ಅಭಿಮಾನಿಗಳಿಂದ ಅಪ್ಪು ಸ್ಮರಣೆ

ಸುದ್ದಿಲೈವ್/ಶಿವಮೊಗ್ಗ

ಕಳೆದ ಎರಡು ವರ್ಷಗಳ ಹಿಂದೆ ಇದೇ ದಿನಾಂಕದಂದು ನೂರಾರು ಅಭಿಮಾನಿ ದೇವತೆಗೆಳ ಹೃದಯಕ್ಕೆ ಕಹಿ ಅನುಭವವಾಗಿತ್ತು. ನೆಚ್ಚಿನ ನಟನನ್ನ ಕಳೆದುಕೊಂಡು ಕರುನಾಡು ದುಖದಲ್ಲಿ ಮುಳುಗಿತ್ತು. ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ತೊರೆದು ಬಾರದ ಲೋಕಕ್ಕೆ ಸೇರಿದ್ದರು.
ಅವರ ಹೆಸರಿನಲ್ಲಿ ಇವತ್ತಿಗೂ ಸಮಾಜ ಸೇವೆ ನಡೆಯುತ್ತಿದೆ. ಅಪ್ಪು ಅಭಿಮಾನಿಗಳಿಂದ ತಮ್ಮನ್ನ ಅಗಲಿದ ನಟ ಪುನೀತ್ ರಾಜಕುಮಾರನಿಗೆ ಇಂದು ಎರಡನೇ ವರ್ಷದ ಪುಣ್ಯ ಸ್ಮರಣೆ. ಶಿವಮೊಗ್ಗದ ಹಲವೆಡೆ ಅಪ್ಪು ಅಭಿಮಾನಿಗಳು ಹಲವು ಸೇವೆಗಳನ್ನ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಸಾಗರದ ರಸ್ತೆ ಎಪಿಎಂಸಿ ಬಳಿ ಆಟೋ ಚಾಲಕರ ಸಂಘದ ಅಭಿಮಾನಿಗಳು ಶಾಮಿಯಾನಹಾಕಿ, ಅಪ್ಪು ಭಾವಚಿತ್ರವನ್ನು ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದ್ರು, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಮಧ್ಯಾಹ್ನ ಶಾರದಾ ದೇವಿ ಅಂಗವಿಕಲರ ಕೇಂದ್ರದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶಿವಪ್ಪ ನಾಯಕ ಪ್ರತಿಮೆಯ ಬಳಿಯ ಹೂವಿನ ವ್ಯಾಪರಸ್ಥರಿಂದ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಹಿಳೆಯರು ಭಾವುಕರಾದ ಕ್ಷಣಗಳು ಸಹ ನಡೆದವು. ಅಪ್ಪು ಕರುನಾಡಿಗೆ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಆಸರೆ ಸ್ವಯಂ ಸೇವಕರ ತಂಡದಿಂದ ಅಪ್ಪು ಸ್ಮರಣಾರ್ಥ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಜರಿಗಿತು. 2000 ಕ್ಕೂ ಹೆಚ್ಚು ಜನರಿಗೆ ತಂಡ ಫಲಾವ್, ಪಾಯಸ, ಊಟದ ವ್ಯವಸ್ಥೆ ಮಾಡಲಾಯಿತು. ಜೆಎನ್ ಸಿಸಿ ಇಂಜಿನಿಯರ್ ಕಾಲೇಜಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆದಿದೆ.
ಸ್ವಯಂ ಸೇವಕರ ತಂಡದ ಚೇತನ್, ಅನಿಲ್ ಸಾಗರ್, ಸಂತೋಷ್, ಹೊಳಲೂರು, ಯೋಗೀಶ್ ನಾಯ್ಕ್ ಗೆಜ್ಜೇನಹಳ್ಳಿ ಬಸವರಾಜ್ ಗಿರೀಶ್, ಪವನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಭದ್ರಾವತಿ ಕನಕ ಆಟೋ ನಿಲ್ದಾಣದಲ್ಲಿ ಪುನೀತ್ ರಾಜಕುಮಾರ್ ರವರ ಎರಡನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಮಿಯಾನ ಹಾಕಿ ಅಪ್ಪು ಪ್ರತಿಮೆಗೆ ಪುಷ್ಪಮಾಲೆ ಹಾಕಿ ಅಭಿಮಾನ ಮೆರೆಯಲಾಯಿತು. ಇದರಂತೆ ಶಿವಮೊಗ್ಗ ಜಿಲ್ಲೆ ಮತ್ತು ಹಲವು ತಾಲೂಕುಗಳಲ್ಲಿ ಅಪ್ಪುಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ ಜರುಗಿವೆ.
ಇದನ್ನೂ ಓದಿ-https://suddilive.in/archives/2057
