ಸ್ಥಳೀಯ ಸುದ್ದಿಗಳು

ಪ್ರೀತಿಸಿದ್ದ ಕಾರಣಕ್ಕೆ ಯುವಕ ಜೀವ ಬಿಡಬೇಕಾಯಿತು!

ಸುದ್ದಿಲೈವ್/ಶಿಕಾರಿಪುರ

ನಿನ್ನೆ ತೊಗರ್ಸಿ ಬಳಿ ಸಟ್ಟ ಕಾರಿನಲ್ಲಿ ಸುಟ್ಟ ಯುವಕನ ಶವ ಪತ್ತೆಯಾಗಿರುವ ಘಟನೆ ನಿನ್ನೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗಾಡಿಕೊಪ್ಪದ ಯುವಕ ವಿರೇಶ್ ನನ್ನ ಕರೆಯಿಸಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡಿರುವುದಾಗಿ  ಮೃತ ಯುವಕನ ತಾಯಿ ದೂರುದಾಖಲಿಸಿದ್ದಾರೆ.

ಯುವಕ ವಿರೇಶ್ ಚೋರಡಿಯಲ್ಲಿರುವ ಅಡಿಕೆ ತೋಟ ನೋಡಿಕೊಂಡು ಡ್ರೈವಿಂಗ್ ಕೆಲಸಕ್ಕೆ ಹೋಗುತ್ತಿದ್ದ.  ಇವರ ತಾಯಿಯ ದೂರದ  ಮಾವನ ಮಗಳು ಶಿವಮೊಗ್ಗದಲ್ಲಿ ಫಾರ್ಮಸಿ ಓದುತ್ತಿದ್ದಳು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಯುವತಿ ಶಿವಮೊಗ್ಗದಲ್ಲಿ ಓದುತ್ತಿದ್ದಾಗ ವಿರೇಶ್ ಗೆ ಪರಿಚಯವಾಗ್ತಾನೆ. ಪರಿಚಯ ಲವ್ ಆಗಿ ಪರಿಣಮಿಸುತ್ತದೆ.

8-10 ದಿನಗಳ ಹಿಂದೆ ವಿರೇಶ್ ತಾಯಿಯ ಬಳಿ ಯುವತಿಯನ್ನ ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ.  ಈ ಪ್ರೀತಿ ಬೇಡ ಎಂದು ಸಹ ಹೇಳಿದ ತಾಯಿ ಬೇರೆ ಸಂಬಂಧಗಳನ್ನ ತರಲು ವೀರೇಶ್ ಗೆ ಹುಡುಕಿರುತ್ತಾರೆ. ಕೊನೆಯಲ್ಲಿ ತಮಗೆ ಪರಿಚಯಸ್ಥರಿಂದ ಮಗ ಪ್ರೀತಿಸುತ್ತಿದ್ದ ಯುವತಿಯ ತಂದೆಯನ್ನ ಮೊಬೈಲ್ ನಲ್ಲಿ ಸಂಪರ್ಕಿಸಿ ವೀರೇಶ್ ನ ಪ್ರೀತಿ, ಪ್ರೀತಿಸುತ್ತಿರುವ ಕಾರಣಕ್ಕೆ ನಿಮ್ಮ ಮಗಳನ್ನ ಕೊಟ್ಟು ಮದುವೆ ಮಾಡಿಕೊಡುವಂತೆ ಕೇಳಿಸುತ್ತಾರೆ.

ಆದರೆ ಯುವತಿಯ ತಂದೆ ವೀರೇಶ್ ನಿಗೆ ಯುವತಿಯನ್ನ ಕೊಟ್ಟು ಮದುವೆ ಮಾಡೊಲ್ಲ ಎಂದು ಕೆಂಡಮಂಡಲವಾಗಿದ್ದಾರೆ. ಜೀವ ತೆಗೆಯುವುದಾಗಿಯೂ ಹೆದರಿಸಿದ್ದಾರೆ. ಮಾ.15 ರಂದು ಸಂಧಾನಕ್ಕೆ ಬಂದಿದ್ದ ಪ್ರವೀಣ, ಪ್ರಶಾಂತ್ ಮತ್ತು ಪ್ರಭು ಸೇರಿ ಗಾಡಿಕೊಪ್ಪದ ವೀರೇಶ್ ಮನೆಗೆ ಬಂದು 6 ತಿಂಗಳು ಸುಮ್ಮನಿರು ಆಮೇಲೆ ಮದುವೆ ಮಾತನಾಡೋಣ ಎಂದಿದ್ದಾರೆ.

ಮಧ್ಯಾಹ್ನ ಹಾನಗಲ್ ತಾಲೂಕಿಗೆ ಹೋದ ಪ್ರವೀಣ ಮತ್ತೆ ವೀರೇಶ್ ಗೆ ಕರೆ ಮಾಡಿ ಹಾನಗಲ್ ನ ನಾಗರ ಕ್ರಾಸ್ ಗೆ ಬಾ ನಾನು ಯುವತಿಯನ್ನ ನಿನ್ನ ಬಳಿ ಬಿಟ್ಟುಹೋಗುತ್ತೇನೆ ಎಂದು ಭರವಸೆ ನೀಡುತ್ತಾನೆ. ಕೋಟೆ ಮಾರಮ್ಮನ ಜಾತ್ರೆಗೆ ತೆರಳಿ ವಾಪಾಸ್ ಆದ ವೀರೇಶ್ ಗೆ ತಾಯಿ ರಾತ್ರಿಯಾಯ್ತು ಹೋಗೋದು ಬೇಡ ಎಂದಿರುತ್ತಾಳೆ. ಪ್ರವೀಣ ಮತ್ತೆ ವೀರೇಶ್ ತಾಯಿಗೆ ಕರೆ ಮಾಡಿ ನನ್ನನ್ನ ನಂಬಿ ಮಗನನ್ನ ಕಳುಹಿಸಿ ನಿಮ್ಮ ಮಗನ ಜೊತೆ ಯುವತಿಯನ್ನ ಕಳುಹಿಸುವುದಾಗಿ ಹೇಳುದ ನಂತರ ಸುನೀಲ್ ಅವರ ಇನ್ನೋವ ಕಾರು ತೆಗೆದುಕೊಂಡು ವೀರೇಶ್ ಶಿವಮೊಗ್ಗ ಬಿಟ್ಟಿದ್ದಾನೆ.

12-50 ಕ್ಕೆ ಹಾನಗಲ್ ಬಳಿ ಇದ್ದ ಮಗನ ಮೊಬೈಲ್ ಸ್ವಿಚ್ ಆಫ್ ಬಂದಿದೆ. ನಂತರ ತೊಗರ್ಸಿಯ ಸ್ಮಶಾನದ ಬಳಿ‌ ಇನ್ನೋವಾ ಕಾರಿನಲ್ಲಿ ಯುವಕನ ಶವ ಸುಟ್ಟಸ್ಥಿತಿಯಲ್ಲಿ ಕಂಡು ಬಂದಿದೆ. ಇದಕ್ಕೂ ಮೊದಲು ವೀರೇಶ್ ತಾಯಿ ತುಂಗನಗರ ಪೋಈಸ್ ಠಾಣೆಯಲ್ಲಿ ಮಗ ಕಾಣುತ್ತಿಲ್ಲ ಎಂದು ದೂರಿದ್ದಾರೆ. ತದನಂತರ ತೊಗರ್ಸಿಯ ಬಳಿ ಇನ್ನೋವಾ ಕಾರು ಸುಟ್ಟಸ್ಥಿತಿಯಲ್ಲಿ ಪತ್ತೆಯಾಗಿರುವುದು ತಿಳಿದು ಬಂದಿತ್ತು. ಅಲ್ಲೊಂದು ಶವನೂ ಕಂಡು ಬಂದ ಕಾರಣ  ಉಂಗುರ ಮತ್ತು ಕಾರಿನ ನಂಬರ್ ಮೇಲೆ ವೀರೇಶನನ್ನ ಪತ್ತೆಹಚ್ಚಲಾಗಿದೆ.

ವೀರೇಶ್ ನನ್ನ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ. ಪ್ರವೀಣ, ಆದರ್ಶ, ಪ್ರಶಾಂತ್, ಪ್ರಭು, ಬಸವಣ್ಯಪ್ಪ, ಸಂದೀಪ, ವೀರೇಶ, ಶೇಖರಪ್ಪ ಎಂಬುವರ ವಿರುದ್ಧ ವೀರೇಶ್ ನ ತಾಯಿ ಮಹಾದೇವಿ ಶಿರಾಳಕೊಪ್ಪದಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಪ್ರೀತಿಯನ್ನ ತಪ್ಪಿಸಲು ಕೊಲೆಯನ್ನೇ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ-https://suddilive.in/archives/10921

Related Articles

Leave a Reply

Your email address will not be published. Required fields are marked *

Back to top button