ಕ್ರೈಂ ನ್ಯೂಸ್

ಶಿವಮೊಗ್ಗದಲ್ಲಿ ಕಾಮುಕರ ಕಾಟ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಾಮುಕರ ಕಾಟ ಹೆಚ್ಚಾದಂತೆ ಕಂಡು ಬರುತ್ತಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಂನಲ್ಲಿ  ಮಹಿಳೆಯರ ಮತ್ತು ಯುವತಿಯರ ಖಾಸಗಿ ಫೋಟೊಗಳನ್ನ ಶೇರ್ ಮಾಡುವ ಮೂಲಕ ಯುವತಿಯರ ಮಾನಹಾನಿಗೆ ಪುರುಷರು ಮುಂದಾಗುತ್ತಿರುವುದು ಮಾಮೂಲಿಯಾಗಿದೆ.

ಆದರೆ ಇಲ್ಲೊಂದು ಪ್ರಕರಣ ಅಚ್ಚರಿ ಮೂಡಿಸಿದೆ. 50 ವರ್ಷದ ಮಹಿಳೆಯನ್ನ ವಾಹನದಲ್ಲಿ ಫಾಲೋ ಮಾಡಿ, ಅವರು ಶೌಚಾಲಯಕ್ಕೆ ಹೋಗುವುದನ್ನ ಕಾಂಪೌಂಡ್ ಮೇಲೆ ಹತ್ತಿ ನಿಂತು ನೋಡುವುದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚೆಗೆ ಗೋಪಾಲಗೌಡ ಬಡಾವಣೆಯಲ್ಲಿ ವೈದ್ಯರ ಪತ್ನಿ 50 ವರ್ಷದ ಮಹಿಳೆ ಮೈಸೂರಿನಿಂದ ಬಸ್ ನಲ್ಲಿ ಬಂದು ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನ ಜಾವ ಬಂದು ಇಳಿದಿದ್ದಾರೆ. ಇವರನ್ನ ಪತಿ ಹಾಗೂ ವೈದ್ಯರಾದವರು ತಮ್ಮ ವಾಹನದಲ್ಲಿ ಬೆಳ್ಳಂ ಬೆಳಿಗ್ಗೆ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಕಾರಿನಲ್ಲಿ ಬರುತ್ತಿದ್ದಾಗ ಕೆಎ 17 ಎಂ 9217 ಕ್ರಮ ಸಂಖ್ಯೆಯ ಕಾರಿನಲ್ಲಿ ಫಾಲೋಮಾಡಿದ್ದಾನೆ. ಮಹಿಳೆ ಶೌಚಾಲಯಕ್ಕೆ ಹೋದಾಗ ವ್ಯಕ್ತಿಯೋರ್ವ ಮನೆಯ ಕಾಂಪೌಂಡ್ ಮೇಲೆ ನಿಂತು ನೋಡಲು ಯತ್ನಿಸಿದ್ದಾನೆ. ಇದನ್ನ‌ಪಕ್ಕದ ಮನೆಯವರು ವೈದ್ಯರಿಗೆ ಫೊನ್ ಮೂಲಕ ತಿಳಿಸಿದ್ದು ಯಾರು ಅದು ಎನ್ನುತ್ತಿದ್ದಂತೆ ಪರಾರಿಯಾಗಿದ್ದಾನೆ.

ಪಕ್ಕದ ಮನೆಯ ಸಿಸಿ ಟಿವಿ ಫೂಟೇಜ್ ನಲ್ಲಿ ತಪಾಸಣೆ ನಡೆಸಿದಾಗ ಹಿಂಬಾಲಿಸಿಕೊಂಡು ಬಂದ ವಾಹನ ರಾಘವೇಂದ್ರ ಜಾದವ್ ಎಂಬುವರಿಗೆ ಸೇರಿದ ವಾಹನ ಎಂದು ತಿಳಿದು ಬಂದಿದ್ದು ಕಾರಿನ‌ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವೈದ್ಯರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/12777

Related Articles

Leave a Reply

Your email address will not be published. Required fields are marked *

Back to top button