ನಗರ‌ ಸುದ್ದಿಗಳು

ಶಿವಮೊಗ್ಗದಲ್ಲಿ ಭಕ್ತಿಭಾವದಿಂದ ನಡೆದ ರಾಮನವಮಿ ಆಚರಣೆ, ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಬುಧವಾರ ಅತ್ಯಂತ ಭಕ್ತಿಭಾವದಿಂದ ರಾಮನವಮಿ ಆಚರಿಸಲಾಯಿತು. ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ರಥೋತ್ಸವ ನಡೆಯಿತು. ಜೊತೆಗೆ ಹಲವೆಡೆ ವಿವಿಧ ಸಂಘ ಸಂಸ್ಥೆಗಳು ಪಾನಕ, ಕೋಸಂಬರಿ ವಿತರಣೆ ಮಾಡಿದವು.

ಶಿವಮೊಗ್ಗದ ಜಯನಗರ ಬಡಾವಣೆಯಲ್ಲಿರುವ ಸೀತಾರಾಮ ಮಂದಿರದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು. ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ದುರ್ಗಿಗುಡಿಯ ಸೀತಾರಾಮಾಂಜನೇಯ ದೇವಾಲಯದಲ್ಲಿ ರಥೋತ್ಸವ ಕಾರ್ಯಕ್ರಮ ಜರುಗಿತು.

ಶಿವಮೊಗ್ಗದ ವಿನೋಬನಗರ, ಸವಾರ್ ಲೈನ್, ದುರ್ಗಿಗುಡಿ, ಕೋಟೆ ಸೀತಾರಾಮಾಂಜನೇಯ ದೇವಸ್ಥಾನ, ಮಲವಗೊಪ್ಪದ ಕಾಡಾ ಕಚೇರಿ ಎದುರಿನ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಇತರೆ ಆಂಜನೇಯ ಹಾಗ ಸೇರಿದಂತೆ ವಿವಿಧೆಡೆಯ ರಾಮ ದೇವಸ್ಥಾನದಲ್ಲಿ ಸಡಗರ ಸಂಭ್ರಮದ ರಾಮನವಮಿ ಹಬ್ಬವನ್ನ ಆಚರಿಸಲಾಯಿತು.

ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಪಾನಕ – ಕೋಸಂಬರಿ ವಿತರಣೆ ಮಾಡಿದವು. ಒಟ್ಟಾರೆ ಜಿಲ್ಲೆಯಾದ್ಯಂತ ಬಿಸಿಲ ಬೇಗೆಯ ನಡುವೆಯೂ ರಾಮನವಮಿ ಸಂಭ್ರಮ ಜೋರಾಗಿತ್ತು.

ಇದನ್ನೂ ಓದಿ-https://suddilive.in/archives/13012

Related Articles

Leave a Reply

Your email address will not be published. Required fields are marked *

Back to top button