ಸ್ಥಳೀಯ ಸುದ್ದಿಗಳು

ಸತ್ತ ಮೇಕೆಗಳನ್ನ ತಂದು ಪುರಸಭೆ ಎದುರು ಪ್ರತಿಭಟನೆ-ಸ್ಥಳೀಯರಿಂದ ಶಾಸಕರ ವಿರುದ್ಧ ಆಕ್ರೋಶ

ಸುದ್ದಿಲೈವ್/ಶಿರಾಳಕೊಪ್ಪ

ನಗರದ ಜನತೆ ತಮ್ಮ ಮಕ್ಕಳ ಬಗ್ಗೆ ಎಚ್ಚರವಿರಲಿ, ಗ್ರಹಚಾರ ಕೆಟ್ಟರೆ ನಿಮ್ಮ ಮಕ್ಕಳು ಬೀದಿ ನಾಯಿಗಳ ಆಹಾರ ವಾಗುತ್ತರೆ ಎಂದು ಶಿರಾಳಕೊಪ್ಪದ ಪುರಸಭೆ ಎದುರು ನಾಯಿಗಳ ದಾಳಿಗೆ ಸಾವನ್ನಪ್ಪಿದ್ದ ಮೇಕೆಗಳನ್ನ ತಂದು ಸುಹೇಲ್ ಪ್ರತಿಭಟನೆ ನಡೆಸಿದ್ದಾರೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿನ್ನೆ 16 ಕೋಳಿಗಳು ಸಾವು ಕಂಡರೆ, ಇಂದು ಮೇಕೆಗಳು ಸಾವು ಕಂಡಿದೆ. ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದು ಸ್ಥಳೀಯ ಶಾಸಕ ವಿಜೇಂದ್ರ ಹಾಗೂ ಪುರಸಭೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪುರಸಭೆಯ ಮುಂಭಾಗದಲ್ಲಿ ಎರಡು ಮೇಕೆಗಳನ್ನ ತ ಪ್ರತಿಭಟನೆ ನಡೆಸಲಾಗಿದೆ. ನಾಯಿಗಳ ದಾಳಿಗೆ ಬಲಿಯಾದ ಮೇಕೆ ತಂದು ಪ್ರತಿಭಟನೆ ನಡೆಸಲಾಗಿದೆ. ಇವತ್ತು ಮೇಕೆ ಮರಿ ಹಾಗೂ ಕೋಳಿಗಳ ದಾಳಿ ನಡೆದಿದೆ ನಾಳೆ ನಮ್ಮ ಮಕ್ಕಳ ಪರಿಸ್ಥಿತಿ ಏನು ಎಂದು ಸುಹೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೋಷಕರು ಭಯ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ‌ ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದ್ದಾರೆ. ಪ್ರತಿಭಟನೆ ನಡೆಸಿ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/7328

Related Articles

Leave a Reply

Your email address will not be published. Required fields are marked *

Back to top button