ಸ್ಥಳೀಯ ಸುದ್ದಿಗಳು

ಸಿಡಿಲಿಗೆ ಇಬ್ಬರು ಸಹೋದರರು ಬಲಿ

ಸುದ್ದಿಲೈವ್/ಭದ್ರಾವತಿ

ಸಿಡಿಲು ಬಡಿದು‌ ಇಬ್ಬರು ಸಹೋದರರು ಸಾವಕಂಡಿದ್ದಾರೆ. ಭದ್ರಾವತಿಯ ಹುಣಸೆಕಟ್ಟೆ ಜಂಕ್ಷನ್ ನಲ್ಲಿ ನಡೆದ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ‌ ಜಂಕ್ಷನ್ ನಲ್ಲಿ ಭತ್ತದ ಗದ್ದೆಯಲ್ಲಿ ಕಟಾವು ಆಗಿದ್ದ ಭತ್ತ ಕಾಯಲು ಹೋಗಿದ್ದ ಸಹೋದರರಿಗೆ ಸಿಡಿಲು ಬಡಿದೆ.

ಬೀರು (32), ಸುರೇಶ (30) ಮೃತ ದುರ್ದೈವಿಗಳಾಗಿದ್ದಾರೆ. ರಾತ್ರಿ ಸಿಡಿಲು ಬಡಿದು ಭತ್ತದ ಗದ್ದೆಯಲ್ಲೇ ಮೃತಪಟ್ಟಿದ್ದಾರೆ..ಕುಟುಂಬಸ್ಥರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ.

ಭದ್ರಾವತಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆಯಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/3891

Related Articles

Leave a Reply

Your email address will not be published. Required fields are marked *

Back to top button