112 ಪೊಲೀಸರಿಗೆ ಬೆದರಿಸಿ ಕರ್ತವ್ಯಕ್ಕೆ ಅಡ್ಡಿ ಸುಮೋಟೋ ಪ್ರಕರಣ ದಾಖಲು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಗಣೇಶ್ ಕಾಲೋನಿಯಲ್ಲಿ ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ಆಯುಧಗಳನ್ನ ಹಿಡಿದು 112 ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ರಾಹುಲ್ ಎಂಬ ಯುವಕ ಗಣೇಶ್ ಕಾಲೋನಿಯಲ್ಲಿ ತನ್ನ ಕುಟಿಂಬದೊಂಡನೆ ಗಲಾಟೆ ಮಾಡಿಕೊಂಡು ಕೈಯಲ್ಲಿ ಮಾರಕ ಆಯುಧವಾದ ಮಚ್ಚನ್ನು ಹಿಡಿದು ಸಾರ್ವಜನಿಕವಾಗಿ ಭಯ ಹುಟ್ಟಿಸುವಂತೆ ವರ್ತಿಸುತ್ತಿದ್ದನು. ಸುರೇಶ್ ಅವರ ಮಗನಾದ ರಾಹುಲ್ ತಂದೆಯಬಳಿಯೇ ಗಲಾಟೆ ಮಾಡಿಕೊಂಡು ಅವರಿಗೆ ಹೊಡೆದು ಆಯುಧಗಳನ್ನ ಹಿಡಿದು ನಿಂತಿದ್ದನು.
ಕರೆ ಮಾಡಿದ ಮೇರೆಗೆ ಸ್ಥಳಕ್ಕೆ ಧಾವಿಸಿದ 112 ಕರ್ತವ್ಯದಲ್ಲಿದ್ದ ಪೊಲೀಸರು ತಿಳುವಳಿಕೆ ನೀಡಲು ಆತನ ಬಳಿ ಹೋಗುತ್ತಿದ್ದಂತೆ ಅವರ ಮೇಲೂ ಅವ್ಯಾಚ್ಯ ಶಬ್ಧಗಳಿಂದ ಬೈಯಲು ಆರಂಭಿಸಿ ಕುಟುಂಬದ ವಿಷಯಕ್ಕೆ ಬಂದರೆ ಸುಮ್ಮನಿರೊಲ್ಲ ಎಂದು ಧಮ್ಕಿ ಹಾಕಿದ್ದಾನೆ. ಆತನನ್ನ ತಡೆದು ಆಯುಧ ಕಿತ್ತುಕೊಳ್ಳಲು ಮುಂದಾದ 112 ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಮಚ್ಚು ಕೆಳಗೆ ಬಿದ್ದಿದೆ. ಹತ್ತಿರ ಬಂದರೆ ಸುಮ್ಮನಿರೊಲ್ಲ ಎನ್ನುತ್ತಿದ್ದ ರಾಹುಲ್ ವರ್ತನೆಕಂಡು 112 ಪೊಲೀಸರು ತಕ್ಕಣ ಬೀಟ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಬೀಟ್ ಪೊಲೀಸರು ಬರುತ್ತಿದ್ದನ್ನ ನೋಡಿದ ರಾಹುಲ್ ಪರಾರಿಯಾಗಿದ್ದಾನೆ.
112 ನ ಎಆರ್ ಎಸ್ ನ ಸುರೇಶ್ ಮತ್ತು ಉಮಾಪತಿಯವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭಯಹುಟ್ಟಿಸುವಂತೆ ಸಾರ್ವಜನಿಕ ಸ್ಥಳದಲ್ಲಿ ಓಡಾಡಿದ ರಾಹುಲ್ ವಿರುದ್ಧ ಕ್ರಮಕೂಗೊಳ್ಳುವಂತೆ ಭದ್ರಾವತಿನ್ಯೂಟೌನ್ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/2006
