ಸ್ಥಳೀಯ ಸುದ್ದಿಗಳು

ವಿಶ್ವ ದಾಖಲೆಯ ಸರದಾರನಿಗೆ ಡಾಕ್ಟರೇಟ್ ಗರಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ವಾಸಿಯಾದ ತಂದೆ ದಿವಂಗತ ಜೋಸೆಫ್ ಲೋಪಿಸ್ ಮತ್ತು ತಾಯಿ ಶ್ರೀಮತಿ ಸೌರಿನ್ ಲೋಪಿಸ್ ರವರ ಮಗನಾದ ಸ್ಟ್ಯಾನಿ ಲೋಪಿಸ್ ಕಾರ್ಗಲ್ ಇವರಿಗೆ “ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ” ಯಿಂದ ” ಸಮಗ್ರ ಕಲೆ ಮತ್ತು ಸಾಹಿತ್ಯಕ್ಕೆ” ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ತಮಿಳು ನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಶ್ರೀಯುತರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಶ್ರೀಯುತರು ಈ ಹಿಂದೆ ಬೆರಳಲ್ಲಿ ಕೋಲನ್ನು ಬ್ಯಾಲೆನ್ಸ್ ಮಾಡುವ ಮೂಲಕ ವಿಶ್ವ ದಾಖಲೆ ಹಾಗೂ ಕರ್ನಾಟಕ ಅಚೀವರ್ಸ ಬುಕ್ ಅವಾರ್ಡ್, ದಾಖಲೆಗಳನ್ನು ಮಾಡಿದ್ದರು. ಇಷ್ಟೇ ಅಲ್ಲದೆ ಇವರು ಮುಪ್ಪು , ದೃಷ್ಟಿ ಎಂಬ ಕಿರು ಚಿತ್ರವನ್ನು ನಿರ್ದೇಶನ ನಿರ್ಮಾಣ ಅಭಿನಯ ಮಾಡುವ ಮೂಲಕ ಹಲವು ಪ್ರಶಸ್ತಿಗಳನ್ನು ಸಹ ಪಡೆದಿದ್ದರು.

ಇವರು ಬರೆದ ಹಲವು ಕವನಗಳು ಭಾವಗೀತೆ ಮತ್ತು ಭಕ್ತಿ ಗೀತೆಗಳಾಗಿವೆ ಹಾಗೂ ಇವರ ಹಲವು ಕಥೆಗಳು,ನಾಟಕಗಳು ಆಲ್ ಇಂಡಿಯಾ ರೇಡಿಯೋ ದಲ್ಲೂ ಸಹ ಪ್ರಸಾರವಾಗಿದೆ. ಇವರು ಹಲವು ಕಥೆ, ಮಕ್ಕಳ ಕಥೆ, ಕವನಸಂಕಲನ, ಕಾದಂಬರಿ, ಹಾಗೂ ಇನ್ನಿತರೆ ಪ್ರಕಾರದ ಪುಸ್ತಕಗಳನ್ನು ಬರೆದಿದ್ದಾರೆ.

ರಾಜ್ಯ ಮಟ್ಟದ ಯುವಜನ ಮೇಳ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಸಹ ಪಡೆದಿದ್ದು. ಪ್ರಸ್ತುತ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಂಕಳಲೆ ಸಾಗರದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದಿಂದ ” ಜಿಲ್ಲಾ ವೈಯಕ್ತಿಕ ಯುವ ಪ್ರಶಸ್ತಿ” ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಸದಾ ಲವಲವಿಕೆಯಿಂದ ಕ್ರಿಯಾತ್ಮಕವಾಗಿ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇವರು ಇನ್ನಷ್ಟು ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸುವ.

ಇದನ್ನೂ ಓದಿ-https://suddilive.in/archives/2030

Related Articles

Leave a Reply

Your email address will not be published. Required fields are marked *

Back to top button