ಸ್ಥಳೀಯ ಸುದ್ದಿಗಳು

ಸಚಿವರಿಂದ ಬಾರೆಹಳ್ಳ ಜಲಾಶಯ ಪರಿಶೀಲನೆ

ಸುದ್ದಿಲೈವ್/ಶಿವಮೊಗ್ಗ

ಪುರುದಾಳುವಿನ ಬಾರೇಹಳ್ಳ ಕೆರೆ ಜಲಾಶಯ ಇಂದು ಸಚಿವ ಮಧುಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾರೇಹಳ್ಳ ಡ್ಯಾಂನ ಒಳಹರಿವು ಸೋರಿಕೆ, ತುಂಗ ಏತವರಿ ನೀರು ಹರಿಸುವಿಕೆ ಕುರಿತು ಏತನೀರಾವರಿಯ ಇಂಜಿನಿಯರ್ ಮೂಲಕ ಮಾಹಿತಿ ಪಡೆದರು.

17 ಅಡಿ ಇರುವ ಡ್ಯಾಂ ನೀರು ಎರಡು ಕಡೆಯಿಂದ ಸೋರುತ್ತಿದ್ದು ಇದರ ಪುನಶ್ಚೇತನದ ಬಗ್ಗೆ ಇಂಜಿನಿಯರ್ ಮಾಹಿತಿ ನೀಡಿದರು.17 ಅಡಿನೀರಿನಲ್ಲಿ ಸಧ್ಯಕ್ಕೆ 10 ಅಡಿ ನೀರು ಇದ್ದುಡ್ಯಾಂ ಸೋರುತ್ತಿದೆ.

ಡ್ಯಾಂ ನಿಂದ ನೀರು ಸೋರುವಿಕೆ ತಡೆಯಲು ಎರಡು ಕೋಟಿರೂ. ಹಣದಲ್ಲಿ ಪುನಶ್ಚೇತನಗೊಳಿಸಬಹುದು ಎಂದು ಸಚಿವರು ತಿಳಿಸಿದರು. 278 ಎಂಸಿಎಫ್ ಅಂದರೆ 0.545 ಟಿಎಂಸಿ ನೀರಿನ ಜಲಾಶಯದ ಬೇಸ್ ಮೆಂಟ್ ನಲಲಿ ಕ್ರ್ಯಾಕ್ ಬಿದ್ದಿದ್ದು ಜಲಾಶಯ ಸೋರಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸುದ್ದಾರೆ.

ತುಂಗ ಜಲಾಶಯದ ಎಡ ಮತ್ತು ಬಲದಂಡೆ ನಾಲೆಯಿಂದ ಈ ಜಲಾಶಯಕ್ಕೆ ನೀರು ಹರಿಸಲು ಕ್ರಮ ವಹಿಸಲಾಗುತ್ತಿದೆ. ಈ ಡ್ಯಾಂನ ಕಾಮಗಾರಿ ಅಕ್ಟೋಬರ್ ನಿಂದ ಆರಂಭವಾಗಿ ಜನವರಿಗೆ ಮುಗಿಯಬೇಕಿತ್ತು. ಆದರೆ ಬರವಿದ್ದಿದರಿಂದ ಕಾಮಗಾರಿ ಮುಂದೆ ಹೋಗಿದೆ.

ಇದನ್ನ ಓದಿ-

Related Articles

Leave a Reply

Your email address will not be published. Required fields are marked *

Back to top button