ಸ್ಥಳೀಯ ಸುದ್ದಿಗಳು

ಲೋಕ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ-ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ‌ ನಂತರ ಸರಕಾರ ಬೀಳುವ ಪ್ರಕ್ರಿಯೆ ಆರಂಭವಾಗ್ತದೆ ಎಂದು ಸಂಸದ ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಬಹಳ ದಿನ ಇರುತ್ತದೆ ಅನಿಸಲ್ಲ. ಇಡಿ ದೇಶದಲ್ಲಿ ಕಾಂಗ್ರೆಸ್ ಸರಕಾರ ಉಳಿದಿರೋದು ಕರ್ನಾಟಕದಲ್ಲಿ ಮಾತ್ರ, ಅಪ್ಪಿತಪ್ಪಿ ಜನ್ಮ ತಾಳಿ ಶಿಶು ರೀತಿ ಈ ಸರಕಾರ ಇದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ‌ ನಂತರ ಸರಕಾರ ಹೋಗುವ ಪ್ರಕ್ರಿಯೆ ಆರಂಭವಾಗ್ತದೆ. ಆ ಪಕ್ಷದ ಶಾಸಕರೇ ಬೇಸತ್ತು ಬಿಜೆಪಿ ಕಡೆ ಬರುತ್ತಾರೆ ಎಂದು ಭವಿಷ್ಯ ನುಡಿದರು.

ಶಿವಮೊಗ್ಗದಲ್ಲಿ ಅತಿರುದ್ರ ಮಹಾಯಾಗ ನಡೆದಿದೆ. ಮೋದಿ ಮತ್ತೊಮ್ಮೆ ಪಿಎಂ ಆಗಬೇಕು. ಬರಗಾಲ ನಿವಾರಣೆ ಆಗಬೇಕು. ಜಿಲ್ಲೆಯ ಪ್ರಮುಖರು ಹಾಗೂ‌ ಉಜ್ಜಯಿನಿ ಜಗದ್ಗುರುಗಳ ನೇತೃತ್ವದಲ್ಲಿ ಮಹಾಯಾಗ ನಡೆದಿದೆ. ನಿನ್ನೆ ಇಂದು ಅತಿರುದ್ರ ಮಹಾಯಾಗ ಆಗಿದೆ. ಬರಗಾಲದಲ್ಲಿ ತತ್ತರಿಸಿರುವ ನಮ್ಮ ರೈತರು ನೆಮ್ಮದಿಯಿಂದ ಬದುಕಬೇಕು ಎಂದು ತಿಳಿಸಿದರು.

ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿ ಇದ್ದಾರೆ. ಮೋದಿ ಅವರು ಭಾರತ ಅಕ್ಕಿಯನ್ನು ಕಡಿಮೆ ಹಣಕ್ಕೆ ಕೊಟ್ಟಿದ್ದಾರೆ. ಪ್ರತಿ ಕೆಜಿಗೆ 29 ರೂಪಾಯಿಗೆ ಕೊಡ್ತಿದ್ದಾರೆ. ಅಕ್ಕಿಯನ್ನು ಎಷ್ಟು ಬೇಕಾದರೂ ಕೊಡ್ತೀವಿ ಎಲ್ಲರೂ ಉಪಯೋಗಿಸಿಕೊಳ್ಳಿ. ರಾಜ್ಯ ಸರಕಾರ ಅಕ್ಕಿ ಕೊಡ್ತೀವಿ ಅಂತೇಳಿ ದುಡ್ಡು ಕೊಡ್ತಿದೆ. ದುಡ್ಡು ಕೊಡುವುದರಿಂದ ಜನರ ಹೊಟ್ಟೆ ತುಂಬುವುದಿಲ್ಲ. ಜನರಿಗೆ ಹೊಟ್ಟೆ ತುಂಬಲು ಅಕ್ಕಿ ಬೇಕು ಅದನ್ನು ಮೋದಿ ಮಾಡ್ತಿದ್ದಾರೆ ಎಂದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ಎಸ್ಕೇಪ್ ವಿಚಾರದ ಪ್ರತಿಕ್ರಿಯಿಸಿದ ಸಂಸದರು, ನಮ್ಮ ಪೊಲೀಸ್ ಇಲಾಖೆ ಬಗ್ಗೆ ನಮಗೆ ವಿಶ್ವಾಸ ಇದೆ. ಪೊಲೀಸರ ಕಣ್ತಪ್ಪಿಸಿಕೊಂಡು ಹೋಗುವ ಕೆಲಸ ಏನು ಮಾಡಿದ್ದಾರೆ ಮತ್ತೆ ಹಿಡಿದು ಒಳಗೆ ಹಾಕ್ತಾರೆ. ನೀನು ಅತ್ತಾಗೆ ಮಾಡು ನಾನು ಚಿವುಟುವ ಹಾಗೆ ಮಾಡ್ತೀನಿ ಎನ್ನುವ ರೀತಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೋ ನಿಜವಾಗಿಯೂ ತಪ್ಪಿಸಿಕೊಂಡು ಹೋಗಿದ್ದಾನೋ ಎಂಬ ಬಗ್ಗೆ ತನಿಖೆ ಆಗಬೇಕು ಎಂದರು.

ಹೆಬ್ಬಾರ್, ಸೋಮಶೇಖರ್ ಬಿಜೆಪಿ ಸೇರ್ಪಡೆ ಡಿಕೆಶಿ ಹೇಳಿಕೆ ವಿಚಾರದಲ್ಲಿ ಉತ್ತರ ನೀಡಿದ ಸಂಸದರು, ಹೆತ್ತ ತಾಯಿ ಬೇರೆ ಅಲ್ಲ ಆಶೀರ್ವಾದ ಮಾಡಿದ ಪಕ್ಷಕ್ಕೆ ದ್ರೋಹ ಮಾಡುವಂತಹ ಕೆಲಸ ಯಾರು ಮಾಡಬಾರದು. ಚುನಾವಣೆ ನಂತರ ಸಾಕಷ್ಟು ಬದಲಾವಣೆ ನೋಡ್ತಿದ್ದೇವೆ ಎಂದರು.

ನನ್ನ ಉಪ ಮುಖ್ಯಮಂತ್ರಿ ಮಾಡುವ ಕಾರ್ಯ ಚುನಾವಣೆ ನಂತರ ಆರಂಭ ಮಾಡ್ತೇನೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ರೀತಿ ಭಿನ್ನ ಧ್ವನಿ ಸಾಕಷ್ಟು ಇದೆ. ಬೇರೆ ಬೇರೆ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಈ ಸರಕಾರ ಬಹಳ ದಿನ ಇರುತ್ತದೆ ಅನಿಸಲ್ಲ ಎಂದರು.

ಲೋಕಸಭಾ ಟಿಕೇಟ್ ಗೆ ಕಾಂಗ್ರೆಸ್ ಹಣ ಪಡೆಯುತ್ತಿರುವ ವಿಚಾರದಲ್ಲಿ ಮಾತನಾಡಿದ ರಾಘವೇಂದ್ರ, ಈ ವಿಷಯವನ್ನು ಲೇಟಾಗಿ ಆರೋಪ ಮಾಡ್ತಿದ್ದಾರೆ. ಈ ಸತ್ಯ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಸ್ಥಾನ ಮಾನ ಸಿಗಬೇಕಾದರೆ ಫೇಮೆಂಟ್ ಇಲ್ಲದೇ ಯಾವುದೂ ನಡೆಯಲ್ಲ ಎಂಬುದು ಜಗಜ್ಜಾಹೀರುವಾಗಿದೆ ಎಂದರು.

ಡಿಕೆಶಿ ಪ್ರಕರಣ ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ನಮ್ಮ ದೇಶದಲ್ಲಿ ಎಲ್ಲರಿಗೂ ಇರೋದು ನ್ಯಾಯಾಲಯ, ತನಿಖಾ ಸಂಸ್ಥೆ ಯಾರಿಗೂ ಒಳ್ಳೆಯದಾದರೆ ಒಳ್ಳೆಯದಾಗಲಿ ಎಂದರು.

ಇದನ್ನೂ ಓದಿ-https://suddilive.in/archives/10183

Related Articles

Leave a Reply

Your email address will not be published. Required fields are marked *

Back to top button