ಸಂಸದರ ವಾಟ್ಸಪ್ ಚಾನೆಲ್ ಲೋಕಾರ್ಪಣೆ

ಸುದ್ದಿಲೈವ್/ಶಿವಮೊಗ್ಗ

ಸಂಸದ ಬಿ.ವೈ ರಾಘವೇಂದ್ರ ಅವರ ಅಧಿಕೃತ ವಾಟ್ಸಪ್ ಚಾನೆಲ್ ನ್ನ ಲೋಕಾರ್ಪಣೆ ಮಾಡಲಾಯಿತು. ನಗರದ ರಾಯಲ್ ಆರ್ಕಿಡ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಟ್ಸಪ್ ಚಾನೆಲ್ ಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಅವರು, ಡಿಜಿಟಲ್ ವಿಶ್ವವಿದ್ಯಾಲಯ, ಡಿಜಿಟಲೀಕರಣದ ಸಾಮಾಜಿಕ ಮಾಧ್ಯಮಗಳಲ್ಲಿ ಜನ ಸಂಪರ್ಕ ಮಾಡಲು ಈ ವಾಟ್ಸಪ್ ಚಾನೆಲ್ ಅನುಕೂಲವಾಗಿದೆ.ಪ್ರಧಾನಿಗಳು ಸಹ ವಾಟ್ಸಪ್ ಚಾನೆಲ್ ನ್ನ ಅಧಿಕೃತ ಚಾನೆಲ್ ಆರಂಭಿಸಿದ್ದಾರೆ. ಮೂಲ ಉದ್ದೇಶ, ಸಾರ್ವಜನಿಕರು ಸ್ಪಂಧನೆಗೆ ಈ ಚಾನೆಲ್ ಅನುಕೂಲವಾಗಲಿದೆ. ಸಾರ್ವಜನಿಕ ಬದುಕನ್ನ ಶಿವಮೊಗ್ಗದ ಜನತೆ ಜೊತೆ ಇರುವುದರಿಂದ ವಿಶೇಷ ಸಂಗತಿಯನ್ನವಿಶೇಷವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದರು.
ಶಿವಮೊಗ್ಗ ಕ್ಷೇತ್ರಬೆಳೆಯುತ್ತಿದ್ದು ಪ್ರಪಂಚಕ್ಕೆ ಪರಿಚಯಿಸಲು ಈ ವಾಟ್ಸಪ್ ಚಾನೆಲ್ ಆರಂಭಿಸಲಾಗುತ್ತಿದೆ. ಕಿಮ್ಮನೆ ರೆಸಾರ್ಟ್ ನ ಮಾಲೀಕ ಕಿಮ್ಮನೆ ಜಯರಾಮ್, ಎಂಲ್ ಸಿ ರುದ್ರೇಗೌಡ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮೇಯರ್ ಶಿವುಕುಮಾರ್ ಈ ಚಾನೆಲ್ ಉದ್ಘಾಟನೆ ವೇಳೆ ಹಾಜರಿದ್ದರು.
ಸುದ್ದಿಗೋಷ್ಠಿಯ ನಂತರ ವಾಟ್ಸಪ್ ಚಾನೆಲ್ ನ ವಿಟಿ ಪ್ರದರ್ಶನ ನಡೆಯಿತು. ಪೋಸ್ಟರ್ ರಿಲೀಸ್ ಸಹ ಮಾಡಲಾಯಿತು. ಈ ವೇಳೆಮಾತನಾಡಿದ ಕಿಮ್ಮನೆ ಜಯರಾಮ್, ಜಿಲ್ಲೆಯಲ್ಲಿ ರಾಘವೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ನನಗೆ ಆಸಕ್ತಿಯಿರಲಿಲ್ಲ.
ಸಾಮಾಜಿಕ ಜಾಲತಾಣ ಇಂದು ಸಾರ್ವಜನಿಕ ಸಂಪರ್ಕ ಸಾಧಿಸಲು ಅನಿವಾರ್ಯವಾಗಿದೆ. ಉತ್ತಮ ಕೆಲಸಗಳು ಸಾರ್ವಜನಿಕರನ್ನ ಸಂಪರ್ಕಿಸಲು ಸಾಧ್ಯವಾಗಿದೆ. ವಿಮಾನ ನಿಲ್ದಾಣ ಆರಂಭಿಸಿ ಸಂಸದರು ಉತ್ತಮ ಕೆಲಸ ಮಾಡಿದ್ದಾರೆ.
ನಾನು ವಿಮಾನಹಾರಾಟ ಆರಂಭವಾದಾಗಿನಿಂದ 10 ಬಾರಿ ಬೆಂಗಳೂರು ಶಿವಮೊಗ್ಗ ನಡುವೆ ಓಡಾಡಿದದೇನೆ 100% ವಿಮಾನ ತುಂಬಿರುತ್ತದೆ.ಮಲೆನಾಡಿಗೆ ಇದು ಉತ್ತಮವಾಗಿದೆ. ಜೊತೆಗೆ ಐದಾರು ಜಿಲ್ಲೆಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಇದು ಫಲಕೊಡಲಿದೆ ಎಂದರು.
ಇದನ್ನೂ ಓದಿ-https://suddilive.in/archives/1722
