ನಗರ‌ ಸುದ್ದಿಗಳು

ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಖಂಡಿಸಿ ಇಂದು ಗೋಪಿ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕ ಬೃತತ್ ಪ್ರತಿಭಟನೆ ನಡೆಸಿತು‌

ಕ್ಷಮಿಸು ಬಿಡು ನೇಹಾ ಕಾಂಗ್ರೆಸ್ ಗೆ ರಾಮಭಕ್ತರ ವಿರೋಧಿಗಳ ನಡುವೆ ಇದೆ ಸ್ನೇಹಾ,  ರಾಮಭಕ್ತರನ್ನ ವಿರುದ್ಶ ನುಡಿದಂತೆ ನಡೆದ ಸರ್ಕಾರ ಖಾನ್ ಗ್ರೆಸ್ ಸರ್ಕಾರ, ಜಿಹಾದಿ ಬೆಂಬಲಿತ ಸರ್ಕಾರಕ್ಕೆ ದಿಕ್ಕಾರ ಹೀಗೆ ಮಹಿಳೆಯರು ಪ್ಲಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದೆ.

ಎಂಎಲ್ ಸಿ ಅರುಣ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಜಾರಕ್ಕೆ ಬಂದು 11 ತಿಂಗಳಾಯಿತು. 11 ತಿಂಗಳಲ್ಲಿ 11 ಬಾರಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ಮತ್ರ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಸಿಕ್ಕಿದೆ. ಅದನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ದೂರಿದರು.

ಜಿಲ್ಲಾ‌ ಮಹಿಳಾ ಅಧ್ಯಕ್ಷ ಗಾಯಿತ್ರಿದೇವಿ ಮಲ್ಲಪ್ಪ, ಮಹಿಳೆಯರಿಗೆ ರಾಜ್ಯದ ಕಾಂಗ್ರೆಸ್ ಅಧಿಕಾರದಲ್ಲಿ ಸುರಕ್ಷತೆ ಇಲ್ಲ. ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಏರಿಸಬೇಕು.ಎಂದು ಆಗ್ರಹಿಸಿದರು.

ಎಂಎಲ್ ಸಿ ರದ್ರೇಗೌಡ ಮಾತನಾಡಿ, ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಲಾಯಿತು ಮೊದಲಿಗೆ ಹಾಗೆ ಕೂಗೆಬಿಲ್ಲ ಎಂದು ವಾದಿಸಿದರು. ನಂತರ ಒಪ್ಪಿಕೊಂಡರು. ಕಾಂಗ್ರೆಸ್ ಸರ್ಕಾರ ಬಂಡಗೆಟ್ಟರೀತಿ ಆಡಳಿತ ನಡೆಸುತ್ಯಿದ್ದಾರೆ.

ಇಡೀ ಸಮಾಜ ತಲೆತಗ್ಗಿಸುವಂತ ಕೆಲಸಕ್ಕೆ ಕುಮ್ಮಕ್ಕು ನೀಡ್ತಾ ಇದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ, ರಾತ್ರಿಮಹಿಳೆಯರು ಮಾತ್ರವಲ್ಲ ಪುರುಷರು ಸಹ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಅಣವಾಗಿದೆ. ಇಂತಹ ಸ್ಥಿತಿ ನಿರ್ಮಿಸಿಎಉವ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ ಎಂದರು.

ಸಂಸದ ರಾಘವೇಂದ್ರ ಮಾತನಾಡಿ, ಸರ್ಕಾರಕ್ಕೆ ಅಧಿಕಾರದ‌ ಮದವೇರಿದೆ. ನಿರಂತರವಾಗಿ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ. ಕುಂಕುಮ ಹಚ್ಚಿಕೊಂಡು ದೇವರ ಪೂಜೆ ಮಾಡಲು ಅವಕಾಶವಿದ್ದರೂ ಕಾಂಗ್ರೆಸ್ ತುಷ್ಠೀಕರಣ ನಡೆಸುತ್ತಿದೆ. ಕಾಂಗ್ರೆಸ್ ಗೆ ನಿರಂತರವಾಗಿ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ.

ಹಿಂದೂಗಳನ್ನ ಕೆಣಕುವ ಕೆಲಸ ನಿಲ್ಲಿಸಿ. ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಉಳಿದುಕೊಂಡಿದೆ. ಇನ್ನು 15 ದಿನಗಳಲ್ಲಿ ನಿಮ್ಮ ಕೈಗೆ ಜನ ಚೊಂಬು ನೀಡುತ್ತಾರೆ. ಹಿಂದೂಗಳು ದೌರ್ಬಲ್ಯ ಎಂದು ಕೊಢರೆ ನಿಮ್ನ ಜಾಗ ಏನು ಎಂದು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಚೆನ್ನಬಸಪ್ಪ ಜಿಲ್ಲಾ ಬಿಜೆಪಿ ಅಧ್ಯಕ್ಷ‌ ಟಿ.ಡಿ ಮೇಘರಾಜ್,  ಮಾಜಿ ಉಪಮೇಯರ್ ಸುರೇಖಾ ಮುರಳಿಧರ್, ಎಂಬಿ ಭಾನುಪ್ರಕಾಶ್ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button