ನಗರ‌ ಸುದ್ದಿಗಳು

ಮೆಗ್ಗಾನ್ ನಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮೋಡ ಮತ್ತು ಬಿಸಿಲಿನ ನಡುವಿನ ಕಣ್ಣಾ ಮುಚ್ಚಾಲೆಯ ಆಟ ಆರಙಭವಾಗಿದೆ. ಬೇಸಿ್ಎಯ ಬಿಸಿಲಿನ ಝಳ ಜನರನ್ನ ಕಂಗೆಡಿಸಿದೆ. ಈ ನಡುವೆ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ನ್ನ ಆರಂಭಿಸಲಾಗಿದೆ.

ಬಿಸಿನ ಹೆಚ್ಚಳಕ್ಕೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡರೆ ಅವರಿಗೆ ಸೂಕ್ತ ಚಿಕಿತ್ಸೆಗಾಗಿ ಈ ಹೀಟ್ ಸ್ಟ್ರೋಕ್ ವಾರ್ಡ್ ಸಹಾಯವಾಗಲಿ ಎಂದು ಆರಂಭಿಸಲಾಗಿದೆ. ಕಳೆದ ವಾರ 40 ಡಿಗ್ರಿಯ ವರೆಗೂ ತಾಪಮಾನ ಹೆಚ್ಚಾಗಿತ್ತು. ತಾಪಮಾನ ಹೆಚ್ಚಾದಲ್ಲಿ ಜನ ಬಿಲಿಸಿಲಿನ ತಾಪಮಾನಕ್ಕೆ ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಆರಂಭಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮೆಗ್ಗಾನ್ ಅದೀಕ್ಷಕ ಡಾ.ತಿಮ್ಮಪ್ಪ ಸುದ್ದಿಲೈವ್ ಗೆ ಮಾತನಾಡಿ, ಕಳೆದ ವಾರ ಬಿಸಿಲಿನ ತಾಪ ಮಾನ 40° ಗೂ ಹೆಚ್ಚಾಗುತ್ತ ಬಂದಿತ್ತು. ತಾಪಮಾನ ಹೆಚ್ಚಾಗುತ್ತಿದ್ದ  ಪರಿಣಾಮ ಹೀಟ್ ಸ್ಟ್ರೋಕ್ ವಾರ್ಡ ಎಂದು ಆರಂಭಿಸಲಾಗಿದೆ.

ಐದು ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ವಾರ ತಾಪಮಾನ 37 ಮತ್ತು 38 ರ ನಡುವೆ ಏರಿಳಿತವಾಗುತ್ತಿರುವುದರಿಂದ ಯಾವ ಒಬ್ಬ ವ್ಯಕ್ತಿಯೂ ದಾಖಲಾಗಿಲ್ಲ. ಹೀಟ್ ಸ್ಟ್ರೋಕ್ ವಾರ್ಡ್ ಎಂದು ನಾಮಫಲಕವನ್ನ ಮೆಗ್ಗಾನ್ ನಲ್ಲಿ ತೂಗು ಹಾಕಲಾಗಿದೆ ಎಂದರು.

ಬಿಸಿಲಿನ ಝಳಕ್ಕೆ ಜನ ಹಣ್ಣು, ತಂಪು ಪಾನೀಯದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಹವಮಾನ ಇಲಾಖೆ ಸಹ ಜನರಿಗೆ ಸೂಕ್ತ ನಿರ್ದೇಶನವನ್ನ ನೀಡಿದೆ. ಈ ಮಧ್ಯೆ ಹೀಟ್ ಸ್ಟ್ರೋಕ್ ನಿಂದ ಸಧ್ಯಕ್ಕೆ ಜನ ಬಜಾವ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಜನ ಬಿಸಿಲಿನ ತಾಪಮಾನಕ್ಕೆ ತತ್ತರಿಸಲಿದ್ದಾರೆ.

ಇದನ್ನೂ ಓದಿ-https://suddilive.in/archives/12551

Related Articles

Leave a Reply

Your email address will not be published. Required fields are marked *

Back to top button