ರಾಜಕೀಯ ಸುದ್ದಿಗಳು

ಡಿ.08 ರಂದು ದೀಪಕ್ ಸಿಂಗ್ ಪದಗ್ರಹಣ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರ ಜಾತ್ಯಾತೀತ ಜನತಾದಳದ ಅಧ್ಯಕ್ಷರನ್ನಾಗಿ ದೀಪಕ್ ಸಿಂಗ್ ಅವರನ್ನ ನೇಮಿಸಿದ್ದು, ಡಿ.08 ಜಾತ್ಯಾತೀತ ಜನತಾದಳದ ಕಚೇರಿಯ ಆವರಣದಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ದೀಪಕ್ ಸಿಂಗ್ ಮಧ್ಯಾಹ್ನ 12 ಗಂಟೆಗೆ  ಕಾರ್ಯಕ್ರಮ ನಡೆಯಲಿದೆ. ಪಕ್ಷದ ಗಣ್ಯರು ಶಾಸಕಿ ಶಾರದಾ ಪೂರ್ಯನಾಯ್ಕ್ ಭಾಗಿಯಾಗಲಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳಿಸಿ ನಗರದಲ್ಲಿ ಪಕ್ಷ ಬಲವರ್ಧನೆ ಮಾಡುವುದಾಗಿ ತಿಳಿಸಿದರು. ಶಿವಮೊಗ್ಗ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸಮಾಡಲು ಜೆಡಿಎಸ್ ಬದ್ಧವಾಗಿದೆ ಎಂದರು.

ಅಧಿಕಾರ ಸ್ವೀಕಾರಕ್ಕೂ ಮೊದಲು ಬೈಕ್ ರ್ಯಾಲಿ ನಡೆಯಲಿದೆ. ಶುಭಮಂಗಳ ಕಲ್ಯಾಣ ಮಂದಿರದಿಂದ ಬೈಕ್ ರ್ಯಾಲಿ ನಡೆಯಲಿದ್ದು ಪಕ್ಷದಕಚೇರಿಗೆ ಬೈಕ್ ರ್ಯಾಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ನರಸಿಂಹ, ಬೊಮ್ಮನ್ ಕಟ್ಟೆ ಮಂಜುನಾಥ್, ಸಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4347

Related Articles

Leave a Reply

Your email address will not be published. Required fields are marked *

Back to top button