ಚಾಲಕನ ನಿರ್ಲಕ್ಷ ಬಸ್ ಪಲ್ಟಿ-ತ್ಯಾವರೆಕೊಪ್ಪದ ಬಳಿ ಕಾರು ಪಲ್ಟಿ

ಸುದ್ದಿಲೈವ್/ಹೊಳೆಹೊನ್ನೂರು/ಶಿವಮೊಗ್ಗ

ಎರಡು ಪ್ರತ್ಯೇಕ ರಸ್ತೆ ಅಪಘಾತಸಂಭವಿಸಿದೆ. ಒಂದು ಹೊಳೆಹೊನ್ಬೂರಿನ ಕಲ್ಲಿಹಾಳಿನ ಸಮೀಪ ಬಸ್ ಪಲ್ಟಿ ಆದರೆ ಶಿವಮೊಗ್ಗದ ತ್ಯಾವರೆಕೊಪ್ಪದ ಬಳಿ ಕಾರೊಂದು ಪಲ್ಟಿಯಾಗಿದೆ. ಸಮೀಪದ ಅರಹತೊಳಲು ಕಲ್ಲಿಹಾಳಿನ ನಡುವೆ ಖಾಸಗೀ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಯಲ್ಲಿ ಬಿದ್ದಿದೆ.
ಬಸ್‌ನಲ್ಲಿ ಕೇವಲ ಆರು ಜನ ಪ್ರಯಾಣಿಕರು ಇದ್ದು ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಾರಶೆಟ್ಟಿಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಬಸ್ ಚಾಲಕ ಪೋನ್‌ನಲ್ಲಿ ಮಾತನಾಡಿಕೊಂಡು ಬಸ್ ಚಲಾಯಿಸುತ್ತಿದ್ದ, ಚಾಲಕನ ಅಜಾಗರೂಕತೆಯಿಂದ ಬಸ್ ಪಲ್ಟಿಯಾಯಿತು ಎಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಿಂದ ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮದ ಜನರು ಸ್ಥಳಕ್ಕೆ ಜಮಾಯಿಸಿದರು. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಆಯಿತು. ನಂತರ ಜೆಸಿಬಿ ಹಾಗೂ ಕ್ರೇನ್ ತರಿಸಿ ಬಸ್‌ನ್ನು ಹೊರ ತಗೆಯಲಾಯಿತು.
ತ್ಯಾವರೆಕೊಪ್ಪದ ಬಳಿ ಸಿಫ್ಟ್ ಕಾರು ಪಲ್ಟಿ
ಶಿವಮೊಗ್ಗದ ತ್ಯಾವರೆಕೊಪ್ಪದ ಬಳಿ ಸಿಫ್ಟ್ ಕಾರೊಂದು ಪಲ್ಟಿ ಹೊಡೆದಿದೆ. ಕಾರಿನಲ್ಲಿ ಇದ್ದ ಮೂವರಿಗೆ ಗಾಯವಾಗಿದೆ. ಈ ತೀವ್ರಗತಿಯಲ್ಲಾದ ಕಾರು ಪಲ್ಟಿ ಘಟನೆ ಇಂದು ಬೆಳಿಗ್ಗೆ 8 ಗಂಟೆಗೆ ಸಂಭವಿಸಿದೆ. ಆದರೆ ಹತ್ತಿರದ ಪೊಲೀಸ್ ಠಾಣೆಗೆ ಯಾರೂ ಮಾಹಿತಿ ನೀಡಿಲ್ಲದ ಕಾರಣ ಘಟನೆ ಬಗ್ಗೆ ಅಸ್ಪಷ್ಟ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ-https://suddilive.in/archives/2775
