ಅಪಹರಣ ಪ್ರಕರಣದ ಕುರಿತು ಎರಡು ಎಫ್ಐಆರ್ ದಾಖಲು

ಸುದ್ದಿಲೈವ್/ಶಿವಮೊಗ್ಗ

ವಿದ್ಯಾನಗರದ ಯುವತಿಯನ್ನ ತ್ಯಾಜುವಳ್ಳಿ ಗ್ರಾಮದ ಯುವಕನೋರ್ವ ಅ.21 ರಂದು ಅಪಹರಿಸಿಕೊಂಡು ಹೋದ ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮತ್ತೊಂದು ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.
ವಿದ್ಯಾನಗರದ 19 ವರ್ಷದ ಯುವತಿ ಕಾಲೇಜಿಗೆ ಹೋಗುವಾಗ ತ್ಯಾಜುವಳ್ಳಿಯ ಯುವಕ ಕಿರಣ್ ಎಂಬಾತ ಅಪಹರಿಸಿಕೊಂಡು ಹೋಗಿದ್ದರ ಬಗ್ಗೆ ಶಂಕೆ ವ್ಯಕ್ತಪಡಿಸಿ ಯುವತಿಯ ತಂದೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕ ಕಿರಣ್ ತನ್ನ ವಾಟ್ಸಪ್ ಡಿಪಿಯಲ್ಲಿ ಯುವತಿಯ ಫೋಟೊ ಹಾಕಿಕೊಂಡಿದ್ದನು.
ಇದನ್ನ ಗಮನಿಸಿದ ಯುವತಿಯ ತಂದೆ ಕಿರಣ್ ಗೆ ವಿಚಾರಿಸಿದ್ದರು. ಇಷ್ಟೆ ಅಲ್ಲ ಇನ್ನೂ ಏನು ಮಾಡ್ತೀನಿ ನೋಡ್ತಾ ಇರಿ ಎಂದು ಕಿರಣ್ ಯುವತಿಯ ತಂದೆಗೆ ಬೆದರಿಕೆ ಹಾಕಿದ್ದನು. ಇದರ ಬೆನ್ನಲ್ಲೇ ಯುವತಿಯ ತಂದೆ ಕಿರಣ್ ಕುಮಾರ್ ಅಪಹರಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ಆದರೆ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಇತ್ಯಾರ್ಥಗೊಂಡು ಯುವತಿ ಪೋಷಕರ ಜೊತೆ ಕಿರಣ್ ತಮ್ಮ ಪೋಷಕರ ಜೊತೆ ಬದುಕುಮುಂದು ವರೆಸುವುದಾಗಿ ತೀರ್ಮಾನಿಸಿದ್ದರು. ಇವರೆಲ್ಲರೂ ಸಂಬಂಧಿಕರೆ ಎಂಬ ಅಂಶ ಹೊರಬಿದ್ದಿತ್ತು. ಪ್ರಕರಣ ಇತ್ಯರ್ಥಕ್ಕೂ ಮುಂಚೆ ಯುವತಿಯ ತಂದೆ ಮತ್ತೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಲೆಶಂಕರದ ದೇವಸ್ಥಾನದಲ್ಲಿ ಕಿರಣ್ ಕುಮಾರ್ ಯುವತಿಗೆ ಬಲವಂತದ ತಾಳಿ ಕಟ್ಟಿದ್ದನ್ನ ಅರ್ಚಕರು ಗಮನಿಸಿ ಯುವತಿಯ ತಂದೆಗೆ ತಿಳಿಸಿದ್ದರ ಹಿನ್ನಲೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಕಿರಣ್, ಭಾಗ್ಯಮ್ಮ, ಮಂಜಪ್ಪ, ಹಾಲಪ್ಪ, ಹುಲಿಯಪ್ಪ ಕರಿಯಪ್ಪ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ದೇವಸ್ಥಾನದಲ್ಲಿ ಮದುವೆಯಾಗಿರುವುದು ಕಾನೂನು ವ್ಯಾಪ್ತಿಗೆ ಬಾರದೆ ಇರುವುದರಿಂದ ಯುವಕನ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/2027
