ಕ್ರೈಂ ನ್ಯೂಸ್

KSRTC ಬಸ್ ನಿಲ್ದಾಣದಲ್ಲಿ ಕಳುವಾದ ಪ್ರಕರಣಗಳಲ್ಲಿ 7 ಪ್ರಕರಣ ಪತ್ತೆ

ಸುದ್ದಿಲೈವ್/ಶಿವಮೊಗ್ಗ

2023 ನೇ ಸಾಲಿನಲ್ಲಿ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಇನ್ನೂ ಕ್ರಮವಾಗದಿದ್ದರೂ ಬರೋಬ್ಬರಿ 7 ಪ್ರಕರಣವನ್ನ ಪತ್ತೆ ಹಚ್ಚಿದ್ದಾರೆ.

ಏಳು ಪ್ರಕರಣದಲ್ಲಿ ಇಬ್ಬರು ಆರೋಪಿಗಳದ್ದೇ ಕೈಚಳಕವಿರೋದು ಗೊತ್ತಾಗಿದೆ. ಆಯನೂರಿನ ರೂಪಶ್ರೀ ಮತ್ತು ಚೆನ್ನಗಿರಿ ತಾಲೂಕಿನ  ಶ್ರೀನಿವಾಸ್ ಎಂಬುವರನ್ನ ಪೊಲೀಸರು ಪತ್ತೆ ಮಾಡಿದ್ದಾರೆ. 2023 ನೇ ಸಾಲಿನಲ್ಲಿ ಅಂದಾಜು 25 ಪ್ರಕರಣಗಳು ದಾಖಲಾಗಿತ್ತು.

25 ಪ್ರಕರಣದಲ್ಲಿ 7 ಪ್ರಕರಣ ಪತ್ತೆಯಾಗಿವೆ. ಆರಂಭದಲ್ಲಿ ಸರಿಸುಮಾರು 3-5 ಪ್ರಕರಣ ಪತ್ತೆಯಾಗಿವೆ. ಇದರಿಂದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ದಾಖಲಾದ ಅಂದಾಜು 25 ಪ್ರಕರಣದಲ್ಲಿ ಶೇ.44-50 ರಷ್ಟು ಪ್ರಕರಣ ಪತ್ತೆಯಾಗಿದೆ.‌ ಇದೇ 2022 ನೇ ಸಾಲಿನಲ್ಲಿ ದಾಖಲಾದ 12 ಪ್ರಕರಣದಲ್ಲಿ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ಆರೋಪಿ ಮಹಿಳೆಯ ಪ್ರಕರಣ

ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ನಿವಾಸಿ ಮುಜೀಬುಲ್ಲಾ‌ ಹಲಗೇರಿ ದಂಪತಿಗಳು ಸಹೋದರಿ ಮನೆಗೆ ಬಂದಿದ್ದು 29/8 ಶಿವಮೊಗ್ಗಕ್ಕೆ ಬಂದಿದ್ದು ವಾಪಾಸ್ ಶಿಕಾರಿಪುರದ ಕೆಎಸ್ ಆರ್ ಟಿಸಿ ಬಸ್ ಗೆ ಪ್ರಯಾಣಿಸಲು ಬಂದಿದ್ದು, ಮುಜೀಬುಲ್ಲಾರ ಪತ್ನಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಪರ್ಸ್ ನಲ್ಲಿದ್ದ 66 ಸಾವಿರ ರೂ‌ಮೌಲ್ಯದ 16.600 ಗ್ರಾಂ ಚಿನ್ನಾಭರಣ ಹಾಗೂ 1000 ರೂ. ನಗದು ಕಳುವಾಗಿತ್ತು.

ಆನೇಕಲ್ ನಿಂದ ಬಂದಿದ್ದ ಕರಿಯಮ್ಮನವರು ಸಾಗರದ ಬಸ್ ಹಿಡಿದು ಟಿಕೇಟ್ ಪಡೆಯಲು ಮುಂದಾಗಿದ್ದಾಗ 61 ಸಾವಿರ ರೂ. ಮೌಲ್ಯದ 27 ಗ್ರಾಂ ಚಿನ್ನಾಭರಣ, 14 ಸಾವಿರ ರೂ. ನಗದು ಕಳೆದುಕೊಂಡಿದ್ದರು.

15/8 ರಂದು ನ್ಯಾಮತಿಯಿಂದ ಬಂದಿದ್ದ ನಿಂಗಮ್ಮ ಎಂಬುವರು ಮೊಮ್ಮಗಳ ಹುಟ್ಟುಹಬ್ಬಕ್ಕಾಗಿ ಗಾಂಧಿ ಬಜಾರ್ ನಲ್ಲಿ 8 ಗ್ರಾಂ ಚಿನ್ನಾಭರಣದ ನೆಕ್ಲೆಸ್ ಖರೀದಿಸಿ ಕೆಎಸ್ ಆರ್ ಟಿ‌ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಸೀಟು ಹಿಡಯಲು ರಶ್ ಇದ್ದಿದ್ದರಿಂದ ಸರದಿ ಸಾಲಿನಲ್ಲಿ ನಿಂತಿದ್ದಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದ ನೆಕ್ಲೆಸ್ ಬಾಕ್ಸ್ ಕಳುವಾಗಿತ್ತು.

ಆದರೆ  ಈ ಮಹಿಳೆ ಪತ್ತೆಯಾಗಿದ್ದೇ ಕೇಸ್ ನಂಬರ್  444 ಪ್ರಕರಣದಲ್ಲಿ ಹೊನ್ನಾವರದಿಂದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುವಾಗ ಓರ್ವ ಮಹಿಳೆಯೊಂದಿಗೆ ಪಕ್ಕದ ಸೀಟ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಲಾರಿ ಚಾಲಕ ರುದ್ರಪ್ಪನವರಿಗೆ ಸ್ನೇಹ ಬೆಳಿದಿತ್ತು.  ನಿನ್ನೊಂದಿಗೆ ಸಮಯ ಕಳೆಯಬೇಕೆಂದು ಬಯಸಿದ ಮಹಿಳೆ ಶಿವಮೊಗ್ಗದ ಖಾಸಗಿ‌ ಲಾಡ್ಜ್ ನಲ್ಲಿ ರೂಮ್ ಮಾಡಿದ್ದರು. ಮಹಿಳೆಯೇ ಆಧಾರ್ ಕಾರ್ಡ್ ನೀಡಿ ರೂಂ ಮಾಡಿಕೊಂಡಿದ್ದರು.

ಮಲಗುವಾಗ‌ ಚಿನ್ನಾಭರಣ ತೆಗೆದಿಡು, ಇದನ್ನ ಸ್ವಾಮೀಜಿ ಒಬ್ಬರು ಹೇಳಿದ್ದು ಎಂದು ಹೇಳಿ ರುದ್ರಪ್ಪನಿಗೆ ಊಟ ತರಲು ಕಳುಹಿಸಿ ನಗದು ಮತ್ತು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಳು. ಇದರಿಂದ ರುದ್ರಪ್ಪ 50 ಸಾವಿರ ರೂ ನಗದು 18 ಗ್ರಾಂ ಚಿನ್ನಾಭರಣವನ್ನ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ರೂಪಶ್ರೀಯನ್ನ ಪತ್ತೆಹಚ್ಚಿದ್ದರಿಂದ ಮೂರು ಕಳುವು ಪ್ರಕರಣ ಪತ್ತೆಯಾಗಿದೆ.

ಆರೋಪಿ ಶ್ರೀನಿವಾಸ್ ಪ್ರಕರಣ

ಮೊಮ್ಮೊಗಳ ಜೊತೆ ಹನುಮಂತಪ್ಪ ಎಂಬುವರು ಹರ್ಷಿತ್ ಎಂಬುವನ ಶಾಲೆ ಶುಲ್ಕ ಕಟ್ಟಲು ಬಂದಾಗ ಕೆಎಸ್ ಆರ್ ಟಿಸಿ ಬಸ್ ನಲ್ಲಿ 60 ಸಾವಿರ ನಗದು ಕಳುವಾಗಿತ್ತು.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕು ಬ್ಯಾಡಗೇರಿಯ ಹುಲುಗರಡಿ ಗ್ರಾಮದ ನಿವಾಸಿ ಆಲೂರು ಚೌಡಪ್ಪ ತಮ್ಮ ಮಕ್ಕಳು ಬಾಳೆಹೊನ್ನೂರಿನ ಗಂಗೇಗಿರಿಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನ ನೋಡಿಕೊಂಡು ಬರಲು ಶಿವಮೊಗ್ಗದ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಚೆಡ್ಡಿ ಜೇಬಿನಿಂದ 37 ಸಾವಿರ ರೂ ನಗದು ಕಳುವಾಗಿತ್ತು.

ಆನವಟ್ಟಿ ಹೋಬಳಿ ಕಮನವಳ್ಳಿ ಗ್ರಾಮದ ಪ್ರಭಾಕರ್ ಸ್ನೇಹಿತರೊಂದಿಗೆ ಬೆಂಗಳೂರಿಗೆ ಹೋಗಿದ್ದು, ಬೆಂಗಳೂರಿನಿಂದ ವಾಪಾಸ್ ಕಮನವಳ್ಳಿ ಗ್ರಾಮಕ್ಕೆ ಹೋಗುವಾಗ ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದು ಆನವಟ್ಟಿ ಬಸ್ ಹತ್ತುವಾಗ ಪ್ಯಾಟ್ ನ‌ ಜೇಬಿನಲ್ಲಿದ್ದ 20 ಸಾವಿರ ರೂ. ಹಣ ಕಳುವಾಗಿತ್ತು. ಈ ಪ್ರಕರಣದಲ್ಲಿ ಶ್ರೀನಿವಾಸ್ ಪ್ರಮುಖ ಆರೋಪಿಯಾಗಿದ್ದಾರೆ.

ಪಿಐ ರವಿ ಪಾಟೀಲ್ ನೇತೃತ್ವದಲ್ಲಿ ತಂಡ ರಚನೆ 

ಆರೋಪಿಗಳನ್ನ  ಪತ್ತೆಹಚ್ಚಲು ದೊಡ್ಡಪೇಟೆ ಪೊಲೀಸ್ ಇನ್ ಸ್ಪೆಕ್ಟರ್ ರವಿ ಸಂಗನಗೌಡ ಪಾಟೀಲ್ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು.  ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿಗಳಾದ ಪಾಲಾಕ್ಷ ನಾಯ್ಕ, ಲಚ್ಚಾ ನಾಯ್-, ಚಂದ್ರ ನಾಯ್,  ನಿತಿನ್- ಪುನೀತ್ ರಾವ್-, ಹೆಮಂತ್ ಕುಮಾರ್ , ಮಹಿಳಾ ಸಿಬ್ಬಂದಿ ಶ್ರೀಮತಿ ಸುಮಿತಾಬಾಯಿ ರವರನ್ನು ಒಳಗೊಂಡ ತಂಡ ಈ ಆರೋಪಿಳನ್ನ ಪತ್ತೆ ಮಾಡಿ ಬಂಧಿಸಿದೆ.‌ ಪೊಲೀಸರ ಈ ಸಾಧನೆಗೆ ಎಸ್ಪಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ-https://suddilive.in/archives/6314

Related Articles

Leave a Reply

Your email address will not be published. Required fields are marked *

Back to top button