ನಾಳೆ ಹಿಂದೂ ಸಂಘಟನೆಯ ಪ್ರತಿಭಟನೆ ರದ್ದು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಅನುಕೂಲ ಮಾಡಿಕೊಳ್ಳಲು ಹೊರಟಿದ್ದು, ಈದ್ ಮೆರವಣಿಗೆಯಲ್ಲಿ ರಾಗಿಗುಡ್ಡದ ಜಿಹಾದಿ ಮುಸಲ್ಮಾನರಿಂದ ಹಿಂದೂಗಳ ಮೇಲಾದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಎಂದು ಪಕ್ರಟಿಸಿರುವುದನ್ನ ಜಿಲ್ಲಾ ಜಾತ್ಯಾತೀತ ಜನತಾದಳದ ಅಲ್ಪಸಂಖ್ಯಾತರ ನಗರ ಘಟಕ ಆಕ್ಷೇಪಿಸಿದೆ.
ರಾಗಿಗುಡ್ಡದಲ್ಲಿ ಆಗಿರುವ ಗಲಭೆ ಕುರಿತು ಹಿಂದೂ ಸಂಘಟನೆ ಮತ್ತು ಬಿಜೆಪಿ ಲಾಭ ಮಾಡಿಕೊಳ್ಳಲು ಹೊರಟಿದೆ. ಎರಡೂ ಕಡೆಯವರಿಗೆ ತೊಂದರೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ಆಗಿರುವ ಅನ್ಯಾಯವನ್ನ ರಾಗಿಗುಡ್ಡದ ಜನತೆಯ ಮೇಲಾದ ದೌರ್ಜನ್ಯ ಎಂದು ಕರಪತ್ರದಲ್ಲಿ ನಮೋದಿಸಬೇಕಿತ್ತು ಎಂದು ಘಟಕ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಆಕ್ಷೇಪಿಸಿದೆ.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಈದ್ ಮೆರವಣಿಗೆಯಲ್ಲಿ ರಾಗಿಗುಡ್ಡದಲ್ಲಿ ಜಿಹಾದಿ ಮುಸಲ್ಮಾನರಿಂದ ಹಿಂದೂಗಳ ಮೇಲಾದ ದೌರ್ಜನ್ಯದ ವಿರುದ್ಧ ನಾಳೆ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಸೆಕ್ಷನ್ 144 ಇರುವ ಕಾರಣ ಪ್ರತಿಭಟನೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ.
ಇದನ್ನೂ ಓದಿ-https://suddilive.in/archives/658
