ಕ್ರೈಂ ನ್ಯೂಸ್

ಎನ್ ಐಎ ವಿಚಾರಣೆ ಕುರಿತು ಸಾಯಿವರ‌ ಪ್ರಸಾದ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಮತೀನ್ ಕ್ರಿಪ್ಟೋ‌ಕರೆನ್ಸಿಯನ್ನ ಸಾಯಿ ಪಿಎ ಎಂಬ ಹೆಸರಿನ ಯೂಸರ್ ನೇಮ್ ಬಳಸಿಕೊಂಡ ಪರಿಣಾಮ ತೀರ್ಥಹಳ್ಳಿಯ ಸಾಯಿ ಪ್ರಸಾದ್ ಗೆ ಎನ್ಐಎ ವಿಚಾರಣೆಗೆ ಕರೆದಿದೆ ಎಂದು ಸಾಯಿ ಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ವಿಚಾರದಲ್ಲಿ ತೀರ್ಥಹಳ್ಳಿಯ ಮತೀನ್ ಮತ್ತು‌ ಮುಜಾವಿಲ್ ಎಂಬ ಯುವಕರು ಆರೋಪಿಗಳಾಗಿದ್ದಾರೆ. ಆರೋಪಿಗಳು ಆಪ್ ಬಳಕೆ ವಿಚಾರದಲ್ಲಿ ಸಾಯಿ ಪಿಎ ಎಂಬ ಹೆಸರನ್ನ‌ ಯೂಸರ್ ನೇಮ್ ಆಗಿ ಬಳಸಿದ್ದರಿಂದ ಎನ್ ಐಎ ಗೆ ವಿಚಾರಣೆಗೆ ಕರೆದಿದೆ.

ವಿಚಾರಣೆಗೆ ಹಾಜರಾಗಲು ಏ. 4 ರಂದು ಎನ್ ಐಎ ಸಾಯಿಪ್ರಸಾದ್ ರನ್ನ ವಿಚಾರಣೆಗೆ ಕರೆದಿದೆ. ಬೆಂಗಳೂರಿನಲ್ಲಿ ಹೋಟೆಲ್ ನಲ್ಲಿ ಕೆಲಸದಲ್ಲಿದ್ದ ಸಾಯಿ ಪ್ರಸಾದ್ ನಂತರ ತೀರ್ಥಹಳ್ಳಿ ಜೀವನೋಪಾಯವಾಗಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದಾರೆ.

ತೀರ್ಥಹಳ್ಳಿಯ ಬೆಟ್ಟಮಕ್ಕಿಯ ನಿವಾಸಿಯಾಗಿರುವ ಸಾಯಿವರಂ ಪ್ರಸಾದ್ ಸಣ್ಣವರಿದ್ದಾಗ ಮತೀನ್ ಜೊತೆ ಫುಟ್ ಬಾಲ್ ಆಟವಾಡಿದ್ದಾರೆ. ಈಗ ಉಗ್ರವಾದಿಯ ಆರೋಪ ಹೊಂದಿರುವ ಮತೀನ್ ಕ್ರಿಪ್ಟೋಕರೆನ್ಸಿಯಲ್ಲಿ ಸಾಯಿ ಪಿಎ ಎಂದು ಹೆಸರನ್ನ ಯೂಸರ್ ನೇಮ್ ಆಗಿ ಬಳಸಿದ್ದರ ಕುರಿತಾಗಿ ವಿಚಾರಣೆ ನಡೆಸಲಾಗಿದೆ.

2021 ರಲ್ಲಿ ಸಾಯಿ ಪ್ರಸಾದ್ ಕ್ರಿಪ್ಟೋ ಕರೆನ್ಸಿ ಬಳಕೆ ಮಾಡುತ್ತಿದ್ದರು. ಎರಡು ಕ್ರಿಪ್ಟೋ ಕರೆನ್ಸಿಯ ಅಕೌಂಟ್ ತೆರೆದಿರುತ್ತಾರೆ. ಯೂಟ್ಯೂಬ್ ನೋಡಿ ಕ್ರಿಪ್ಟೋ ಕರೆನ್ಸಿ ಬೂಮ್ ಆಗಲಿದೆ ಎಂಬ ಉದ್ದೇಶದಿಂದ ಒಂದರಲ್ಲಿ 40 ಸಾವಿರ ರೂ. ಮತ್ತೊಂದರಲ್ಲಿ ಸಣ್ಣ ಹಣ ಹೂಡಿಕೆ ಮಾಡಿದ್ದಾರೆ. ಆದರೆ ಕ್ರಿಪ್ಟೋಕರೆನ್ಸಿಯಲ್ಲಿ ನಷ್ಟ ಹೊಂದಿದ ಕಾರಣ ಹೂಡಿಕೆ ನಿಲ್ಲಿಸಿದ್ದಾರೆ.

ಎರಡೂ ಅಕೌಂಟ್ ಆಧಾರ ಕಾರ್ಡ್ಗಳ ಮೂಲಕ ಕೆವೈಸಿ ಬಳಸಿ ಆರಂಭಿಸಿರುವ ಕ್ರಿಪ್ಟೋ ಅಕೌಂಟ್ಸ್ ಆಗಿರುತ್ತದೆ. ಈ ಕುರಿತು ಎನ್ ಐಎ ಸಾಕ್ಷಿಗೋಸ್ಕರ ಕರೆಸಿರುವುದಾಗಿ ಸಾಯಿ ಸ್ಪಷ್ಟಪಡಿಸಿದ್ದಾರೆ. ಏ. 5 ರಂದು ಬೆಳಿಗ್ಗೆ 10-30 ಗೆ ಎನ್ ಐಎ ಕಚೇರಿಗೆ ತೆರಳಿದ ಸಾಯಿವರಂ‌ಪ್ರಸಾದ್ ಮಧ್ಯಾಹ್ನದ ವರೆಗೂ ವಿಚಾರಣೆ ನಡೆಸಿ ನಂತರ ಸಂಜೆಯ ಮೇಲೆ ಕಳುಹಿಸಿದ್ದಾರೆ.

ಬಿಜೆಪಿ ತೀರ್ಥಹಳ್ಳಿ ನಗರ ಯುವ ಘಟಕದ ಕಾರ್ಯದರ್ಶಿಯಾಗಿರುವ ಸಾಯಿ ಪ್ರಕಾಶ್ ಆಪ್ ಬಳಕೆ ಮಾಡುವಾಗ ಹುಷಾರಾಗಿ ಬಳಸಿ. ನನಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಅಂತಹ ಆರೋಪಗಳಿಗೆ ನಮ್ಮ ಪೋಷಕರೆ ಬಂತಹ ಅವಕಾಶಕೊಡಲ್ಲ ಎಂದಿದ್ದರು.

ಮೊಬೈಲ್ ಅಂಗಡಿಯ ಮಾಲೀಕ ಸಬೀಲ್, ನಜೀರ್ ಮತ್ತು ನವೀದ್ ಎಂಬುವರು ಸಾಯಿ ಪ್ರಸಾದ್ ಗೆ ಸ್ನೇಹಿತರಾಗಿದ್ದಾರೆ. ಇವರ ಮತ್ತು ಮತೀನ್ ನಡುವೆ ಏನು ಟ್ರಾನ್ಸೇಕ್ಷನ್ ನಡೆದಿದೆ ಗೊತ್ತಿಲ್ಲ. ನನನ್ನೂ ಮತ್ತು ನನ್ನ ಸಹೋದರನ್ನ ಎನ್ಐಎ ವಿಚಾರಣೆ ಮಾಡಿ ಕಳುಹಿಸಿದೆ ಎಂದುಸಾಯಿವರಂ ಪ್ರಸಾದ್ ಹೇಳಿಕೆ ನೀಡಿದರು. ಇದರಿಂದ ಮಾಜಿ ಗೃಹ ಅಚಿವರ ಬಹಿರಂಗ ಹೇಳಿಕೆಗೂ ಸಾಯಿವರಂ ಎನ್ಐಎ  ತನಿಖೆ ವಿಚಾರಣಗೂ ಅಜಗಜಾಂತರ ವ್ಯತ್ಯಾಸವಿದೆ.

ಇದನ್ನೂ ಓದಿ-https://suddilive.in/archives/12215

Related Articles

Leave a Reply

Your email address will not be published. Required fields are marked *

Back to top button