ಸ್ಥಳೀಯ ಸುದ್ದಿಗಳು

ಪಾಕ್ ಪರ ಘೋಷಣೆ ಕೂಗುವವರಿಗೆ ಸಹಕಾರ ನೀಡುವವರು ಯಾರು?

ಸುದ್ದಿಲೈವ್/ಶಿವಮೊಗ್ಗ

ಕೇವಲ ಮುಸ್ಲಿಂರ ಓಟು ಬೇಕು ಅನ್ನುವ ಒಂದೇ ಕಾರಣಕ್ಕೆ ಪಾಕಿಸ್ತಾನ ಪರ ಇರುವ ವ್ಯಕ್ತಿಗಳಿಗೆ ಬೆಂಬಲ ಕೊಡ್ತೀವಿ ಅನ್ನೋದು ನಮ್ಮ ದೌರ್ಭಾಗ್ಯ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

ಅವರು ಮಾಧ್ಯಮಗಳಿಗೆ ಮಾತನಾಡಿ, ಪಾಕಿಸ್ತಾನ ಜಿಂದಾಬಾದ್ ಪರವಾಗಿ ಕಾಂಗ್ರೆಸ್ ನವರು ಇದ್ದರು. ನೇರವಾಗಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿಲ್ಲ ಅಂತಾ ಡಿಕೆಶಿ, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದರು. ಒಬ್ಬ ಕಾಂಗ್ರೆಸ್ ನಾಯಕರು ಕೂಡಾ ಖಂಡನೆ ಮಾಡಲಿಲ್ಲ. ಇದು ಅವರ ಮನಸ್ಥಿತಿ ಕೇವಲ ಮುಸ್ಲಿಂರ ಓಟು ಬೇಕು ಅನ್ನುವ ಒಂದೇ ಕಾರಣಕ್ಕೆ ಪಾಕಿಸ್ತಾನ ಪರ ಇರುವ ವ್ಯಕ್ತಿಗಳಿಗೆ ಬೆಂಬಲ ಕೊಡ್ತೀವಿ ಅನ್ನೋದು ನಮ್ಮ ದೌರ್ಭಾಗ್ಯ ಎಂದರು.‌

ಮಲ್ಲಿಕಾರ್ಜುನ್ ಖರ್ಗೆಗೆ ಪ್ರಿಯಾಂಕ್ ಹುಟ್ಟಬಾರದಿತ್ತು

ಎಫ್ ಎಸ್ ಎಲ್ ವರದಿ ಬರಲಿ ಅಂತಿದ್ದರು. ಪರಮೇಶ್ವರ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಾರೆ ಅಂತಿದ್ದಾರೆ. ಪರಮೇಶ್ವರ ಸಿಎಂ ರಾಷ್ಟ್ರ ದ್ರೋಹಿಗಳ ರಕ್ಷಣೆ ಮಾಡಲ್ಲ ಅಂದಿದ್ದರು. ಪರಮೇಶ್ವರ, ಸಿದ್ದರಾಮಯ್ಯ ಅವರಿಗೆ ಅಭಿನಂದಿಸುತ್ತೇನೆ.ಪರಮೇಶ್ವರ, ಸಿಎಂ ಬಿಟ್ಟು ಬೇರೆಯವರು ಎಲ್ಲಾ ಬೇರೆ ಮಾತನಾಡಿದ್ರು. ಡಿಕೆಶಿ ಈಗ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಅಂತಹವರಿಗೆ ಪ್ರಿಯಾಂಕ ‌ಖರ್ಗೆ ಅಂತಹವರು ಹುಟ್ಟಿರುವುದೇ ಒಂದು ಅನ್ಯಾಯ. ಪ್ರಿಯಾಂಕ ಖರ್ಗೆ ಅವರು ಯಾವುದೇ ಕಾರಣಕ್ಕು ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿಲ್ಲ ಅಂದಿದ್ದರು. ಈಗ ಏನು ಹೇಳ್ತಾರೆ ಎಂದರು.

ಘೋಷಣೆ ಕೂಗಿದವರಿಗೆ ಸಹಕಾರ ಕೊಟ್ಟವರು ಯಾರು?

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ಎ2 ಆರೋಪಿ ಕುಟುಂಬ ಸಮೇತ ಓಡಿ ಹೋಗಿದ್ದಾನೆ. ಅವನು‌ ಓಡಿ ಹೋಗಲು ಯಾರು ಕಾರಣ? ಪೊಲೀಸರ ವೈಪಲ್ಯವಾ, ರಾಜ್ಯ ಸರಕಾರ ಸಹಕಾರ ಕೊಟ್ಟಿದೆಯಾ? ಪಾಕಿಸ್ತಾನ ಪರವಾಗಿ ಇರುವ ವ್ಯಕ್ತಿಗಳು ಸಹಕಾರ ಕೊಟ್ಟಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದರು.‌

ಪಾಕಿಸ್ತಾನ ಜಿಂದಾಬಾದ್ ಕೂಗಿಯೇ ಇಲ್ಲ ಅಂದ್ರಲ್ಲ ಡಿಕೆಶಿ ಅವರು ಏನಾದರೂ ಸಹಕಾರ ಕೊಟ್ಡಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದ ಈಶ್ವರಪ್ಪ, ಕರ್ನಾಟಕ ರಾಜ್ಯ ರಾಷ್ಟ್ರ ದ್ರೋಹಿಗಳ ತಾಣ ಆಗ್ತಿದೆ. ಪಾಕಿಸ್ತಾನ ಪರ ಘೋಷಣೆ, ಬಾಂಬ್ ಬ್ಲಾಸ್ಟ್ ರಾಜ್ಯದಲ್ಲಿ ಮಾಮೂಲಿ ಆಗಿರೋದು ರಾಜ್ಯದ ಜನತೆಗೆ ಮಾಡಿರುವ  ಅಪಮಾನ ಎಂದು ಗುಟರ್ ಹಾಕಿದರು.

ಎರಡು ವರ್ಷದ ನಂತರ ಕ್ರಮ

ಪಾಕಿಸ್ತಾನ ಪರ ಘೋಷಣೆ ಕೂಗಿದವರು, ಬ್ಲಾಸ್ಟ್ ಮಾಡಿದವರ ಪರ ಬೆಂಬಲ ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಮಂಡ್ಯದಲ್ಲಿ ಬಾಯ್ತಪ್ಪಿ ಕಾರ್ಯಕರ್ತರ ಹೇಳಿದ್ದಾನೆ. ಅವನ ವಿರುದ್ದ ಇಲ್ಲಿಯವರೆಗೆ ಯಾವುದೇ ಕ್ರಮ ಇರಲಿಲ್ಲ

ಕಾಂಗ್ರೆಸ್ ಸರಕಾರಕ್ಕೆ ಅಪಮಾನ ಆಯ್ತು ಎನ್ನುವ ‌ಕಾರಣಕ್ಕೆ ಮಂಡ್ಯದಲ್ಲಿ ನಡೆದ ಘಟನೆ ಎರಡು ವರ್ಷವಾದ ಮೇಲೆ  ಈ ರೀತಿ ಮಾಡಿದ್ದಾರೆ. ಯಾವೊಬ್ಬ ಬಿಜೆಪಿ ಕಾರ್ಯಕರ್ತ ರಾಷ್ಟ್ರ ದ್ರೋಹಿ ಹೇಳಿಕೆ ಕೊಡಲು ಸಾಧ್ಯವಿಲ್ಲ ಎಂದರು.

ಹೆಬ್ಬಾರ್, ಎಸ್.ಟಿ.ಸೋಮಶೇಖರ್ ನಂತರ ಸಾಕಷ್ಟು ಜನ ಕಾಂಗ್ರೆಸ್ ಗೆ ಬರುತ್ತಾರೆ ಎಂದು  ಡಿಕೆಶಿ ಹೇಳಿಕೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಆದಾಗ ಡಿಕೆಶಿ ಬಿಜೆಪಿಯ ಅರ್ಧಕ್ಕಿಂತ ಹೆಚ್ಚು‌ ಜನ ಕಾಂಗ್ರೆಸ್ ಗೆ ಬರುತ್ತಾರೆ ಅಂದ್ರು ಹೆಬ್ಬಾರ್, ಸೋಮಶೇಖರ್ ರಾಜ್ಯಸಭೆ ಚುನಾವಣೆ ವೇಳೆ ಗೈರಾದರು. ಅವರು ಬಿಟ್ಟು ಇನ್ನು ಯಾರು ಬಿಜೆಪಿ ಬಿಟ್ಟು ಹೋಗಲ್ಲ. ಮುಳುಗಿ ಹೋಗ್ತಿರುವ ಹಡಗಿಗೆ ಯಾರು ಹೋಗ್ತಾರೆ? ಕಾಂಗ್ರೆಸ್ ನವರು ಅವರ ಪಕ್ಷ ಬಿಟ್ಟು ಬರುವವರನ್ನು ಹಿಡಿದಿಟ್ಟುಕೊಳ್ಳಲಿ. ಯಾರು ಬಿಜೆಪಿ ಬಿಟ್ಟು ಹೋಗಲ್ಲ ಎಂದರು.

100 ಕೋಟಿ ಬಗ್ಗೆ ತನಿಖೆಯಾಗಲಿ

ಕಾಂಗ್ರೆಸ್ ನಲ್ಲಿ ಟಿಕೇಟ್ ಪಡೆಯಲು 100 ಕೋಟಿ ಕೊಡಬೇಕು ಎಂಬ ಆ ಪಕ್ಷದ ಶಾಸಕನ  ಆರೋಪದ ಬಗ್ಗೆನೂ ಪ್ರತಿಕ್ರಿಯಿಸಿದ ಈಶ್ವರಪ್ಪ, 100 ಕೋಟಿ ಯಾರಿಗೆ ಕೊಡಬೇಕು ಯಾರು ತಗೊಂಡಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು.100 ಕೋಟಿ ಯಾರಿಗೆ ತಲುಪುತ್ತಿದೆ ಎಂಬ ಬಗ್ಗೆ ಸಿಎಂ ಡಿಸಿಎಂ ಹೇಳಲಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 28 ಕ್ಕೆ 28 ಸ್ಥಾನದಲ್ಲಿ ಗೆಲ್ಲುತ್ತದೆ. ಮೋದಿ ಪ್ರಧಾನಮಂತ್ರಿ ಆಗ್ತರ ಎಙದ ಈಶ್ವರಪ್ಪ, ಡಿಕೆಶಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವ ಬಗ್ಗೆ ನಾನು ಪ್ರಶ್ನೆ ಮಾಡಲ್ಲ ಸ್ವಾಗತ ಮಾಡ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/10188

Related Articles

Leave a Reply

Your email address will not be published. Required fields are marked *

Back to top button