ಸ್ಥಳೀಯ ಸುದ್ದಿಗಳು

ಸಂಪನ್ನಗೊಂಡ 9 ದಿನದ ದಸರ-ಬನ್ನಿ ಮಂಟಪದಲ್ಲಿ ರಾಜಕೀಯ ಮತ್ತು ರಾಜಕೀಯ ಹಿಂಬಾಲಕರದ್ದೇ ದರ್ಬಾರ್

ಸುದ್ದಿಲೈವ್/ಶಿವಮೊಗ್ಗ

ತಹಶೀಲ್ದಾರ್ ಡಾ.ನಾಗರಾಜ್ ಎನ್ ಜೆ ಬನ್ನಿ ಮುಡಿಯುವುದರೊಂದಿಗೆ 9 ದಿನದ ದಸರಾ ಹಬ್ಬ ಸಂಪನ್ನಗೊಂಡಿದೆ.

ಫ್ರೀಡಂ ಪಾರ್ಕ್ ನಲ್ಲಿ ಮೆರವಣಿಗೆಯಲ್ಲಿ ಬಂದ ದೇವರುಗಳು ಸಾಲಾಗಿ ಬನ್ನಿ ಮಂಟಪದ ಹಿಂದೆ ಸಾಲಾಗಿನಿಂತವು. ಸಂಜೆ 3-40 ಕ್ಕೆ ಕೋಟೆಯ ಅರಮನೆಯ ಮುಂಭಾಗದಿಂದ ಹೊರಟ ಮೆರವಣಿಗೆ ಸಂಜೆ 7 ಗಂಟೆಗೆ ಫ್ರೀಟಂ ಪಾರ್ಕ್ ತಲುಪಿದೆ.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬಂದ ಖಡ್ಗದಿಂದ ಬಾಳೆ ಕಂದನ್ನ ಕತ್ತರಿಸಿದ ತಹಶೀಲ್ದಾರ್ ನಾಗರಾಜ್ ಮೊದಲು ಬನ್ನಿ ಮರಕ್ಕೆ ಪೂಜಾ ವಿಧಿವಿಧಾನಗಳನ್ನ ಮುಗಿಸಿದರು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ರಾಮಪ್ರಸಾದ್ ಮೊದಲಾದವರಿಂದ ಮಂತ್ರಘೋಷಗಳನ್ನ ಹಾಡಲಾಯಿತು.  ಬನ್ನಿ  ಕಡಿಯುವುದರಿಂದ 9 ದಿನಗಳ ದಸರಾ ಹಬ್ಬ ಸಂಪನ್ನಗೊಂಡಿದೆ. ನಂತರ 10 ತಲೆಯ ರಾವಣನನ್ನ ಸುಡಲಾಯಿತು.

ಮಾಜಿ ಡಿಸಿಎಂ ಈಶ್ವರಪ್ಪ, ಸಂಸದ ರಾಘವೇಂದ್ರ, ಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್, ಪಾಲಿಕೆ ಸದಸದಯೆಯರು ಭಾಗವಹಿಸಿದ್ದರು. ಈಶ್ವರಪ್ಪ ಮತ್ತು ಸಂಸದರ ರಾಘವೇಙದ್ರ ಇಬ್ವರೂ ಕೈ ಹಿಡಿದು ಜನರಿಗೆ ಶುಭಕೋರಿರುವುದು ದಸರಾ ಹಬ್ಬದ ವಿಶೇಷವಾಗಿತ್ತು.

ಜನ ಸಾಮಾನ್ಯರಿಗೆ ಫುಲ್ ರಿಸ್ಟ್ರಿಕ್ಷನ್

ಜನ ಸಾಮಾನ್ಯರಿಗೆ ಬನ್ನಿ ಮಂಟಪಕಕ್ಕೆ ಹೋಗದಂತೆ ಖಾಕಿ ಸರ್ಪಗಾವಲು ಹಾಕಿ ಫುಲ್ ರಿಸ್ಟ್ರಿಕ್ಷನ್ ಹಾಕಲಾಗಿತ್ತು. ಆದರೆ ರಾಜಕೀಯ ಹಿಂಬಾಲಕರ ದಂಡೇ ವೇದಿಕೆ ಮೇಲೆ ನೆರೆದಿತ್ತು. ರಾಜಕೀಯ ಬೆಂಬಲಿಗರಿಗೆ ವೇದಿಕೆ ಮೇಲೆ ನಿಲ್ಲುವ ಅವಕಾಶ ನೋಡಿ ಸಾಮಾನ್ಯ ಜನರನ್ನ ಅಣುಕಿಸಿದಂತೆ ಇತ್ತು. ಇಂತಹ ಅಣಕು ಪ್ರದರ್ಶನ ಮೊದಲಿನಿಂದ ಬಂದ ಸಂಪ್ರದಾಯದಂತೆ ನಡೆದುಕೊಳ್ಳಲಾಗುತ್ತಿರುವುದು ದುರಾದೃಷ್ಟಕರ.‌ ಇಂತಹ ಸಂಸ್ಕೃತಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳು ಕಷ್ಟವೇ  ಅನಿಸುತ್ತದೆ.

ಪಿಎಸ್ ಐ ನವೀನ್ ರಿಂದ ಗುಡ್ ಜಾಬ್

ಬಿ.ಆರ್.ಗಿರೀಶ್ ತಹಶೀಲ್ದಾರ್ ಆದ ಸಂದರ್ಭ 2021 ಸರಿಸುಮಾರಿಗೆ ಪೂಜೆ ಮಾಡುತ್ತಿದ್ದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ರಾಮಪ್ರಸಾದ್ ಮಂತ್ರಘೋಷ ಮುಗಿಸಿದ್ದರು. ಇನ್ನೇನು ಬನ್ನಿ‌ ಕಡಿಯುವ ವೇಳೆಗೆ ಜನಜಂಗುಳಿಯಿಂದ ಸ್ವಲ್ಪದರಲ್ಲೇ ತಹಶೀಲ್ದಾರ್ ಬೀಸಿದ ಖಡ್ಗ ಸ್ವಲ್ಪದರಲ್ಲೇ ಬಜಾವ್ ಆಗಿದ್ದ ಉದಾಹರಣೆ ಕಣ್ಣ ಮುಂದೆ ಇದೆ.

ಆದರೂ ಜನರನ್ನ ಬನ್ನಿ ಮುರಿಯುವ ವೇಳೆ ಬಿಟ್ಟುಕೊಳ್ಳಲಾಗುತ್ತದೆ. ಹೊರಗಡೆ ಜನರನ್ನ ನಿರ್ಬಂಧಿಸಲಾಗುತ್ತದೆ.  ಆದರೆ ಈ ಬಾರಿ ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ವೇದಿಕೆಯ ಮೇಲೆ ನೆರೆದಿದ್ದವರನ್ನ ಖಾಲಿ ಮಾಡಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ-https://suddilive.in/archives/1741

Related Articles

Leave a Reply

Your email address will not be published. Required fields are marked *

Back to top button