾರತದಲ್ಲಿ ಇದಕ್ಕೂ ಕಡಿಮೆ ಇವೆ. ಮೀಸಲಾತಿ ಅಭಿವೃದ್ಧಿಗೆ ಅಡಗಡಿಯಾಗಿಲ್ಲ. ಮೀಸಲಾತಿ ಬಡತನ ನಿರ್ಮೂಲನ ಕೆಲಸ ಅಲ್ಲ. ಜಾತಿಗಣತಿ ಮತ್ತು‌ಮೀಸಲಾತಿಗೆ ಸಂಬಂಧವಿಲ್ಲ. ಆದರೆ ಸಂವಿಧಾನ‌ವಂಚಿತರು ಇನ್ನೂ ಬಹಳ ಜನರಿದ್ದಾರೆ.‌ ಇದರಬಗ್ಗೆ ಜನಜಾಗೃತಿ ಮೂಡಿಸಲು ಪಕ್ಷಾತೀತವಾಗಿ ನಡೆಸಲಾಗುತ್ತಿದೆ ಎಂದರು.

ಸರ್ಕಾರದಲ್ಲಿ ಕಾರ್ಯಕ್ರಮಕ್ಕೆ ತೊಂದರೆ ಇಲ್ಲ. ಸರ್ಕಾರದ ಮೇಲೆ ಒತ್ತಡ ತರಲು ಜನಜಾಗೃತಿ ಅವಶ್ಯಕ. ಸರ್ಕಾರದಲ್ಲಿಎಲ್ಲರೂ ಇರ್ತಾರೆ ಬಲಾಡ್ಯರು ಮತ್ತು ದುರ್ಬಲರು ಇದ್ದಾರೆ. ಆದನ್ನ ಸಮರ್ಪಕವಾಗಿ ತರಬೇಕು. ರಾಹುಲ್ ಗಾಂಧಿಯವರು ಮೀಸಲು ತರುತ್ತೇವೆ ಎಂದಿದ್ದಾರೆ ಸರ್ಕಾರ ಮಾಡುವ ಭರವಸೆ ಇದೆ. ಕಾದು ನೋಡ್ತೀವಿ ಎಂದರು.

ಕಾಂತರಾಜ ವರದಿ ಜಾರಿಗೆ ಸರ್ಕಾರದ ಮೇಲ್ವರ್ಗದ ಶಾಸಕರೇ ವಿರೋಧಿಸುತ್ತಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸುದ ಅವರು ಇದನ್ನ ಕಾಲನಂತರ ಒಪ್ಪಿಕೊಂಡ ಉದಾಹರಣೆಯೂ ಇದೆ. ಭರವಸೆ ಇದೆ ಜಾರಿಯಾಗುವ ಕುರಿತು ಎಂದರು.

ಕಾಂಗ್ರೆಸ್ ಪಕ್ಷದ ವೇದಿಕೆ ಮೇಲೆ ಜಾತಿಗಣತಿ ಕುರಿತು ಚರ್ಚೆ ಆಗಿತ್ತು. ಚುನಾವಣೆ ಮುಂಚೆ ಕಾಂತರಾಜು ವರದಿ ಜಾರಿಗೆ ತರುವ ಬಗ್ಗೆ ಮಾತನಾಡಿದ್ದರು. ಆದರೆ ಜಾರಿಯಾಗಿಲ್ಲ. ಮೀಸಲಾತಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ವಿಷಯವಲ್ಲ. ಶರಾವತಿ ಸಂತ್ರಸ್ತರಿಗೆ ಭೂಮಿಕೊಡಲಾಗುತ್ತಿಲ್ಲ ಎಂದರು. ಕಾಂತರಾಜು ವರದಿ ಬಗ್ಗೆ ತಾಂತ್ರಿಕ ವಿಷಯವಿದೆ ಜಾರಿಗೆ ತರುತ್ತೇವೆ ಎಂದರು.

ಮೀಸಲಾತಿ ಮೊದಲಿನಿಂದ ವಿರೋಧಿಸುವವರು ಸಾಮಾನ್ಯರಿಗೆ 10% ಕೊಟ್ಟನಂತರ ಸುಮ್ಮನಾದರು. ಮೆಕಾಲಿ ಭಾರತಕ್ಕೆ ಬಂದಾಗ 12% ಶಿಕ್ಷಣ ಜಾಗೃತಿ ಇತ್ತು. ಅದನ್ನ 76% ತೆಗೆದುಕೊಂಡು ಹೋಗಲಾಗಿದೆ. ಶಿವಮೊಗ್ಗದಲ್ಲಿ ಪದವೀಧರ ಮತ್ತು ಶೈಕ್ಷಣಿಕ ಕ್ಷೇತ್ರದ ಅಭ್ಯರ್ಥಿಗಳು ನೇಮಕಗೊಂಡಿಲ್ಲವೆಂಬ ಮಾಧ್ಯಮಗಳ ಪ್ರಶ್ನೆಗೆ ಸ್ಪೆಷಲ್ ಸ್ಟೇಟಸ್ ಶಿವಮೊಗ್ಗಕ್ಕೆ ಇದೆ ಹಾಗಾಗಿ ಅಭ್ಯರ್ಥಿಗಳು ಅಂತಿಮಗೊಂಡಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/2081

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373