ಸ್ಥಳೀಯ ಸುದ್ದಿಗಳು

ಫ್ರೀಡಂ ಪಾರ್ಕ್ ನ ವಾಕಿಂಗ್ ಪಾತ್ ನಲ್ಲಿ ಯುವಕನ ಮೇಲೆ ಮಾರಕಾಸ್ತ್ರದಿಂದ ದಾಳಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕನಲ್ಲಿ ಶಶಿ ಎಂಬಾತನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ವ್ಯಕ್ತಿ ಶಶಿ ಎಂಬಾತನ  ಮೈ ರಕ್ತಸಿಕ್ತವಾಗಿದೆ. ಹೊಟ್ಟೆಯಲ್ಲಿದ್ದ ಕರಳುಪಚ್ಚಿ ಹೊರಬಿದ್ದಿದೆ.

ಫ್ರೀಡಂ ಪಾರ್ಕ್ ನಲ್ಲಿರುವ ವಾಕಿಂಗ್ ಪಾತ್ ನ ಮೇಲೆ ಶಶಿ ಎಂಬ ಯುವಕ ನಡೆದುಕೊಂಡು ಹೋದಾಗ ಬೈಕ್ ನಲ್ಲಿ ಬಂದ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸಧ್ಯಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಬಜಾವ್ ಆಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಶಿವಮೊಗ್ಗದ ಜಟ್ ಪಟ್ ನಗರದಲ್ಲಿ ನಿನ್ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾದ ಹಾಡಿನ ವಿಚಾರದಲ್ಲಿ ಶಶಿ ಮತ್ತು ಇತರರ ನಡುವೆ ಮನಸ್ತಾಪವಾಗಿದೆ. ಮನಸ್ತಾಪವಾದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 12 ಗಂಟೆಗೆ ಹಲ್ಲೆ ನಡೆದಿದೆ.

ಈ ಕುರಿತು ಸುದ್ದಿಲೈವ್ ಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಹಲ್ಲೆಗೊಳಗಾದ ಶಶಿ ನಡೆಸಿದವರ ಗ್ಯಾಂಗ್ ನ ಹೆಸರನ್ನ ಹೇಳಿದ್ದಾನೆ. ಮೂವರ ಹೆಸರನ್ನ ತಹಶೀಲ್ದಾರ್ ಮುಂದೆ ರೆಕಾರ್ಡ್ ಮಾಡಲಾಗುವುದು. ಸಧ್ಯದಲ್ಲಿಯೇ ಮಾಧ್ಯಮಗಳಿಗೆ ಹೆಸರನ್ನ‌ ಬಹಿರಂಗಗೊಳಿಸಲಾಗುವುದು ಎಂದಿದ್ದಾರೆ.

ಶಶಿಯ ವಿರುದ್ಧ ಪ್ರಕರಣಗಳಿವೆ ಎಂಬ ಮಾಹಿತಿಯೂ ಹೊರಬರಬೇಕಿ. ವಿನೋಬನಗರದ  ಆರ್ ಒಬಿ ಗ್ಯಾಂಗ್ ವೊಂದು ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ತಣ್ಣಗಾಗಿದ್ದ ಶಿವಮೊಗ್ಗದ ರೌಡಿಸಂ  ತಲೆ ಎತ್ತಿದಂತಾಗಿದೆ. ಶಶಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5441

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373