ಕ್ರೈಂ ನ್ಯೂಸ್

ಬ್ಯಾಂಕ್ ನ ಲೋನ್ ವಿಚಾರಣೆ ಮಾಡುವ ಅಧಿಕಾರಿಗಳು ಎಂದು ಹೇಳಿ ಮನೆ ದರೋಡೆ!

ಸುದ್ದಿಲೈವ್/ಹೊಳೆಹೊನ್ನೂರು

ದಾರಿ ಮೇಲೆ ನಡೆದುಕೊಂಡು ಹೋಗುವ ಮಹಿಳೆಯರಿಗೆ ಪೊಲೀಸನವರು ಎಂದು ನಂಬಿಸಿ ಚಿನ್ನಾಭರಣವನ್ನ‌ ಪೇಪರ್ ನಲ್ಲಿ ಸುತ್ತಿಕೊಡುತ್ತೇನೆಂದು ಹೇಳಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನ ಕಿತ್ತುಕೊಂಡು ಹೋಗುತ್ತಿದ್ದ ಪ್ರಕರಣಗಳು ಇತ್ತೀಚೆಗೆ ನಡೆದಿದ್ದವು.

ಚಿನ್ನಾಭರಣಗಳಿಗೆ ಪಾಲಿಷ್ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯರ ಮಾಂಗಲ್ಯಸರಗಳು ಅಪಹರಿಸಿರುವ ಘಟನೆಯೂ ಈಗ ಹಳೆಯದಾಗಿದೆ.ಈಗ ಲೇಟೆಸ್ಟ್  ಆಗಿ ದರೋಡೆ ನಡೆದಿದೆ. ಬ್ಯಾಂಕ್ ನಿಂದ ಲೋನ್  ವಿಚಾರಣೆಯ ಮಾಡುವ ಅಧಿಕಾರಿಗಳು ಎಂದು ಮನೆಗೆ ಬಂದು ಮನೆಯಲ್ಲಿರುವ ನಗದು, ಮೊಬೈಲ್, ಚಿನ್ನಾಭರಣವನ್ನ  ದೋಚಿಕೊಂಡು ಹೋಗಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿ.ಬೀರನಹಳ್ಳಿಯಲ್ಲಿ ಹರ್ಷಿತ್ ಕನಕಾನಂದ ಎಂಬುವರ ಮನೆಗೆ ಇಬ್ಬರು ಅಪರಿಚಿತರು ಬಂದು ನಾವು ಬ್ಯಾಂಕ್ ಲೋನ್ ವಿಚಾರಣೆ ಮಾಡುವ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಹರ್ಷಿತ್  ಯಾವ ಬ್ಯಾಂಕ್ ಎಂದು ಕೇಳಿದ್ದಕ್ಕೆ ಮತ್ತೋರ್ವ ನೀರು ಕೇಳಿದ್ದಾನೆ. ನೀರು ತರಲು ಹೋದ ಹರ್ಷಿತ್ ನ ಹಿಂದೆನೆ ನಡೆದ ಅಪರಿಚಿತರು ಏಕಾಏಕಿ  ಅಡುಗೆ ಮನೆಯೊಳಗೆ ನುಗ್ಗಿದ್ದಾರೆ.

ಓರ್ವ ಹರ್ಷಿತ್ ಕನಕಾರ ಬಾಯಿ ಮುಚ್ಚಿದ್ದಾರೆ.  ಇನ್ನೊಬ್ಬ  ಬಾಯಿಗೆ ಬಟ್ಟೆಯನ್ನು ಕಟ್ಟಿ  ಮನೆಯ ಮಾಸ್ಟರ್ ಬೆಡ್ ರೂಂಗೆ ಕರೆದುಕೊಂಡು ಹೋಗಿದ್ದಾನೆ.  ಅಲ್ಲಿ ಒಬ್ಬ ಅಸಾಮಿಯು ತನ್ನ ಬಲಗೈಯಿಂದ ಪಿರ್ಯಾದಿದಾರರ ಎಡ ಕಪಾಳಕ್ಕೆ ಹೊಡೆದು ಹಣವನ್ನು ಕೊಡು ಅಂತಾ ಹೇಳಿದ್ದಾನೆ.  ಆಗ ಹಣವಿಲ್ಲ ಅಂತಾ ಹೇಳಿದಾಗ ಆ ಬೆಡ್ ರೂಮ್ ನ ವಾಡ್ರೂಬ್ ಚೆಕ್ ಮಾಡಿ ಅಲ್ಲಿದ್ದ ಬೀಗದ ಕೀ ಗಳನ್ನು ತಗೆದುಕೊಂಡು  ಇನ್ನೊಂದು ಬೆಡ್ ರೂಂಮ್ ಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿದ್ದ ಗಾದ್ರೇಜ್ ಬೀಗವನ್ನು ಅವರ ಬಳಿ ಇದ್ದ ಕೀಯಿಂದ ತಗೆದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಮೊಬೈಲ್  ಬೆದರಿಕೆ ಹಾಕಿ ಒಟ್ಟು 1,13,000/- ರೂ ಮೌಲ್ಯದ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ. ಆಗ ಹರ್ಷಿತ್ ಗಾಬರಿಗೊಂಡು ತಲೆ ಸುತ್ತು ಬಂದು ಅಲ್ಲೇ ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ  ಮನೆಗೆ ಬಂದ ತಂದೆ 26 ವರ್ಷದ ಮಗನನ್ನ‌ ಉಪಚರಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ದಿನ ಹೊಳೆಹೊನ್ನೂರು‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/4778

Related Articles

Leave a Reply

Your email address will not be published. Required fields are marked *

Back to top button