ನಗರ‌ ಸುದ್ದಿಗಳು

ಮತದಾನ ಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ದಿನಕ್ಕೊಂದು ಆಟ ಮತದಾನದ ಪಾಠ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಮತಜಾಗೃತಿ ಇಂದು ಕೊಂಚ ಬದಲಾಗಿದೆ. ಈ ಬಾರಿ ಬೀದಿ ನಾಟಕದ ಮೂಲಕ ಮತ ಜಾಗೃತಿಗೆ ಮಹಾನಗರ ಪಾಲಿಕೆಯ ಸ್ವೀಪ್ ಕಾರ್ಯಕರ್ತರು ಮುಂದಾಗಿದ್ದಾರೆ.

ಶಿವಮೊಗ್ಗ ಲೋಕಸಭಾ ಚುನಾವಣೆ ಸಂಬಂಧ, ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣ ಮತದಾನವಾದ ಬೂತ್ ಸಂಖ್ಯೆ: 56 ಮತ್ತು 57 ರಲ್ಲಿ ದಿನಾಂಕ 5/4/2024 ರ ಈ ದಿನ ಬಸವನ ಗುಡಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಹಾಗೂ ಮತದಾನ ಜಾಗೃತಿ ಸಂಬಂಧ ಬೀದಿ ನಾಟಕ ಮಾಡಿಸಲಾಯ್ತು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳು, ಬಿ.ಎಲ್.ಓ ಮತ್ತು ಮೇಲ್ವಿಚಾರಕರು, ಹಾಜರಿದ್ದರು.

ಇದನ್ನೂ ಓದಿ-https://suddilive.in/archives/12186

Related Articles

Leave a Reply

Your email address will not be published. Required fields are marked *

Back to top button