ರಾಜಕೀಯ ಸುದ್ದಿಗಳು

ಕಾಂಗ್ರೆಸ್ ನಲ್ಲಿ ಯಾವುದೆ ಬಣವಿಲ್ಲ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿಕಾರಿಪುರ, ಭದ್ರಾವತಿ ಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಏ.28 ರ ಒಳಗೆ ಪ್ರಚಾರ ಮುಗಿಸಿ ಏ. 29 ರ ನಂತರ 25 ಕ್ಕೂ ಹೆಚ್ಚು ರೋಡ್ ಶೋ ನಡೆಸಲಿದ್ದೇವೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಣ್ಣನ ಸ್ನೇಹಿತರು ಮತ್ತು ಮೇ. 3 ರಂದು ಸಿಎಂ ಸಿದ್ದರಾಮಯ್ಯ ಅವರ ಭೇಟಿ ಕಾರ್ಯಕ್ರಮ ಇದೆ. ಅದರ ಬಗ್ಗೆ ಮತ್ತೊಮ್ಮೆ ಖಚಿತ ಪಡಿಸಲಿದ್ದೇನೆ. ನಮ್ಮ ಅಭ್ಯರ್ಥಿ ಗೀತರವರು ಅತಿಹೆಚ್ಚು ಮತಗಳಿಂದ ಗೆಲ್ಲಲಿದ್ದೇವೆ ಎಂದರು.

ಏ.18 ರ ನಂತರ ಶಿವಮೊಗ್ಗದ ಎರಡು ವಾರ್ಡ್ ಗಳಲ್ಲಿ ಪ್ರಚಾರ ಕಾರ್ಯಕ್ರಮಗಳು ನಡೆಯಲಿದೆ. 2018 ಮತ್ತು 2019 ಮೋದಿ ಹೆಸರು ತೆಗೆದುಕೊಳ್ಳುವ ಜನ ಈ ಬಾರಿ ರಿವರ್ಸ್ ಆಗಿದ್ದಾರೆ. ಕಾಂಗ್ರೆಸ್ ಗೆ ವಾತಾವರಣ ಚೆನ್ನಾಗಿದೆ ಎಂದರು.

ಬಿಜೆಪಿ ಒಡೆದ ಮನೆಯಾಗಿದೆ. ಕಾಂಗ್ರೆಸ್ ಅಲ್ಲ. ಹಾಗಾಗಿ ಬಿಜೆಪಿ ಬಿ ಟೀಮ್ ನಿಮ್ಮದೆ. ಎ ಟೀಮ್ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮತ್ತು ಬಿಟೀಂ ಈಶ್ವರಪ್ಪರನ್ನ ಸೋಲಿಸುತ್ತೇವೆ. ಶಿಕಾರಿಪುರದಲ್ಲಿ ಬಿಎಸ್ ವೈ ಜೊತೆ ಹೊಂದಾಣಿಕೆ ಆಗಿರುವ ಬಗ್ಗೆ ಈಶ್ವರಪ್ಪ ಹೇಳಿದ್ದಾರೆ. ಇದರ ವಿರುದ್ಧ ನಾನು ಹಲವಾರು ಬಾರಿ ಮಾತನಾಡಿ ನಾಗರಾಜ್ ಗೌಡರನ್ನ ಸ್ಪರ್ಧಿಸಲು ಬಿಡದೆ ಬೇರೆಯವರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಹೇಳಿರುವೆ.

ಆದರೆ ಈಶ್ವರಪ್ಪನವರ ಸಮಸ್ಯೆ ಮಗನಿಗೆ ಟಿಕೇಟ್ ಕೊಡಲಿಲ್ಲ ಎಂಬುದು. ಅವರ ಮನೆ ಹೊಲಸು ಆದಾಗ ಉಳಿದವರ ಮನೆ ಹೊಲಸಾಗುತ್ತಾ? ಹಾಗಾಗಿ ಈಶ್ವರಪ್ಪ ಕಾಂಗ್ರೆಸ್ ನವರು ಬೆಂಬಲಿಸುತ್ತಾರೆ ಎನ್ನುತ್ತಾರೆ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.

ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ. ಯಾವ ಕಚೇರಿಯಲ್ಲಿ ವಾರ್ ರಿಪೋರ್ಟ್ ಇದೆ. ಅದು ಬಿಜೆಪಿಯಲ್ಲಿದೆ. ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಚುನಾವಣೆಯಲ್ಲಿ ವೈಯುಕ್ತಿಕ ಟೀಕೆಗೆ ವೇದಿಕೆಯಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಅದು ಬಿಜೆಪಿಯ ಎ ಟೀಮ್ ಮತ್ತು ಬಿ ಟೀಮ್ ನಲ್ಲಿದೆ. 2014 ನಾನು ಹೇರ್ ಸ್ಟೈಲ್ ನೋಡಿ ಪಮೋರಿಯನ್ ನಾಯಿಗೆ ಹೋಲಿಸಲಾಗಿತ್ತು. ಆತಹರ ಪದಗಳು ನಾನು ಬಳಸುತ್ತಿಲ್ಲ ಎಂದರು.

ಬಿಜೆಪಿಯ ಪ್ರನಾಳಿಕೆಯನ್ನ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ ಎಂಬ ಸಚಿವ ಮಧು ಬಂಗಾರಪ್ಪ ದಿನ ಅವರು ಬಿಡುಗಡೆ ಮಾಡುವುದೇ ಅಳಿಯಲ್ಲದ ರೈಲನ್ನ. ಅವರ ಪ್ರನಾಳಿಕೆ ಬಗ್ಗೆ ಜನರಿಗೆ ಅರಿವಿದೆ. ಅವರ ಪ್ರನಾಳಿಕೆಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/12748

Related Articles

Leave a Reply

Your email address will not be published. Required fields are marked *

Back to top button