ಒಂದು ಗಂಟೆಯ ವರೆಗೆ ಮಾತ್ರ ಗಂಡು ಮಗುವಿಗೆ ಅಮ್ಮ ಆಗಿದ್ದ ಆ ತಾಯಿ!

ಸುದ್ದಿಲೈವ್/ಶಿವಮೊಗ್ಗ

ಒಂದು ಗಂಟೆಗಳ ವರೆಗೆ ಮಾತ್ರ ಆ ತಾಯಿ ಗಂಡು ಮಗುವಿಗೆ ತಾಯಿಯಾಗಿದ್ದಳು. ಒಂದು ಗಂಟೆಯ ನಂತರ ಆ ಮಗುವಿಗೆ ತಾಯಿ ನೀನಲ್ಲ ನೀನು ಜನ್ಮ ನೀಡಿದ್ದುಹೆಣ್ಣು ಮಗುವಿಗೆ ಎಂದು ವೈದ್ಯರು ಹೇಳಿದ್ದಕ್ಕೆ ನಿನ್ನೆ ಮೆಗ್ಗಾನ್ ಮಕ್ಕಳ ವಾರ್ಡ್ ನಲ್ಲಿ ಜನಾವೋ ಜನ ನೆರೆದಿದ್ದರು. ವೈದ್ಯರೇ ತೀರ್ಮಾನಿಸಲಿ ನಮ್ಮ ಮಗು ಯಾವುದು ಎಂದು ತಾಯಿಯಂದಿರ ಅಳಲಾಗಿತ್ತು.
ನಿನ್ನೆ ಶಿಕಾರಿಪುರ ತಾಲೂಕಿನ ಸಬೀನ ಎಂಬ ಮಹಿಳೆ ನಿನ್ನೆ ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದಾಗ ಮೆಗ್ಗಾನ್ ವೈದ್ಯರು ತಂದೆ ತಾಯಿಯ ಹೆಸರು ಬರೆದು ಮಗುವಿನ ಕೈಗೆ ಟ್ಯಾಗ್ ಮಾಡಿ ಆರೈಕೆ ಕೇಂದ್ರದಲ್ಲಿಡುತ್ತಾರೆ. ಆದರೆ ಈ ಟ್ಯಾಗ್ ಸಿಬ್ಬಂದಿಗಳ ಯಡವಟ್ಟಿನಿಂದ ಮಗು ಬದಲಾಗಿತ್ತು.
ಇದೇ ವೇಳೆ ಕಾವ್ಯರಿಗೆ ಹೆರಿಗೆಯಾಗಿದ್ದು ಇವರಿಗೂ ಗಂಡು ಮಗು ಹುಟ್ಟಿತ್ತು. ಕಾವ್ಯರ ಹೆಸರಿನ ಬದಲು ಮಗುವಿಗೆ ಟ್ಯಾಗ್ ಹಾಕುವ ವೇಳೆ ಸಿಬ್ವಂದಿಗಳು ಮಾಡಿಕೊಂಡ ಯಡವಟ್ಟಿನಿಂದಾಗಿ ಸಬೀನಾ ಕಣ್ಣೀರು ಹಾಕುವಂತೆ ಮಾಡಿದೆ. ಕಾವ್ಯಾರಿಗೆ ಹೆರಿಗೆಯಾದ ವೇಳೆ ಗಂಡು ಮಗುವೆಂದು ಹೇಳಲಾಗಿತ್ತು. ಆದರೆ ಹೆಣ್ಣು ಮಗುವನ್ನ ತಂದ ಸಿಬ್ವಂದಿಗಳಿಗೆ ಕಾವ್ಯ ಪ್ರಶ್ನಿಸಿದ್ದರು.
ಆಗ ಪರಿಶೀಲಿಸಿದಾಗ ಮಗು ಅದಲು ಬದಲಾಗಿರುವುದು ತಿಳಿದು ನಂತರ ಸಬೀನರ ಬಳಿಯಿತುವ ಗಂಡು ಮಗುವನ್ನ ತಂದು ಕಾವ್ಯಾರಿಗೆ ಒಪ್ಪಿಸಲಾಗಿದೆ.
ಮಗು ಅದಲು ಬದಲು ಪ್ರಕರಣ; ಮೆಗ್ಗಾನ್ ಆಸ್ಪತ್ರೆ ಸರ್ಜನ್ ಹೇಳಿದ್ದಿಷ್ಟು
ಶಿವಮೊಗ್ಗ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್ನಲ್ಲಿ ಮಗು ಅದಲು ಬದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಮಾತನಾಡಿ ‘ ಸಬೀನಾಗೆ ಹೆಣ್ಣು ಮಗುವಾಗಿತ್ತು, ಕಾವ್ಯಾಗೆ ಗಂಡು ಮಗು ಜನಿಸಿತ್ತು. ಹೆರಿಗೆ ವಾರ್ಡ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಗೊಂದಲ ಸೃಷ್ಟಿಯಾಗಿತ್ತು. ಗಂಡು ಮಗುವಿನ ಕೈಗೆ ತಾಯಿ ಸಬೀನಾ ಎನ್ನುವ ಟ್ಯಾಗ್ ಹಾಕಿದ್ದರು. ಸ್ವಲ್ಪ ಹೊತ್ತಿನ ನಂತರ ಅದಲು ಬದಲಾಗಿರುವುದು ಗಮನಕ್ಕೆ ಬಂದಿದೆ.
ಸಬೀನಾ ಕುಟುಂಬಸ್ಥರಿಂದ ಗಂಡು ಮಗುವನ್ನು ವಾಪಸ್ ಪಡೆದಿದ್ದ ಸಿಬ್ಬಂದಿ, ಹೆರಿಗೆ ವಾರ್ಡ್ನಲ್ಲೇ ತಾಯಂದಿರಿಗೆ ಮಗುವನ್ನು ತೋರಿಸಿರುತ್ತಾರೆ. ಗಂಡು ಮಗುವಿಗೆ ಟ್ಯಾಗ್ ಹಾಕುವಾಗ ಸಿಬ್ಬಂದಿ ಎಡವಟ್ಟಿನಿಂದ ಈ ಗೊಂದಲ ಸೃಷ್ಠಿ ಆಗಿದೆ. ಬಳಿಕ ಇಬ್ಬರು ತಾಯಂದಿರು ತಮಗೆ ಆಗಿರುವ ಮಗುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಬೀನಾಗೆ ಹೆಣ್ಣು ಮಗು, ಕಾವ್ಯಾಗೆ ಗಂಡು ಮಗು ಹಸ್ತಾಂತರ ಮಾಡಿದ್ದೇವೆ ಎಂದರು.
ಇದನ್ನೂ ಓದಿ-https://suddilive.in/archives/1171
