ನಗರ‌ ಸುದ್ದಿಗಳು

ಜಾತ್ರ ಮಹೋತ್ಸವ ಯಶಸ್ವಿಗೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ ಸಮಿತಿ

ಸುದ್ದಿಲೈವ್/ಶಿವಮೊಗ್ಗ

ಈ ಬಾರಿಯ ಮಾರಿ ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬಂದಿದ್ದಾರೆ.‌ಜಾತ್ರೆಯನ್ನ ಯಶಸ್ವಿಯಾಗಿ ನಡೆಸಿಕೊಡಿಸಿದ್ದಾರೆ. ಎಂದು ಕೋಟೆ ಮಾರಿಕಾಂಬ  ಸೇವಾ ಸಮಿತಿ ಅಧ್ಯಕ್ಷ ಮರಿಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾತ್ರೆ ಯಶಸ್ವಿಯಾಗಿದೆ. ಸಾರ್ವಜನಕರಿಗೆ ಧನ್ಯವಾದ ತಿಳಿಸಿದ ಅವರು ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಪಟುಗಳಿಂದ ಕುಸ್ತಿ ನಡೆಸಿದ್ದೇವೆ. ಅಖಾಡ ವೀಕ್ಷಣೆಗೆ ಗ್ಯಾಲರಿಯನ್ನ ನಿರ್ಮಿಸಲಾಗಿತ್ತು. ಕ್ರೀಡಾಭಿಮಾನಿಗಳು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಒಂದು ಪಿಕ್ ಪ್ಯಾಕೆಟ್ ಅಥವಾ ಚೈನ್ ಸ್ನ್ಯಾಚಿಂಗ್ ಪ್ರಕರಣ‌ ನಡೆಯದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ. ಮದ್ಯರಾತ್ರಿ 12 ಗಂಟೆಗೆ ಮಹಿಳೆಯರು ದೇವಿಯ ದರ್ಶನ ಪಡೆದಿದ್ದಾರೆ ಎಂದರು.

ಜಾತ್ರೆಯಲ್ಲಿ ಸಿಸಿ ಟಿವಿ ಅಳವಡಿಸಲಾಗಿತ್ತು. ಇದರಿಂದ ಒಂದು ಅಹಿತಕರ ನೇಯದಂತೆ ಪೊಲೀದ್ ಇಲಾಖೆ‌ ಸಹಕರಿಸಿದರ. ನಗರದಲ್ಲಿ ಜಾತ್ರೆ ಎಂದರೆ ಭಾರಿ ಪ್ರಾಣದ ತ್ಯಾಜ್ಯಗಳು ಸಂಗ್ರಹವಾಗುತ್ತವೆ. ಅವುಗಳನ್ನ  ವಿಲೇವಾರಿ ಮಾಡಿದ್ದೇವೆ. ಇದಕ್ಕೆ ಸಹಕರಿಸಿದ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ನೀರಿನ ಕೊರತೆಯಾಗದಂತೆ ವಾಟರ್ ಬೋರ್ಡ್ ಅಧಿಕಾರಿಗಳು, ಮೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಜಾತ್ರೆಯನ್ನ ಯಶಸ್ವಿಯಾಗುವಂತೆ ನೋಡಿಕೊಂಡ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪನವರಿಗೂ ಧನ್ಯವಾದ ತಿಳಿಸಿದರು.

ಕುಸ್ತಿಯಲ್ಲಿ ಹರಿಯಾಣ ಕೇಸರಿ ಈ ಬಾರಿ  ಬೆಳ್ಳಿಗದೆ ವಿಜೇತರಾಗಿದ್ದಾರೆ. ದೇವಿಯ ಅಲಂಕಾರ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಶ್ರೀಕಾಂತ್ ಮತ್ತು ತಂಡದ ಶ್ರಮವಿದೆ. ಸಮಿತಿಯು ತಂಡದ ರೀತಿಯಲ್ಲಿ ಕೆಲಸ ಮಾಡಿದ ಕಾರಣ ಜಾತ್ರೆಯು ಯಶಸ್ವಿಯಾಗಿದೆ. ಹಾಗಾಗಿ ಜಾತ್ರೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಸಮಿತಿಯ ವಿ. ರಾಜು ಮಾತನಾಡಿ ಕೆಲ ವಾಟ್ಸಪ್ ಗ್ರೂಪ್ ನಲ್ಲಿ ಸಮಿತಿಯಿಂದ ಕೆಲ ಸಮುದಾಯವನ್ನ ಕಡೆಗಾಣಿಸಲಾಗಿದೆ ಎಂದು ಆರೋಪಿಸಲಾಗಿದೆ. ಅದು ಸತ್ಯಕ್ಕೆ‌ ದೂರವಾದದು ಎಂದರು.

ಸಾರ್ವಜನಿಕರಿಗೆ ಪಾಸ್ ಕೊಡದ ಬಗ್ಗೆ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡದ ಸಮಿತಿ ನಂತರ  ಮಾ.12 ರಂದು ಮಧ್ಯಾಹ್ನ1 ಗಂಟೆಗೆ ಪಾಸ್ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ-https://suddilive.in/archives/11068

Related Articles

Leave a Reply

Your email address will not be published. Required fields are marked *

Back to top button