ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ನಾಪತ್ತೆ!

ಸುದ್ದಿಲೈವ್/ಶಿವಮೊಗ್ಗ

ಇರುವೆ ಪುಡಿ ಸೇವಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಮಹಿಳೆ ನಾಪತ್ತೆಯಾಗಿದ್ದು ಮತ್ತೋರ್ವ ಗಂಡಸಿನ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾವತಿಯ ಭಗವತಿ ಕೆರೆಗ್ರಾಮ ಮೈದೊಳಲು ನಿವಾಸಿಯ ಪರಶುರಾಮ್ ಬಿನ್ ಶಂಕ್ರಪ್ಪ (35) ಇರುವೆ ಪುಡಿ ಔಷಧಿಯನ್ನು ಸೇವಿಸಿದ್ದರಿಂದ ಅ.24 ರಂದು ಪತ್ನಿಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆಸ್ಪತ್ರೆಯ ರೂಂ. ನಂ141 ರಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಅ.25 ರಂದು ಮದಾಹ:12-00 ಗಂಟೆಗೆ ವೈದ್ಯರ ಸಲಹೆ ಮೇರೆಗೆ ಹೆಂಡತಿಯ ರಕ್ತ, ಪರೀಕ್ಷೆಯನ್ನು ಮಾಡಿಸಿ ರಕ್ತ ಪರೀಕ್ಷೆಯ ವರದಿಯನ್ನು ತೆಗೆದುಕೊಂಡು ಬರಲು ವೈದ್ಯರು ಸೂಚಿಸಿದ್ದರು.
ಯಾವಾಗ ಪರಶುರಾಮ್ ಮದಾಹ್ನ: 12-30 ಗಂಟೆಗೆ ರಕ್ತ ಪರೀಕ್ಷೆಗೆ ಕೊಟ್ಟು ವಾಪಸು ರೂಂ ನಂ141 ಗೆ ಬಂದು ನೋಡಿದಾಗ ಹೆಂಡತಿ ರೂಂನಲ್ಲಿರಲಿಲ್ಲ ಹೆಂಡತಿ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದನ್ನು ನೋಡಿ ಮೆಗ್ಗಾನ್ ಆಸ್ಪತ್ರೆ ಆವರಣ, ಶಿವಮೊಗ್ಗ ಬಸ್ ನಿಲ್ದಾಣ ಹಾಗು ಎಲ್ಲಾ ಕಡೆ ಸಂಬಂಧಿಕರಲ್ಲಿ ವಿಚಾರ ಮಾಡಿ ಹುಡುಕಾಡಿದರು ಪತ್ನಿ ಪತ್ತೆಯಾಗಿಲ್ಲದ ಕಾರಣ ಪರಶುರಾಮ್ ಗೆ ನಿರಾಶೆಯಾಗಿದೆ.
ಪತ್ನಿ ಭಗವತಿಕೆರೆ ಗ್ರಾಮದ ಮಂಜುನಾಥ ಚಿನ್ ಸಿದ್ದಪ್ಪ ಈತನೊಂದಿಗೆ ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಪರಶುರಾಮ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯ ವೈಖರಿಯ ಬಗ್ಗೆಯೂ ಅನುಮಾನ ಮೂಡಿಸಿದೆ.
ಇದನ್ನೂ ಓದಿ-https://suddilive.in/archives/1998
