ರಾಜಕೀಯ ಬಣ್ಣ ಪಡೆದುಕೊಂಡ ವಿದ್ಯುತ್ ಶಾಕ್ ಪ್ರಕರಣ

ಸುದ್ದಿಲೈವ್/ಶಿರಾಳಕೊಪ್ಪ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ತಡಿಗಣಿಯಲ್ಲಿ ವಿದ್ಯುತ್ ಕಂಬದ ಲೈನ್ ಶಿಫ್ಟಿಂಗ್ ವೇಳೆ ಕಾರ್ಮಿಕನೋರ್ವನಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಸಧ್ಯಕ್ಕೆ ಆತ ಪ್ರಾಣಾಪಯದಿಂದ ಪಾರಾದರೂ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ನವೀನ್ ಎಂಬಾತ ಯುವಕ ವಿದ್ಯುತ್ ಲೈನ್ ಶಿಫ್ಟ್ ಮಾಡುವಾಗ ಮೆಸ್ಕಾಂನವರು ವಿದ್ಯುತ್ ಲೈನ್ ಆಫ್ ಮಾಡದೆ ಇರುವ ಕಾರಣ ವಿದ್ಯುತ್ ಶಾಕ್ ಹೊಡೆದಿರುವುದಾಗಿ ಆರೋಪಿಸಲಾಗುತ್ತಿದೆ. ಆದರೆ ಮೆಸ್ಕಾಂ ಈ ಲೈನ್ ಶಿಫ್ಟಿಂಗ್ ಕಾಮಾಗಾರಿಯನ್ನ ಗುತ್ತಿಗೆದಾರನಿಗೆ ಕೊಟ್ಟಿದ್ದರು.
ಗುತ್ತಿಗೆದಾರ ನವೀನ್ ಮತ್ತು ಇತರರ ಮೂಲಕ ಕಾಮಗಾರಿ ನಡೆಸುವಾಗ ವಿದ್ಯುತ್ ಶಾಕ್ ಹೊಡೆದು ನವೀನ್ ಎಂಬ ಕಾರ್ಮಿಕ ವಿದ್ಯುತ್ ಕಂಬದಿಂದ ಕೆಳಗೆ ಬಿದ್ದಿದ್ದಾನೆ. ಈ ಪ್ರಕರಣ ಮೆಸ್ಕಾಂ ವಿರುದ್ಧ ಆರೋಪಿಸಲಾಗುತ್ತಿದೆ. ಸಧ್ಯಕ್ಕೆ ನವೀನ್ ಮಣಿಪಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇವೆಲ್ಲದಕ್ಕೂ ಮೊದಲು ಸಂತ್ರಸ್ತ ಹಾಗೂ ಕಾರ್ಮಿಕ ನವೀನ್ ಅಥವಾ ಆತನ ಕುಟುಂಬ ಇನ್ನೂ ದೂರು ದಾಖಲಿಸದೆ ಇರುವುದು ಈ ಪ್ರಕರಣಕ್ಕೆ ಹಲವು ಟ್ವಿಸ್ಟ್ ಪಡೆದುಕೊಂಡಿದೆ. ಗುತ್ತಿಗೆದಾರ ಮೆಸ್ಕಾಂ ವಿರುದ್ಧ ದೂರು ಕೊಡುತ್ತಿರುವುದರಿಂದ ಪೊಲೀಸರು ಸಂತ್ರಸ್ತನಿಂದ ದೂರು ಕೊಡಲು ಸೂಚಿಸಿದ್ದಾರೆ. ಸಂತ್ರಸ್ತ ದೂರು ನೀಡಿದ್ದಲ್ಲಿ ಈ ಪ್ರಕರಣದ ತನಿಖೆಯಿಂದ ಎಲ್ಲವೂ ಬಹಿರಂಗಗೊಳ್ಳಲಿದೆ.
ಅಲ್ಲದೆ, ಶಿರಾಳಕೊಪ್ಪದ ಪಿಎಸ್ಐ ನವರೇ ದೂರು ದಾಖಲಿಸುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ. ಆದರೆ ಈ ಆರೋಪವನ್ನ ಠಾಣಾಧಿಕಾರಿ ಅಲ್ಲಗೆಳೆದಿದ್ದಾರೆ. ಇವೆಲ್ಲದರ ನಡುವೆ ಶಿರಾಳಕೊಪ್ಪದ ಘಟನೆ ಕುರಿತು ರಾಜಕೀಯ ಮುಖಂಡ ಬಳೀಗಾರ್ ಪ್ರತಿಭಟನೆ ನಡೆಸಿದ್ದಾರೆ. ಒಟ್ಟಿನಲ್ಲಿ ಉಗುರಿನಲ್ಲಿ ಆಗುವ ಕೆಲಸಕ್ಕೆ ಕೊಡಲಿ ಹಿಡಿದರು ಎಂಬಂತಾಗಿದೆ.
ಇದನ್ನೂ ಓದಿ-https://suddilive.in/archives/1853
