ಕ್ರೈಂ ನ್ಯೂಸ್

ಗೋಕುಲ್ ಕೃಷ್ಣನ್ ಹಲ್ಲೆ ಕುರಿತು ಈಶ್ವರಪ್ಪ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯಲ್ಲಿ ನಡೆದಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಗೋಕುಲ್ ನಡುವಿನ ಗಲಾಟೆ ರಾಜಕಾರಣಕ್ಕೆ ತಿರುಗಿದೆ. ಇಂದು ಮಾಜಿ ಸಚಿವ ಈಶ್ವರಪ್ಪ ಶಾಸಕ ಚೆನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ನಂತರ ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ ಶಾಂತ್ರಿ ನೆಲೆಸಿದ್ದ ಕರ್ನಾಟಕ ರಾಜ್ಯ ಕೊಲೆಗಡುಕ, ಗೂಂಡ ಮತ್ತು ಭಯೋತ್ಪಾದಕ ರಾಜ್ಯವಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆತಂಕ ಪಡಿಸಿದರು.

68 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಈ ಬಗ್ಗೆ ಸಿಎಂ ಉಪಮುಖ್ಯಮಂತ್ರಿಗಳಿಗೆ ಸೀರಿಯಸ್ ನೆಸ್ ಇಲ್ಲದಂತಾಗಿದೆ. ಈ ಪ್ರಕರಣಗಳು ಎನ್ ಐಎ  ಗೆ ನೀಡದಿರುವುದು ದುರಂತ ಎಂದರು.

ರಾಷ್ಟ್ರದ ಭದ್ರತಾಪಡೆ ಭಯೋತ್ಪಾದಕತೆಯನ್ನೇ ಮೆಟ್ಟಿ ನಿಂತಿದೆ. ಅತಿಹೆಚ್ಚು ಮುಸ್ಲೀರಲ್ಲಿ ಹೆಚ್ಚಿನ ಜನ ಭಯೋತ್ಪಾದಕರಿದ್ದಾರೆ. ಈ ಮತಗಳು ಹೋಗಿಬಿಡುತ್ತದೆ ಎಂಬ ಕಾರಣದಿಂದ ಕಾಂಗ್ರೆಸ್ ಮತ ಬ್ಯಾಂಕ್ ಗೆ  ಹೆದರಿದೆ. ಸಚಿವ ಜಮೀರ್ ಬಿಜೆಪಿಯವರು ಒಬ್ಬ ಮುಸ್ಲೀಂ ಸ್ಪೀಕರ್ ಗೆ ನಮಸ್ಕರಿಸುವಂತಾಗಿದೆ ಎಂದು ಒಂದು ಸಮುದಾಯವನ್ನ ಎತ್ತಿಕಟ್ಟಿ ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದಿದೆ ಎಂದರು.

ಗಾಂಜಾ, ಮಟ್ಕಾ, ಡ್ರಗ್ಸ್ ರಾಜ್ಯದ ಯುವಕರನ್ನ ತೇಲ್ತಾ ಇದ್ದಾರೆ. ಇದಕ್ಕೆ ನೇರ ಕಾರಣ ರಾಜ್ಯ ಸರ್ಕಾರವಾಗಿದೆ. ಭದ್ರಾವತಿಯಲ್ಲಿ ನಡೆದ ಘಟನೆಯೂ ಸಹ ಈ ಅಮಲಿನ ಕಾರಣಕ್ಕೆ ನಡೆದಿದೆ. ಶಾಸಕರ ಮಗನ ಕುಮ್ಮಕ್ಕಿದೆ. ಪೊಲೀಸರು ನಿಷ್ಪ್ರಯೋಜಕತನ ತೋರಿದೆ. ಕೊಲೆಗಡುಕರಿಂದ ಅಡಿಕೆ ವ್ಯಾಪಾರಸ್ಥರಿಂದ ದರೋಡೆ ನಡೆಯುತ್ತಿದೆ ಎಂದು ದೂರಿದರು.

ಮಾರಕಾಸ್ತ್ರ ತೋರಿಸಿ ಹಣ ದೋಚಿಕೊಂಡು ಹೋದರು ಪೊಲೀಸರ ನಿಷ್ಪ್ರ್ರೋಜಕತೆ ತೋರಿದ್ದಾರೆ. ಗೂಂಡಾ ರಾಜ್ಯವಾದರೂ ಗೃಹಸಚಿವರು ಸಿಎಂ ಮೌನರಾಗಿದ್ದಾರೆ. ಮತಹಾಕಿರುವುದು ಜನರಿಗೆ ರಕ್ಷಣೆ ಕೊಡಿ ಎಂದು ಆದರೆ ಭಯೋತ್ಪಾದಕರಿಗೆ, ಗೂಂಡಾಗಳಿಗೆ ರಕ್ಷಣೆ ನೀಡಿತ್ಯಿದ್ದಾರೆ. ರಾಜ್ಯದ ರೈತ ಬರಗಾಲದಲ್ಲಿ ತತ್ತರಿಸಿದ್ದಾನೆ. ಆದರೆ ಮುಸ್ಲೀಂ‌ಗೆ 10 ಸಾವಿರ ಕೋಟಿ ಕೊಡ್ತೀನಿ ಎಂದು ಸಿಎಂ ಹೇಳ್ತಾರೆ ಇದು ಎಂಥ ರಾಜ್ಯ ಎಂದು ಅಸಮಾಧಾನ ತೋರಿದರು.

ಒಳ್ಳೆಯ ಕೆಲಸ ಮಾಡಿ ಅದರಿಂದ ಜನ ನೆನಪಿಟ್ಟುಕೊಳ್ಳುವ ಆಡಳಿತಕೊಡಿ ಎಂದು ಸಲಹೆ ನೀಡಿದೆ. ವಿಶ್ವದ ಮುಂದೆ ತಕೆ ಎತ್ತುವಂತೆ ನೀಡಿದ ಸುಪ್ರೀಂ ತೀರ್ಪು ಮೋದಿಯ 370 ಅರ್ಟಿಕಲ್ ರದ್ದು ಎಂದು ಎತ್ತಿಹಿಡಿದಿರುವುದು ಅತ್ಯಙತ ಸಂತೋಷತಂದಿದೆ. ಒಂದು ದೇಶದಲ್ಲಿ ಎರಡು ಪ್ರಧಾನಿ, ಇರಬಾರದು ಎಂದಿದ್ದ ಡಾ.ಧೀನ್ ದಯಾಳು ಉಪಾಧೈ, ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿ ಅವರ ಆತ್ಮಕ್ಕೆ ಸಂತೋಷ ತಂದಿದೆ ಎಂದು ಈಶ್ವರಪ್ಪ ತಿಳಿಸಿದರು.
.
ಭದ್ರಾವತಿ ಘಟನೆ ಬಗ್ಗೆ ಪೊಲೀಸರು ಪರಾರಿ ಆದ ಆರೋಪಿಗಳು ಮತ್ತು ಘಟನೆ ಹಿಂದೆ ಇರುವ ವ್ಯಕ್ತಿಗಳನ್ನ‌ಬಂಧಿಸಬೇಕು. ಹಲ್ಲೆ ಮೂಲಕ ಬಿಜೆಪಿ ಯನ್ನ‌ಹತ್ತಿಕ್ಕುತ್ತೇವೆ ಎಂಬ ಕಾಂಗ್ರೆಸ್ ಗೆ ಜಯಸಿಗೊಲ್ಲವೆಂದು ಗುಡುಗಿದರು‌.

ಯತ್ನಾಳ್ ತಿದ್ದಿಕೊಳ್ತಾರೆ

ಯತ್ನಾಳ್ ರನ್ನ ಜೀರ್ಣ ಮಾಡಿಕೊಳ್ಳುವ ಸಾಮಾರ್ಥ್ಯ ಬಿಜೆಪಿಗೆ ಇದೆ. ನಾಲ್ಕು ಗೋಡೆಯ ಮಧ್ಯೆ ಚರ್ಚೆ ನಡೆದು ಸರಿಪಡಿಸಲಾಗುವುದು. ನಿನ್ನ ಮನಸ್ಸಿನ ಬಿಜೆಪಿಯಲ್ಲಿ ವ್ಯವಸ್ಥೆ ಇದೆ. ಎಲ್ಲರೂ ಬಗ್ಗಬೇಕು. ಯತ್ನಾಳ್ ಮಾತನಾಡುತ್ತಿರುವುದು ತಪ್ಪ, ಯತ್ನಾಳ್ ಎಲ್ಲಿ ಹೇಳಬೇಕೋ ಅಲ್ಲಿ ಹೇಳಬೇಕು. ಬಹಿರಂಗ ಹೇಳಿಕೆ ಸರಿಯಲ್ಲ ಎಂದುಬುದ್ದಿವಾದ ಹೇಳಿದರು.

ಬಾಕಸ ನ್ಯೂಸ್ ಪ್ರಿಯಾಂಕ್ ಖರ್ಗೆ

ತಾಕತ್ತಿದ್ದರೆ ವೀರ ಸಾವರ್ಕರ್ ಫೋಟೊ ಮುಟ್ಟಲಿ ನೋಡೋಣ ಅವತ್ತೆ ಸರ್ಕಾರ ಪಥನವಾಗಲಿದೆ ಎಂದು ಸಚಿವ ಮಲ್ಲಿಕಾರ್ಜಯನ ಖರ್ಗೆಗೆ ಟಾಂಕ್ ನೀಡಿದರು. ಬೆಳಗಾವಿ ಅಧಿವೇಶನದಲ್ಲಿ  ವೀರ ಸಾವರ್ಕರ್ ಫೋಟೊ ಉದ್ಘಾಟನೆಗೆ ಬಂದಿದ್ದ ಪ್ರಿಯಾಂಕ್ ಖರ್ಗೆ  ಅವತ್ತೇ ಬಸಯ್ ಕಟ್ ಮಾಡಬೇಕಿತ್ತು. ಯಾಕೆ ಮಾಡಲಿಲ್ಲ. ಬಾಕ್ಸ್ ನ್ಯೂಸ್ ನ ವೀರ ಈ ಪ್ರಿಯಾಂಕ್ ಖರ್ಗೆ ಎಂದು ಗುಡುಗಿದರು.

ಇದನ್ನೂ ಓದಿ-https://suddilive.in/archives/4768

Related Articles

Leave a Reply

Your email address will not be published. Required fields are marked *

Back to top button