ರಾಜಕೀಯ ಸುದ್ದಿಗಳು

ಸುರ್ಜೇವಾಲ ಖಡಕ್ ವಾರ್ನಿಂಗ್ ಏನು‌ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕಾಂಗ್ರೆಸ್ ನಾಯಕರಿಗೆ, ಶಾಸಕರಿಗೆ ಮತ್ತು ಸಚಿವರಿಗೆ ಸೇರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಚಳಿಜ್ವರ ಬಿಡಿಸಿದ್ದಾರೆ.

ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗ್ಯಾರೆಂಟಿ ಉತ್ಸವದ ಸಭೆಯಲ್ಲಿ ಮಾತನಾಡಿ ಶಾಸಕರು, ಸಚಿವ ಮಧು ಬಂಗಾರಪ್ಪ ಮತ್ತು ಎಲ್ಲಾ ನಾಯರಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸುವಲ್ಲಿ ಶ್ರಮಿಸದಿದ್ದರೆ ಮುಂದಿನ ಪರಿಣಾಮಗಳು ಏನಾಗಲಿದೆ ಎಂದು ಸಹ ಖಡಕ್ ವಾರ್ನಿಂಗ್ ನೀಡಿದ್ದಾರೆ.

ನಮ್ಮ ಬೂತ್ ನಮ್ಮ ಜವಾಬ್ದಾರಿ ಎಂಬ ಪರಿಕಲ್ಪನೆ ಮತ್ತು ಅಭಿಯಾನದ ಕುರಿತು ಮಾತನಾಡಿದ ಸುರ್ಜೇವಾಲ ಸಚಿವ ಮಧು ಅವರ ಮೇಲೂ ಕಣ್ಣಿಡಲಾಗಿದೆ. ಈ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಬೇಕು.ದೆಹಲಿ ವಾರ್ ರೂಂ ಮೂಲಕ ಶಾಸಕರು ಮುಖಂಡರು ಕೆಲಸ ಮಾಡುವ ಕುರಿತು ಮಾಹಿತಿ ಪಡೆಯಲಾಗುತ್ತಿದೆ.

ಯಾರು ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಅವರಿಗೆ ಮುಂದಿನ ಎಂಎಲ್ ಎ ಟಿಕೆಟ್ ಸಿಗುವುದಿಲ್ಲ ಎಂಬ ಸಂದೇಶವನ್ನ ರವಾನೆ ಮಾಡಿದ್ದಾರೆ. ಇದರಿಂದ ಪಕ್ಷದ ನಾಯಕರು, ಶಾಸಕರು, ಸಚಿವರು ಎಷ್ಟರ ಮಟ್ಟಿಗೆ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮ ಹಾಕಲಿದ್ದಾರೆ ಎಂಬುದರ ಬಗ್ಗೆ ಕಾದು ನೋಡಬೇಕಿದೆ.

ಯಾರು ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಅವರ ಬೋರ್ಡ್ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ. ಶಿಮೊಗ್ಗದಲ್ಲಿ ಗೆಲುವಿನ ಮೊದಲ ಪತಾಕೆ ಹಾರಬೇಕಿದೆ ಎಂದು ಹೇಳುವ ಮೂಲಕ ಎಲ್ಲಾ ನಾಯಕರ ಮೈಚಳಿ ಬಿಡಿಸಿದ್ದಾರೆ.

ಬಿಜೆಪಿ ಬಿಎಸ್ ವೈ ಮತ್ತು ಮಕ್ಕಳ ಪಕ್ಷ

ಶಿವಮೊಗ್ಗ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಎಸ್ ವೈ ಮತ್ತು ಅವರ ಮಕ್ಕಳ ಪಾರ್ಟಿ ಬಿಜೆಪಿಯಾಗಿದೆ. ಗ್ಯಾರಂಟಿ ಯನ್ನು ಬಿಎಸ್ ವೈ ಲೇವಡಿ ಮಾಡಿದ್ದರು. ಕಾಂಗ್ರೆಸ್ ಗ್ಯಾರಂಟಿ ನೋಡಿ ಮೋದಿ ಅವರಿಗೆ ಭಯ ಶುರು ಆಗಿದೆ.

ಭಯದಿಂದ ಮೋದಿಯವರು ರಾಜ್ಯದ ಗ್ಯಾರಂಟಿ ಶಬ್ದವನ್ನೇ  ಕದ್ದಿದ್ದಾರೆ. 1.2 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆ ಲಾಭವಾಗುತ್ತಿದೆ. ಬಿಎಸ್ ವೈ ಅವರು ಗ್ಯಾರಂಟಿ ಕುರಿತು ಮೋದಿಗೆ ದೂರು ನೀಡಿದರು. ಕಾಂಗ್ರೆಸ್ ನೀಡಿದ. ಗ್ಯಾರಂಟಿ ಭರವಸೆ ಪೂರ್ಣ ಗೊಳಿಸಿದೆ. ಈಗ ಮತ್ತೆ ಚುನಾವಣೆ ಬಂದಿದೆ

ಈಗ ಲೋಕಸಭೆ ಚುನಾವಣೆಗೆ ಮತ್ತೆ ಐದು ಗ್ಯಾರಂಟಿ ಕಾಂಗ್ರೆಸ್ ಘೋಷಣೆ ಆಗಿದೆ. ಮಹಾಲಕ್ಷ್ಮಿ ಯೋಜನೆ ಒಂದು ಲಕ್ಷ ಹಣ ಮಹಿಳೆಯರಿಗೆ ಸಿಗಲಿದೆ. ಯುವಕರಿಗೆ ನಿರುದ್ಯೋಗ ಸಮಸ್ಯೆ ಇದೆ. ನಿರುದ್ಯೋಗ ಯುವಕರಿಗೆ ಒಂದು ಲಕ್ಷ ಹಣದ ಯೋಜನೆಯಾಗಿದೆ. ಕೇಂದ್ರ ಸರ್ಕಾರ ದಿಂದ ಈ ಒಂದು ಲಕ್ಷ ಹಣ ಸಿಗಲಿದೆ ಎಂದರು.

ರೈತರಿಗೆ ಸಾಲ ಮನ್ನಾ ಯೋಜನೆ, ಮಧ್ಯಮ ವರ್ಗದ ಮತ್ತು ಬಡ ಕುಟುಂಬ ವರ್ಗ ಕ್ಕೆ 25 ಲಕ್ಷ ವಿಮೆ ಯೋಜನೆ, ಕೇಂದ್ರ ಮತ್ತು ರಾಜ್ಯದ ಗ್ಯಾರಂಟಿ ಯೋಜನೆ ಗಳಿಂದ ಜನರಿಗೆ ಅನುಕೂಲ ಆಗಲಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮೊದಲು ಗೆಲ್ಲಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/13175

Related Articles

Leave a Reply

Your email address will not be published. Required fields are marked *

Back to top button